ಬೆಂಗಳೂರು: ಫೇಸ್ ಬುಕ್ ಎಷ್ಟು ಸಹಾಯವೋ ಅಷ್ಟೇ ಮಾರಕ ಕೂಡ ಆಗಿದೆ. ಸಾಮಾಜಿಕ ಜಾಲತಾಣವನ್ನು ಬಳಸಿಕೊಂಡು ಹೇಗೆ ಕಳ್ಳತನ ಮಾಡುತ್ತಾರೆ ಎಂಬುದಕ್ಕೆ ಇಲ್ಲಿದೆ ಸ್ಟೋರಿ.
ನಗರದಲ್ಲಿ ಫೇಸ್ ಬುಕ್ ಸ್ಟೇಟಸ್ ನೋಡಿ ಮನೆಯಲ್ಲಿ ಕಳ್ಳತನ ಮಾಡಿರುವ ಘಟನೆ ನಡೆದಿದ್ದು, ಪ್ರೇಮಾ ಎಂಬವರ ಮನೆಯಲ್ಲಿ ಸುಮಾರು 5 ಲಕ್ಷ ಮೌಲ್ಯದ ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ. ನಾನು ಫೇಸ್ ಬುಕ್ ಅಲ್ಲಿ ಊರಿಗೆ ಹೋಗುತ್ತಿದ್ದೇನೆ ಎಂದು ಪೋಸ್ಟ್ ಹಾಕಿದ್ದೆ. ಆ ಪೋಸ್ಟ್ ಅನ್ನು ನೋಡಿಕೊಂಡು ಬಂದು ಮನೆಯಲ್ಲಿ ಕಳ್ಳತನ ಮಾಡಿದ್ದಾರೆಂದು ಮನೆಯೊಡತಿ ಆರೋಪಿಸುತ್ತಿದ್ದಾರೆ.
Advertisement
Advertisement
ಮನೆಯ ಮಾಲೀಕರಾದ ಪ್ರೇಮ ಗೊತ್ತಿರುವವರೇ ಈ ಫೇಸ್ ಬುಕ್ ಪೋಸ್ಟ್ ನೋಡಿ ಕಳ್ಳತನ ಮಾಡಿದ್ದಾರೆ. ಕಳ್ಳರು ಮನೆಯವರೆಲ್ಲಾ ಊರಿಗೆ ಹೋದ ಬಳಿಕ ಸುಮಾರು 5 ಲಕ್ಷ ಮೌಲ್ಯದ ಚಿನ್ನಾಭರಣ ಕಳ್ಳತನ ಮಾಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಈ ಕುರಿತು ಆರ್ ಟಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.