ಬೆಂಗಳೂರು: ನಗರದಲ್ಲಿ ಸಂಚಾರ ಉಲ್ಲಂಘನೆಯ ಫೋಟೋವನ್ನು ಕಳುಹಿಸಿ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
ಈ ಸಂಬಂಧ ಟ್ವೀಟ್ ಮಾಡಿರುವ ಅವರು, ಪ್ಲೇ ಸ್ಟೋರಿಗೆ ಹೋಗಿ ‘ಪಬ್ಲಿಕ್ ಐ’ ಆ್ಯಪ್ ಡೌನ್‍ಲೋಡ್ ಮಾಡಿ ಸಂಚಾರ ಉಲ್ಲಂಘನೆಯಾಗಿದ್ದರೆ ಈ ಆ್ಯಪ್ ನಲ್ಲಿ ಫೋಟೋವನ್ನು ಅಪ್ಲೋಡ್ ಮಾಡಿ. ನೀವು ಕಳುಹಿಸಿದ ಫೋಟೋವನ್ನು ಟ್ರಾಫಿಕ್ ನಿಯಂತ್ರಣ ಕೇಂದ್ರದಲ್ಲಿ ಪರಿಶೀಲಿಸಿ ಇ ಚಲನ್ ಕಳುಹಿಸಲಾಗುವುದು. ಕಳುಹಿಸಿದ ವ್ಯಕ್ತಗಳ ವಿವರವನ್ನು ಗೌಪ್ಯವಾಗಿಡಲಾಗುವುದು. ನೀವು ನಾಗರಿಕ ಪೊಲೀಸರಾಗಿ ಎಂದು ಕೇಳಿಕೊಂಡಿದ್ದಾರೆ.
Advertisement
Please go to Playstore and download the App Public Eye. Take pictures of Traffic Violation and upload. Upon Authentication, the Traffic Management Center, will send E-Challan through Contactless Enforcement. Your Confidentiality is maintained. Be a Citizen Police.
— Bhaskar Rao (@Nimmabhaskar22) September 30, 2019
Advertisement
ಈ ಟ್ವೀಟ್ ಜನರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೆಲವರು ಈ ಹಿಂದೆಯೇ ನಾವು ಫೋಟೋಗಳನ್ನು ಕಳುಹಿಸುತ್ತಿದ್ದೇವೆ. ಆದರೆ ಈ ಪ್ರಕರಣಗಳು ಇನ್ನೂ ಪೆಂಡಿಂಗ್ ನಲ್ಲಿದೆ ಎಂದು ಪ್ರತ್ರಿಕ್ರಿಯೆ ನೀಡಿದ್ದಾರೆ.