ಭಾರತಕ್ಕೆ ರಷ್ಯಾ ತೈಲ (Russian oil) ಖರೀದಿಗೆ ಅನುಮತಿ ಕೊಟ್ಟಿದ್ದೇವೆ ಎಂದ ಅಮೆರಿಕ ವಿರುದ್ಧ ಬಹುಭಾಷಾ ನಟ ಕಮಲ್ ಹಾಸನ್ (Kamal Haasan) ಕಿಡಿಕಾರಿದ್ದಾರೆ. ನಿಮ್ಮ ಕೆಲಸ ಎಷ್ಟಿದೆ ಅದನ್ನಷ್ಟೇ ನೋಡಿಕೊಳ್ಳಿ ಎಂದು ಎಕ್ಸ್‌ನಲ್ಲಿ ಟ್ರಂಪ್ (Donald Trump ) ವಿರುದ್ಧ ಅವರು ಪೋಸ್ಟ್ ಮಾಡಿದ್ದಾರೆ.
ಸಾರ್ವಭೌಮ ರಾಷ್ಟ್ರಗಳ ನಡುವಿನ ಪರಸ್ಪರ ಗೌರವವು ಶಾಶ್ವತ ಜಾಗತಿಕ ಶಾಂತಿಯ ಏಕೈಕ ಅಡಿಪಾಯವಾಗಿದೆ. ನಿಮ್ಮ ದೇಶ ಅಲ್ಲಿನ ಜನರ ಶಾಂತಿ ಮತ್ತು ಸಮೃದ್ಧಿಯನ್ನು ನಾವು ಬಯಸುತ್ತೇವೆ. ಭಾರತವು ಇತರ ದೇಶಗಳ ಆದೇಶಗಳನ್ನು ಒಪ್ಪಿಕೊಳ್ಳುವುದಿಲ್ಲ. ದಯವಿಟ್ಟು ನಿಮ್ಮ ವ್ಯವಹಾರ ನೀವು ನೋಡಿಕೊಳ್ಳಿ ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಐರಿಸ್ ಲವನ್‌ಗೆ ಆಶ್ರಯ ನೀಡಿದ್ದನ್ನು ಸಮರ್ಥಿಸಿಕೊಂಡ ಎಸ್.ಜೈಶಂಕರ್
To
The President of the United States of America @POTUS
Dear Mr. President,
We, the people of India, belong to a free and sovereign nation. We no longer take orders from distant foreign shores.
Please mind your own business to the best of your abilities.
Mutual respect…
— Kamal Haasan (@ikamalhaasan) March 7, 2026
ಟ್ರಂಪ್ ಅವರ ಸಹಾಯಕ ಮತ್ತು ಅಮೆರಿಕದ ಖಜಾನೆ ಕಾರ್ಯದರ್ಶಿ ಸ್ಕಾಟ್ ಬೆಸೆಂಟ್, ರಷ್ಯಾ ತೈಲವನ್ನು ಖರೀದಿಸಲು ಭಾರತಕ್ಕೆ ಅಮೆರಿಕ ಅನುಮತಿ ನೀಡಿದೆ ಎಂದು ಇತ್ತೀಚೆಗೆ ಹೇಳಿದ್ದರು. ಅಲ್ಲದೇ ರಷ್ಯಾದ ತೈಲವನ್ನು ಖರೀದಿಸುವುದನ್ನು ನಿಲ್ಲಿಸುವಂತೆ ನಾವು ಭಾರತಕ್ಕೆ ಹೇಳಿದ್ದೆವು. ಅವರು ಅದನ್ನು ಒಪ್ಪಿ, ಅಮೆರಿಕದಿಂದ ತೈಲ ಖರೀದಿಗೆ ಮುಂದಾಗಿದ್ದರು. ಆದರೆ ಈಗ ಪ್ರಪಂಚದಾದ್ಯಂತ ತೈಲ ಪೂರೈಕೆ ವ್ಯತ್ಯಯವಾಗುತ್ತಿರುವುದರಿಂದ ಅವರಿಗೆ ರಷ್ಯಾದ ತೈಲವನ್ನು ಸ್ವೀಕರಿಸಲು ಅನುಮತಿ ನೀಡಿದ್ದೇವೆ ಎಂದಿದ್ದರು.
ರಷ್ಯಾದಿಂದ (Russia) ತೈಲ ಖರೀದಿಸಲು ಭಾರತಕ್ಕೆ ಅಮೆರಿಕ 30 ದಿನಗಳ ವಿನಾಯಿತಿ ನೀಡಿದೆ ಎಂಬ ವಿಚಾರಕ್ಕೆ ಭಾರತ (India) ಖಡಕ್ ಪ್ರತಿಕ್ರಿಯೆ ನೀಡಿದೆ. ‘ಅನುಮತಿ ಮೇಲೆ ನಾವು ಎಂದಿಗೂ ಅವಲಂಬಿತರಾಗಿಲ್ಲ’ ಎಂದು ಭಾರತ ಸ್ಪಷ್ಟಪಡಿಸಿದೆ.
ಇರಾನ್-ಯುಎಸ್-ಇಸ್ರೇಲ್ ಯುದ್ಧದಿಂದಾಗಿ ಹಾರ್ಮುಜ್ ಜಲಸಂಧಿ ಮಾರ್ಗದಲ್ಲಿ ಉದ್ವಿಗ್ನತೆ ಉಂಟಾಗಿರುವುದರಿಂದ, ಭಾರತವು ಕಡಿಮೆ ಬೆಲೆಗೆ ನೀಡುವ ಯಾವುದೇ ಮೂಲದಿಂದ ಕಚ್ಚಾ ತೈಲವನ್ನು ಖರೀದಿಸುವುದನ್ನು ಮುಂದುವರಿಸುತ್ತೇವೆ ಎಂದು ಕೇಂದ್ರ ಶನಿವಾರ ತಿಳಿಸಿದೆ. ಅಡೆತಡೆಗಳ ಹೊರತಾಗಿಯೂ ಭಾರತದ ಇಂಧನ ಸರಬರಾಜು ಸುರಕ್ಷಿತವಾಗಿದೆ ಎಂದು ಸರ್ಕಾರ ತಿಳಿಸಿದೆ. ಇದನ್ನೂ ಓದಿ: ನಮಗೆ ಯಾರ ಅಪ್ಪಣೆಯೂ ಬೇಕಿಲ್ಲ: ರಷ್ಯಾ ತೈಲ ಖರೀದಿಗೆ ಅಮೆರಿಕ ವಿನಾಯಿತಿ ಬಗ್ಗೆ ಭಾರತ ಖಡಕ್ ಮಾತು

