ನವದೆಹಲಿ: ಸಲಿಂಗ ವಿವಾಹ (Same Sex Marriage) ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ನ (Supreme Court) ತೀರ್ಪನ್ನು ಪ್ರಶ್ನಿಸಿ ಸಲ್ಲಿಸಿರುವ ಮರುಪರಿಶೀಲನಾ ಅರ್ಜಿಗಳನ್ನು ಮುಕ್ತ ನ್ಯಾಯಾಲಯದಲ್ಲಿ ವಿಚಾರಣೆ ಕೋರಿ ಹಿರಿಯ ವಕೀಲ ಮತ್ತು ಮಾಜಿ ಅಟಾರ್ನಿ ಜನರಲ್ ಮುಕುಲ್ ರೋಹಟಗಿ ಅವರು ಸುಪ್ರೀಂ ಕೋರ್ಟ್‌ಗೆ ಗುರುವಾರ ತುರ್ತು ಪ್ರಸ್ತಾಪವನ್ನು ಮಾಡಿದರು.
ವಿವಾಹದ ಹಕ್ಕು ನಿರಾಕರಣೆ ಎಂದು ಪೀಠದಲ್ಲಿದ್ದ ಎಲ್ಲಾ ನ್ಯಾಯಾಧೀಶರು ಒಪ್ಪಿಕೊಂಡರೂ ತೀರ್ಪು ನೀಡಿದ ಸಂವಿಧಾನ ಪೀಠವು ಪರಿಹಾರವನ್ನು ನಿರಾಕರಿಸಿದ್ದರಿಂದ ಮರುಪರಿಶೀಲನಾ ಅರ್ಜಿಗಳನ್ನು ಮುಕ್ತ ನ್ಯಾಯಾಲಯದಲ್ಲಿ ಆಲಿಸಬೇಕು ಎಂದು ರೋಹಟಗಿ ಭಾರತದ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ನೇತೃತ್ವದ ಪೀಠಕ್ಕೆ ತಿಳಿಸಿದರು.
Advertisement
Advertisement
ನ್ಯಾಯಾಧೀಶರು ತಾರತಮ್ಯವಿದೆ ಒಪ್ಪುತ್ತಾರೆ, ತಾರತಮ್ಯವಿದ್ದರೆ ಪರಿಹಾರವೂ ಇರಬೇಕು. ಹೆಚ್ಚಿನ ಸಂಖ್ಯೆಯ ಜನರ ಜೀವನ ಅವಲಂಬಿತವಾಗಿದೆ. ತೆರೆದ ನ್ಯಾಯಾಲಯದ ವಿಚಾರಣೆಗೆ ನಾವು ಒತ್ತಾಯಿಸಿದ್ದೇವೆ ಎಂದು ಮನವಿ ಮಾಡಿದರು. ನಾವು ಮನವಿಯನ್ನು ಪರಿಶೀಲಿಸಿ ವಿಚಾರಣೆ ಬಗ್ಗೆ ನಿರ್ಧರಿಸುತ್ತೇವೆ ಎಂದು ಸಿಜೆಐ ಚಂದ್ರಚೂಡ್ ತಿಳಿಸಿದರು.
Advertisement
ಮರು ಪರಿಶೀಲನಾ ಅರ್ಜಿಗಳನ್ನು ಸಾಮಾನ್ಯವಾಗಿ ಸುಪ್ರೀಂ ಕೋರ್ಟ್ ಚೇಂಬರ್‌ನಲ್ಲಿ ವಿಚಾರಣೆ ನಡೆಸುತ್ತದೆ ಮತ್ತು ವಕೀಲರು ಯಾವುದೇ ಮೌಖಿಕ ವಾದಗಳನ್ನು ಮಾಡಿರುವುದಿಲ್ಲ. ಲಿಖಿತ ವಾದವನ್ನು ಸಲ್ಲಿರುತ್ತಾರೆ. ಆದಾಗ್ಯೂ ಅವರು ಅಸಾಧಾರಣ ಪ್ರಕರಣಗಳಲ್ಲಿ ಮತ್ತು ಮರಣದಂಡನೆಗೆ ಸಂಬಂಧಿಸಿದ ವಿಷಯಗಳಲ್ಲಿ ತೆರೆದ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತದೆ.
Advertisement
ಭಾರತದ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಮತ್ತು ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್, ಎಸ್ ರವೀಂದ್ರ ಭಟ್, ಹಿಮಾ ಕೊಹ್ಲಿ ಮತ್ತು ಪಿಎಸ್ ನರಸಿಂಹ ಅವರ ಸಾಂವಿಧಾನಿಕ ಪೀಠವು ಅಕ್ಟೋಬರ್ 17 ರಂದು ಸಲಿಂಗ ವಿವಾಹಗಳನ್ನು ಅಂಗೀಕರಿಸುವ ವಿರುದ್ಧ ತೀರ್ಪು ನೀಡಿತ್ತು. ಇದನ್ನೂ ಓದಿ: ಅಸಮಾಧಾನಿತ ನಾಯಕ ರಮೇಶ್ ಜಾರಕಿಹೊಳಿ ಮನೆಗೆ ವಿಜಯೇಂದ್ರ ಭೇಟಿ
ಪ್ರಸ್ತುತ ಇರುವ ಕಾನೂನು ಮದುವೆಯಾಗುವ ಹಕ್ಕನ್ನು ಅಥವಾ ಸಲಿಂಗ ದಂಪತಿಗೆ ನಾಗರಿಕ ಸಂಘಗಳಿಗೆ ಪ್ರವೇಶಿಸುವ ಹಕ್ಕನ್ನು ಗುರುತಿಸುವುದಿಲ್ಲ. ಈ ಹಕ್ಕುಗಳನ್ನು ಸಕ್ರಿಯಗೊಳಿಸುವ ಕಾನೂನುಗಳನ್ನು ರೂಪಿಸಲು ಸಂಸತ್ತಿಗೆ ಬಿಟ್ಟಿದೆ ಎಂದು ನ್ಯಾಯಾಲಯ ಹೇಳಿದೆ. ಮಕ್ಕಳನ್ನು ದತ್ತು ತೆಗೆದುಕೊಳ್ಳುವ ಸಲಿಂಗ ದಂಪತಿಯ ಹಕ್ಕುಗಳನ್ನು ಕಾನೂನು ಗುರುತಿಸುವುದಿಲ್ಲ ಎಂದು ನ್ಯಾಯಾಲಯ ಹೇಳಿದೆ. ಇದನ್ನೂ ಓದಿ: ಹಲಾಲ್ ಪ್ರಮಾಣೀಕೃತ ಏಜೆನ್ಸಿಗಳ ನಿಷೇಧಕ್ಕೆ ಆಗ್ರಹ – ಕೇಂದ್ರಕ್ಕೆ ಶಾಸಕ ಯತ್ನಾಳ್ ಪತ್ರ