ಮಂಗಳೂರು: ಮೀನಿನ ರುಚಿ ಬಲ್ಲವನೇ ಬಲ್ಲ. ಮೀನು ಪ್ರಿಯರಿಗಂತೂ ಹೆಸರು ಕೇಳಿದರೆ ಬಾಯಲ್ಲಿ ನೀರು ಬರುತ್ತೆದೆ. ಆದರೆ ಮತ್ಸ್ಯವನ್ನು ಹೊಟ್ಟೆಗೆ ಇಳಿಸುವ ಮೊದಲು ಮೊದ್ಲು ಎಚ್ಚರ.. ಎಚ್ಚರ. ಯಾಕೆಂದರೆ ಮೀನಿನ ಮೂಲಕ ವಿಷಕಾರಿ ರಾಸಾಯನಿಕಗಳು ದೇಹ ಸೇರುತ್ತಿವೆಯಂತೆ.
ಮಳೆಗಾಲ ಹಿನ್ನೆಲೆಯಲ್ಲಿ ನಮ್ಮ ರಾಜ್ಯದ ಕರಾವಳಿಯಲ್ಲಿ ಮೀನುಗಾರಿಕೆಗೆ ನಿಷೇಧ ಹೇರಲಾಗಿದೆ. ಈ ಹಿನ್ನೆಲೆಯಲ್ಲಿ ಆಂಧ್ರ ಪ್ರದ್ರೇಶ, ತಮಿಳುನಾಡು, ಕೇರಳದಿಂದ ಮೀನು ಪೊರೈಕೆ ಆಗುತ್ತಿದೆ. ಆದರೆ ಆ ಮೀನುಗಳು ದೀರ್ಘಕಾಲ ಕೆಡಬಾರದು ಅಂತ ಅಪಾಯಕಾರಿ ರಾಸಾಯನಿಕಗಳನ್ನು ಬಳಸುತ್ತಿದ್ದಾರೆ.
Advertisement
Advertisement
ಮಂಜುಗಡ್ಡೆ ದುಬಾರಿ ಆಗಿರುವ ಕಾರಣ ಕಡಿಮೆಗೆ ಸಿಗುವ ಅಮೋನಿಯಂ ಮಿಶ್ರಿತ ಕೆಮಿಕಲ್ ಇಂಜೆಕ್ಟ್ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಆದರೆ ಈ ಮೀನುಗಳ ಪರೀಕ್ಷೆಗೆ ಕರಾವಳಿಯಲ್ಲಿ ಪ್ರಯೋಗಾಲಯ ಇಲ್ಲ ಅನ್ನೋದೇ ವಿಚಿತ್ರವಾದ ಸಂಗತಿಯಾಗಿದೆ.
Advertisement