ಬೆಂಗಳೂರು: ನಗರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಿಜಿ (ಪೇಯಿಂಗ್ ಗೆಸ್ಟ್) ಗಳಿವೆ. ಕೆಲವು ಪಿಜಿಗಳು ರಾತ್ರಿಯಾದ್ರೂ ಮುಖ್ಯ ದ್ವಾರವನ್ನು ಮುಚ್ಚುವುದಿಲ್ಲ. ಆದ್ರೆ ಇದನ್ನೇ ಬಂಡವಾಳ ಮಾಡಿಕೊಳ್ಳುವ ಕಳ್ಳರು ಇಂತಹ ಪಿಜಿಗಳಿಗೆ ನುಗ್ಗಿ ಕಳ್ಳತನಕ್ಕೆ ಮುಂದಾಗುತ್ತಿದ್ದಾರೆ.
ಇಂತಹದೇ ಘಟನೆಯೊಂದು ನಗರದ ನವರಂಗ ಬಳಿಯ ಶ್ರೀಸಾಯಿ ಬಾಯ್ಸ್ ಪಿಜಿಯಲ್ಲಿ ನಡೆದಿದೆ. ಭಾನುವಾರ ಕಳ್ಳತನ ನಡೆದಿದ್ದು, ತಡವಾಗಿ ಘಟನೆ ಬೆಳಕಿಗೆ ಬಂದಿದೆ. ಶ್ರೀ ಸಾಯಿ ಪಿಜಿಯಲ್ಲಿ ಚಿನ್ಮಯಿ ಎಂಬ ಯುವಕನ ಲ್ಯಾಪ್ಟಾಪ್ ಮತ್ತು ಮೊಬೈಲ್ ಕಳ್ಳತನವಾಗಿದೆ.
Advertisement
ಕಳ್ಳ ಪಿಜಿಗೆ ಎಂಟ್ರಿ ನೀಡುವ ಮತ್ತು ಹೋಗುವ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ. ಘಟನೆ ಸಂಬಂಧ ಸುಬ್ರಹ್ಮಣ್ಯ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.