ಬೆಂಗಳೂರು: ವಿಧಾನಸೌಧದಲ್ಲಿ ಶಾಸಕರ ಪ್ರಮಾಣ ವಚನ ಸ್ವೀಕಾರ ಚಟುವಟಿಕೆ ಬಿರುಸಿನಿಂದ ತೊಡಗಿದ್ರೆ, ಇತ್ತ ಜೆಡಿಎಸ್ ನಾಯಕ ಎಚ್.ಡಿ.ರೇವಣ್ಣ ಸ್ವಾಮಿ ನನ್ನ ಹೆಸ್ರನ್ನ ಆಮೇಲೆ ಕರೆಯ್ರಿ ಅಂತಾ ಹಂಗಾಮಿ ಸ್ವೀಕರ್ ಕೆ.ಜಿ.ಬೋಪಯ್ಯ ಅವರಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಎಚ್.ಡಿ.ರೇವಣ್ಣವರ ಮನವಿ ಕೇಳಿದ ಬಳಿಕ ಸ್ಪೀಕರ್, ಸರಿ ಹೋಗಿ ಬನ್ನಿ ಅಂತಾ ಅನುಮತಿ ನೀಡಿದ್ದಾರೆ. ಪ್ರಮಾಣ ವಚನ ಸ್ವೀಕಾರಕ್ಕೆ 4 ಗಂಟೆಯವರೆಗೂ ಸಮಯವಿದೆ ಹೋಗಿ ಬನ್ನಿ ಅಂತಾ ತಿಳಿಸಿದ್ದಾರೆ.
ಇತ್ತ ಕಾಂಗ್ರೆಸ್ ಸಂಸದ ಡಿ.ಕೆ.ಸುರೇಶ್, ನಮ್ಮಿಬ್ಬರ ಶಾಸಕರಾದ ಆನಂದ್ ಸಿಂಗ್ ಮತ್ತು ಪ್ರತಾಪ್ ಗೌಡ ಪಾಟೀಲ್ ಇಬ್ಬರೂ ಮಾಜಿ ಸಚಿವ ಜನಾರ್ದನ ರೆಡ್ಡಿಯವರ ತೆಕ್ಕೆಯಲ್ಲಿದ್ದಾರೆ ಅಂತಾ ಆರೋಪಿಸಿದ್ದಾರೆ. ಆದ್ರೆ ಇದೂವರೆಗೂ ಕಾಂಗ್ರೆಸ್ನ ಇಬ್ಬರೂ ಶಾಸಕರು ಸದನದಲ್ಲಿ ಭಾಗಿಯಾಗಿಲ್ಲ.
ಒಂದು ಕಡೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ,”3 ದಿನದ ಮುಖ್ಯಮಂತ್ರಿ ಶ್ರೀಯುತ ಯಡಿಯೂರಪ್ಪನವರ ಅಧಿಕಾರಾವಧಿ ಇಂದಿಗೆ ಕೊನೆಗೊಳ್ಳಲಿದೆ. ಬಹುಮತವಿಲ್ಲದೆ ಸಂವಿಧಾನ ಬಾಹಿರವಾಗಿ ಪ್ರಮಾಣ ವಚನ ಸ್ವೀಕರಿಸಿರುವುದು ನಾಡಿನ ಮತದಾರರ ಆಶಯಗಳಿಗೆ ವಿರುದ್ಧ. ಇಂದು ಸಂಜೆ ಜನಾಭಿಪ್ರಾಯಕ್ಕೆ ಜಯ ದೊರೆಯಲಿದೆ ಎಂಬ ಸಂಪೂರ್ಣ ವಿಶ್ವಾಸವಿದೆ” ಎಂದು ತಮ್ಮ ಟ್ವಟ್ಟರ್ ನಲ್ಲಿ ಬರೆದುಕೊಂಡಿದ್ದಾರೆ.