ಬೆಂಗಳೂರು: ಮಾರುಕಟ್ಟೆಗಳ ಚಿಲ್ಲಿಪೌಡರ್ ಬಳಸುವ ಗ್ರಾಹಕರೇ ಎಚ್ಚರ. ಯಾಕಂದ್ರೆ ರಾಜ್ಯದಲ್ಲಿ ಮಾರಾಟವಾಗುತ್ತಿರುವ ಮೆಣಸಿನ ಪುಡಿಯಲ್ಲಿದೆ ವಿಷಯುಕ್ತ ರಾಸಾಯನಿಕ ಸೇರಿಕೊಂಡಿದೆ ಎಂದು ಕೇಂದ್ರ ಸ್ಪೈಸಿ ಬೋರ್ಡ್ ಎಚ್ಚರಿಕೆ ನೀಡಿದೆ.
ಚಿಲ್ಲಿ ಪೌಡರ್, ಮೆಣಸಿನ ಪೌಡರ್ ನಲ್ಲಿ ಡೇಂಜರಸ್ ಕೆಮಿಕಲ್ ಮಿಕ್ಸ್ ಆಗಿದ್ದು, ಇದನ್ನು ತಿಂದರೆ ಜನರ ಆರೋಗ್ಯದ ಸ್ಥಿತಿ ಹದಗೆಡುತ್ತದೆ. ಮಾರುಕಟ್ಟೆಗಳಲ್ಲಿ ಸಿಗುವ ಚಿಲ್ಲಿಪೌಡರ್ ನಲ್ಲಿ ಶೂ ಪಾಲಿಷ್ ಮಾಡುವ ಕಲರ್, ಬಟ್ಟೆಗಳಿಗೆ ಬಳಸುವ ಸುಡಾನ್ ಕೆಮಿಕಲ್ ಬಳಕೆಯಾಗಿದೆ. ಅಷ್ಟೇ ಅಲ್ಲದೇ ಕ್ಯಾನ್ಸರ್ ಕಾರಕ ಅಂಶವಿರುವ ಸುಡಾನ್ ಫೋರ್ ಕೆಮಿಕಲ್ ಕೂಡ ಬಳಕೆಯಾಗಿರುವುದು ಮೈಸೂರಿನ ಕಾಂಪ್ರೆಸ್ ಚಿಲ್ಲಿ ಪೌಡರ್ ನಲ್ಲಿ ಪತ್ತೆಯಾಗಿದೆ. ಈ ಕುರಿತು ಕೇಂದ್ರ ಸ್ಪೈಸಿ ಬೋರ್ಡ್ ಟೆಸ್ಟ್ ಪರಿಶೀಲಿಸಿದಾಗ ವಿಷಯುಕ್ತ ಕೆಮಿಕಲ್ ಬಳಕೆ ರಹಸ್ಯ ಬಯಲಾಗಿದೆ. ಕೂಡಲೇ ಕರ್ನಾಟಕ ಆಹಾರ ಸುರಕ್ಷತಾ ಇಲಾಖೆಗೆ ಪತ್ರ ಬರೆದು ಮಂಡಳಿ ಎಚ್ಚರಿಸಿದೆ.
Advertisement
Advertisement
ಆಹಾರ ಸುರಕ್ಷತಾ ಇಲಾಖೆ ಕೊಪ್ರಾಸ್ ಕಂಪನಿಯ ಮೆಟ್ರಿಕ್ ಟನ್ ನಷ್ಟು ಚಿಲ್ಲಿ ಪೌಡರ್ ನನ್ನ ವೈಜ್ಞಾನಿಕವಾಗಿ ಸುಡುವುದಕ್ಕೆ ಮಂಡಳಿ ಆದೇಶಿಸಿದ್ದು, ಉಳಿದ ಎಲ್ಲಾ ಬ್ರ್ಯಾಂಡ್‍ಗಳ ಮೆಣಸಿನ ಪೌಡರ್ ಸ್ಯಾಂಪಲ್ ಟೆಸ್ಟ್ ಗೆ ಮುಂದಾಗಿದೆ. ಅಷ್ಟೇ ಅಲ್ಲದೇ ಕರ್ನಾಟದ ಚಿಲ್ಲಿಪೌಡರ್ ಈಗ ವಿದೇಶದಲ್ಲೂ ಬ್ಯಾನ್ ಆಗಿದೆ.
Advertisement
Advertisement