ಬೆಂಗಳೂರು: ನನಗೆ ಹುಡುಗಿ ಮೋಸ ಮಾಡಿದ್ದಾಳೆ. ನನ್ನ ಸಾಯಲು ಬಿಡಿ ಅಂತ ಕುಡಿದ ಮತ್ತಿನಲ್ಲಿ ವ್ಯಕ್ತಿಯೊಬ್ಬ ಪೊಲೀಸರಿಗೆ ಕಾಟ ಕೊಟ್ಟ ಘಟನೆ ಬೆಂಗಳೂರಿನ ಯಶವಂತಪುರದಲ್ಲಿ ನಡೆದಿದೆ.
ವಿಪರೀತ ಮದ್ಯಪಾನ ಮಾಡಿದ್ದ ವ್ಯಕ್ತಿ, ಯಶವಂತಪುರ ಸರ್ಕಲ್ ನಲ್ಲಿ ನನಗೆ ನನ್ನ ಹುಡುಗಿ ಮೋಸ ಮಾಡಿದ್ದಾಳೆ. ನಾನು ಸಾಯಬೇಕು ಅಂತ ಜೋರಾಗಿ ಕಿರುಚಾಡಿದ್ದಾನೆ. ಅಲ್ಲದೇ ಅತ್ತ ಹುಡುಗಿನೂ ಬಿಟ್ಟು ಹೋಗಿದ್ದಾಳೆ, ಇತ್ತ ನನ್ನ ಬಳಿ ಹಣವೂ ಇಲ್ಲ ಅಂತ ರಸ್ತೆ ಮಧ್ಯೆ ಗೋಳಾಡಿದ್ದಾನೆ.
ಸುಮಾರು ಅರ್ಧ ಗಂಟೆಗೂ ಹೆಚ್ಚು ಸರ್ಕಲ್ ನಲ್ಲಿ ಈ ಹೈಡ್ರಾಮಾ ನಡೆದಿದ್ದು, ನಾನು ಬಲೂನ್ ಗೆ ಗಾಳಿ ತುಂಬಿ ಮಾರುತ್ತೇನೆ. ನನ್ನ ಸಾಯಲು ಬಿಡಿ ಅಂತ ಸಿಕ್ಕ ಸಿಕ್ಕ ವಾಹನಗಳಿಗೆ ಸಿಲುಕುವ ಮೂಲಕ ಆತ್ಮಹತ್ಯೆಗೆ ಯತ್ನಿಸಿ, ಪೊಲೀಸರಿಗೆ ಕಾಟ ಕೊಟ್ಟಿದ್ದಾನೆ. ಬಳಿಕ ಟ್ರಾಫಿಕ್ ಪೊಲೀಸರು ಹರಸಾಹಸ ಪಟ್ಟು ಆತನನ್ನು ಸಮಾಧಾನ ಪಡಿಸಿ, ಟ್ರಾಫಿಕ್ ಕ್ಲಿಯರ್ ಮಾಡಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ: www.instagram.com/publictvnews