ಬೆಂಗಳೂರು: ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಅವರ ಹೆಸರಲ್ಲಿ ಫೇಸ್‍ಬುಕ್‍ನಲ್ಲಿ ನಕಲಿ ಪುಟಗಳ ಹಾವಳಿ ಹೆಚ್ಚಾಗಿದ್ದು, ಇಂತಹ ಪುಟಗಳನ್ನು ಫಾಲೋ ಮಾಡಬೇಡಿ ಎಂದು ಸ್ವತಃ ಸುಮಲತಾ ಅವರೇ ಅಭಿಮಾನಿಗಳಿಗೆ, ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.
ತಮ್ಮ ಅಧಿಕೃತ ಫೇಸ್‍ಬುಕ್ ಹಾಗೂ ಟ್ವಿಟ್ಟರ್ ಖಾತೆಯಿಂದ ಸುಮಲತಾ ಅವರು ಈ ಬಗ್ಗೆ ಪೋಸ್ಟ್ ಮಾಡಿದ್ದಾರೆ. ನಕಲಿ ಪುಟಗಳ ಹಾವಳಿ ಇನ್ನೂ ಮುಂದುವರಿದಿದೆ. ಇಂತಹ ಫೇಸ್‍ಬುಕ್ ಪುಟಗಳನ್ನು ಫಾಲೋ ಮಾಡಬೇಡಿ. ಇದು ನನ್ನ ಅಧಿಕೃತ ಪುಟವಲ್ಲ, ಈ ಪೇಜ್ ನ್ನು ಫಾಲೋ ಮಾಡಬೇಡಿ ಎಂದು ಮನವಿ ಮಾಡಿದ್ದಾರೆ. ಜೊತೆಗೆ ನಕಲಿ ಪುಟದ ಸ್ಕ್ರೀನ್‍ಶಾರ್ಟ್ ತೆಗೆದು ಅದನ್ನು ಕೂಡ ಶೇರ್ ಮಾಡಿ ನಕಲಿ ಪುಟಗಳ ಬಗ್ಗೆ ಜಾಗೃತಿ ಮೂಡಿಸಿದ್ದಾರೆ.
Advertisement
THIS IS A FAKE PAGE STILL CONTINUING , PLEASE UNFOLLOW THIS PAGE AS HE IS POSTING HARMFUL STUFF INSPITE OF MULTIPLE WARNINGS , HAVE REPORTED TO CYBER CRIME AND AWAITING THE END TO THIS NONSENSE pic.twitter.com/vkdyhYitwt
— Sumalatha Ambareesh ???????? ಸುಮಲತಾ ಅಂಬರೀಶ್ (@sumalathaA) September 16, 2019
Advertisement
ಪೋಸ್ಟ್‌ನಲ್ಲಿ ಏನಿದೆ?
ಇದು ನಕಲಿ ಪುಟ ಇನ್ನೂ ಮುಂದುವರಿದಿದೆ. ದಯಮಾಡಿ ಈ ಪುಟವನ್ನು ಅನ್‍ಫಾಲೋ ಮಾಡಿ, ಈ ಪುಟ ಬಳಕೆದಾರ ಇದರಲ್ಲಿ ಹಲವು ಹಾನಿಕಾರಕ ವಿಷಯಗಳನ್ನು, ಸಾಕಷ್ಟು ಎಚ್ಚರಿಕೆಗಳನ್ನು ಪೋಸ್ಟ್ ಮಾಡುತ್ತಿದ್ದಾನೆ. ಈಗಾಗಲೇ ಈ ನಕಲಿ ಪುಟಗಳ ಕುರಿತು ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದ್ದೇನೆ. ಈ ರೀತಿ ಅಸಂಬದ್ಧಕ್ಕೆ ಯಾವಾಗ ಮುಕ್ತಿ ಸಿಗುತ್ತದೆ ಎಂದು ಕಾಯುತ್ತಿದ್ದೇನೆ ಎಂದು ಬರೆದು, ನಕಲಿ ಪುಟಗಳ ಫೋಟೋ ಜೊತೆಗೆ ಅಪ್ಲೋಡ್ ಮಾಡಿದ್ದಾರೆ.
Advertisement
ಈ ಹಿಂದೆ ಕೂಡ ಸುಮಲತಾ ಅವರು ತಮ್ಮ ಹೆಸರಿನಲ್ಲಿ ತೆರೆಯಲಾಗಿರುವ ನಕಲಿ ಫೇಸ್‍ಬುಕ್ ಪುಟಗಳ ಬಗ್ಗೆ ತಿಳಿದು, ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿದ್ದರು. ಯಾವುದೇ ಅನಧಿಕೃತ ಪುಟಗಳು ನಿಮ್ಮ ಗಮನಕ್ಕೆ ಬಂದರೆ ಅದನ್ನು ದಯಮಾಡಿ ವರದಿ ಮಾಡಿ ಎಂದು ಕೋರಿಕೊಂಡಿದ್ದರು.