ಮಡಿಕೇರಿ: ಕೊಡಗು ಪ್ರವಾಹದ ಬಳಿಕ ಇದೀಗ ಜಿಲ್ಲೆಯಲ್ಲಿ ಮಳೆರಾಯ ಕೊಂಚ ಬಿಡುವು ನೀಡಿದ್ದು, ಸದ್ಯ ಶವಗಳ ಹುಡುಕಾಟ ನಡೆಯುತ್ತಿದೆ. ಈ ವೇಳೆ ವ್ಯಕ್ತಿಯೊಬ್ಬರು ತನ್ನ ಅಕ್ಕ ಹಾಗೂ ಮಗಳ ಶವವನ್ನು ಹುಡುಕಿಕೊಡುವಂತೆ ಕಣ್ಣೀರು ಹಾಕಿದ ದೃಶ್ಯ ಮನಕಲಕುವಂತಿತ್ತು.
ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ಜೋಡುಪಾಲ ಗುಡ್ಡ ಕುಸಿದು ನಾಲ್ವರು ಕೊಚ್ಚಿಹೋದ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನೂ ಇಬ್ಬರ ಮೃತದೇಹಗಳು ಪತ್ತೆಯಾಗಿಲ್ಲ. ಹೀಗಾಗಿ ಅಲ್ಲಿನ ನಿವಾಸಿ ಸೋಮಯ್ಯ ತನ್ನ ಮಗಳು ಹಾಗೂ ಅಕ್ಕನ ಶವಗಳನ್ನ ಹುಡುಕಿಕೊಡುವಂತೆ ಕಣ್ಣೀರು ಹಾಕುತ್ತಿದ್ದಾರೆ. ಇದನ್ನೂ ಓದಿ: ಮಗಳ ಮದುವೆಗೆ ಕೂಡಿಟ್ಟಿದ್ದ ಚಿನ್ನ, ಹಣ ಕೊನೆಗೂ ಪತ್ತೆ!
Advertisement
Advertisement
ಮಹಾಮಳೆಗೆ ಗುಡ್ಡ ಕುಸಿದು ಸೋಮಯ್ಯ ಮಗಳು ಮಂಜುಳಾ, ಅಕ್ಕ ಗೌರಮ್ಮ, ಬಾವಾ ಬಸಪ್ಪ, ಅಕ್ಕನ ಮಗಳು ಮೋನಿಷಾ ಕೊಚ್ಚಿಹೋಗಿದ್ದರು. ಆಗಸ್ಟ್ 17ರಂದು ಮನೆ ಸಮೇತ ಈ ನಾಲ್ವರು ನೀರಿನಲ್ಲಿ ಕೊಚ್ಚಿ ಹೋಗಿದ್ದರು. ಬಳಿಕ ಆಗಸ್ಟ್ 17ರಂದು ಬಸಪ್ಪ ಮೃತದೇಹ, ಆ.18ಕ್ಕೆ ಸಿಕ್ಕಿದ ಮೋನಿಷಾ ಶವ ಪತ್ತೆಯಾಗಿತ್ತು. ಆದ್ರೆ ಸೋಮಯ್ಯ ಮಗಳು ಹಾಗೂ ಅಕ್ಕನ ಮೃತದೇಹ ಇಲ್ಲಿಯವರೆಗೂ ಪತ್ತೆಯಾಗಿಲ್ಲ. ಇದನ್ನೂ ಓದಿ: ಕೊಡಗಿನಲ್ಲಿ 12 ದಿನಗಳ ಬಳಿಕ ಶಾಲೆಗಳು ಆರಂಭ- ಮಕ್ಕಳ ಸಂಖ್ಯೆ ಕಂಡು ಕಣ್ಣೀರಿಟ್ಟ ಶಿಕ್ಷಕರು
Advertisement
Advertisement
ವಿದ್ಯಾಭ್ಯಾಸಕ್ಕಾಗಿ ಮಗಳನ್ನ ಅಕ್ಕನ ಮನೆಯಲ್ಲಿ ಬಿಟ್ಟಿದ್ದೆ. ನಮ್ಮ ಮನೆಯಿಂದ ಶಾಲೆಗೆ ಹೋಗಬೇಕಾದ್ರೆ ಸುಮಾರು 4 ಕಿ.ಮೀ ನಡೆಯಬೇಕಿತ್ತು. ಅಲ್ಲದೇ ನಮ್ಮ ಗ್ರಾಮದಲ್ಲಿ ಒಂದೇ ಬಸ್ ಇರುವುದು. ಹೀಗಾಗಿ ನಾನು ಆಕೆಯನ್ನು ಅಕ್ಕನ ಮನೆಯಲ್ಲಿ ಶಾಲೆಗೆ ಹೋಗಲೆಂದು ಬಿಟ್ಟಿದ್ದೆ. ಆದ್ರೆ ಮೊನ್ನೆ ಗುಡ್ಡ ಕಲುಸಿತವಾಗಿದ್ದು, ಅಕ್ಕನ ಮೆನೆಯ ಹತ್ತಿರವಿದ್ದ ತೋಡು, ದೊಡ್ಡ ಹೊಳೆಯಾಗಿ ಬಂದು ಅವರ ಮನೆಯನ್ನೇ ಕೊಚ್ಚಿಕೊಂಡು ಹೋಗಿದೆ ಅಂತ ಭಾವುಕರಾದ್ರು. ಇದನ್ನೂ ಓದಿ: ಗುಡ್ಡದ ಮೇಲಿನಿಂದ ಹಡಗಿನಂತೆ ಚಲಿಸಿದ ಮನೆ: ಅಜ್ಜಿ, ಮೊಮ್ಮಗು ಪಾರಾದ ಕಥೆ ಓದಿ
ಸದ್ಯ ಕಾರ್ಯಾಚರಣೆ ನಡೆಯುತ್ತಿದೆ. ಆದ್ರೆ ಅಲ್ಲಿಗೆ ಹೋಗಲು ಸಾಧ್ಯವಾಗುತ್ತಿಲ್ಲ ಅಂತ ಕೇಳ್ಪಟ್ಟೆ. ಘಟನಾ ಪ್ರದೇಶಕ್ಕೆ ನಮಗೂ ಹೋಗಲು ಸಾಧ್ಯವಿಲ್ಲದಂತಾಗಿದೆ ಅಂತ ಸೋಮಯ್ಯ ಅವರು ಪಬ್ಲಿಕ್ ಟಿವಿ ಜೊತೆ ಮಾತನಾಡುತ್ತಾ ತನ್ನ ದುಃಖ ತೋಡಿಕೊಂಡಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv