ಉಡುಪಿ: ಹಾವುಗಳು ಅಂದ್ರೆನೇ ಎಲ್ಲರಿಗೂ ಕುತೂಹಲ. ಅದ್ರಲ್ಲೂ ರಾಶಿ ರಾಶಿ ಹಾವುಗಳು ಒಂದೇ ಕಡೆ ಕಾಣಿಸಿಕೊಂಡ್ರೆ! ಇಂತಹದೊಂದು ದೃಶ್ಯ ಜಿಲ್ಲೆಯ ಅಂಬಾಗಿಲು ಸಮೀಪದ ಪುತ್ತೂರಿನಲ್ಲಿ ಕಂಡುಬಂದಿದೆ.
ಈ ದೃಶ್ಯದಲ್ಲಿರೋದು ವಿಷರಹಿತ ಹಾವುಗಳು. ಕೋಮಲವಾಗಿ ಹಿಡಿದರೆ ಕಚ್ಚುವುದೂ ಇಲ್ಲ. ಸಾಮಾನ್ಯವಾಗಿ ಹಸಿರು ತೋಟ, ಹೊಲ-ಗದ್ದೆ ಮತ್ತು ಮನೆಯಂಗಳದ ಆಸುಪಾಸುಗಳಲ್ಲಿ ಹೆಚ್ಚಾಗಿ ಈ ಹಾವುಗಳು ವಾಸಿಸುತ್ತವೆ. ಈ ಹಾವಿಗೆ ಹಳದಿ ರೇಖೆಯ ಹುಲ್ಲು ಹಾವು, ಹಗಲಮರಿ, ನೈಬಾ, ತೊಡಂಬಳಕ ಅನ್ನೋ ಹೆಸರುಗಳಿವೆ. ಇಂಗ್ಲಿಷ್‍ನಲ್ಲಿ ಬಫ್ ಸ್ಟ್ರೈಪ್ಡ್ ಕೀಲ್ ಬ್ಯಾಕ್ ಅನ್ನೋ ಹೆಸರಿದೆ.
Advertisement
ವಿಶೇಷ ಏನೆಂದರೆ ಈ ಹಾವೊಂದು ಹಾನಿಗೊಂಡ ಅಥವಾ ಘಾಸಿಗೊಂಡ ತಕ್ಷಣ “ಫೆರೋಮೋನ್” ಎಂಬ ವಾಸನಾದ್ರವ್ಯವನ್ನು ಸ್ರವಿಸುತ್ತದೆ. ಆಗ ಆ ವಾಸನೆಗೆ ಆಕರ್ಷಿತವಾಗಿ ಅದೇ ಜಾತಿಯ ನೂರಾರು ಹಾವುಗಳು ಆ ಜಾಗಕ್ಕೆ ಬಂದು ಮುತ್ತಿಕೊಳ್ಳುತ್ತದೆ. ಆದರೆ ಯಾರಿಗೂ ಹಾನಿ ಮಾಡುವುದಿಲ್ಲ. ಮಾರ್ಚ್ ನಿಂದ ನವೆಂಬರ್ ವರೆಗೆ ಇವುಗಳ ವಂಶೋತ್ಪತ್ತಿಯಕಾಲ. ಒಂದು ಹೆಣ್ಣು ಹಾವಿನೊಂದಿಗೆ ಹಲವು ಗಂಡುಹಾವುಗಳು ಕಂಡುಬರುತ್ತವೆ. ಆದ್ದರಿಂದ ಅವನ್ನು ಕಂಡು ಯಾರೂ ಗಾಬರಿಯಾಗುವ ಅಗತ್ಯವಿಲ್ಲ ಎಂದು ಉಡುಪಿಯ ಉರಗ ತಜ್ಞ ಗುರುರಾಜ್ ಸನಿಲ್ ಮಾಹಿತಿ ನೀಡಿದ್ದಾರೆ.
Advertisement
ಆಕಸ್ಮಾತಾಗಿ ಇಂತಹ ಜಾತಿಯ ಹಾವುಗಳನ್ನು ಕಂಡಲ್ಲಿ ಅವುಗಳ ಕ್ರಿಯೆಗೆ ತೊಂದರೆ ಮಾಡದೆ ಬಿಟ್ಟುಬಿಡಿ ಎಂದು ಹೇಳಿದ್ದಾರೆ. ಈ ಹಾವುಗಳು ನಮ್ಮ ಸುತ್ತಮುತ್ತ ಅಧಿಕ ಸಂಖ್ಯೆಯಲ್ಲಿ ವಾಸಿಸುವುದರಿಂದ ಆಯಾ ಪರಿಸರದ ಸೂಕ್ಷ್ಮ ಜೀವರಾಶಿಗಳ ವಂಶೋತ್ಪತ್ತಿ ಹತೋಟಿಯಲ್ಲಿರುತ್ತದೆ. ಆ ಮೂಲಕ ಮಾನವರಿಗೆ ಸೋಕುವ ಅನೇಕ ರೋಗಗಳಿಂದ ಈ ಹಾವುಗಳು ನಮ್ಮನ್ನು ಸದಾ ರಕ್ಷಿಸುತ್ತಿರುತ್ತವೆ ಎಂದು ಮಾಹಿತಿ ನೀಡಿದ್ದಾರೆ.
Advertisement
https://www.youtube.com/watch?v=gb7C2f8PHN8