– ಕಾಂಗ್ರೆಸ್ ನಾಯಕರ ನಡುವೆಯೇ ಫೈಟ್
ಬೆಳಗಾವಿ: ಅದು ಸ್ಥಳೀಯ ಮಟ್ಟದ ಚುನಾವಣೆ ಹಾಗಂತಾ ನಗರಸಭೆ ಅಥವಾ ಪುರಸಭೆ ಚುನಾವಣೆಯಲ್ಲಾ, ಬದಲಿಗೆ ಸಹಕಾರಿ ಬ್ಯಾಂಕ್ ಒಂದರ ಚುನಾವಣೆ. ರಾಜಕೀಯದಲ್ಲಿ ಇಬ್ಬರು ವಿರೋಧಿಗಳೆಂದು ಬಿಂಬಿಸಿಕೊಂಡ ಮಾಜಿ ಸಚಿವ ಸತೀಶ್ ಜಾರಕಿಹೋಳಿ ಹಾಗೂ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಈ ಚುನಾವಣೆಯನ್ನ ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದು ಸದ್ಯ ನೇರಾ ನೇರ ಪೈಟ್ ನಡೆಸುತ್ತಿದ್ದಾರೆ.
ಕಳೆದ ರಾತ್ರಿ ಬೆಳಗಾವಿ ತಹಶೀಲ್ದಾರ್ ಕಚೇರಿ ಮುಂಭಾಗದಲ್ಲಿ ದೊಡ್ಡ ಮಟ್ಟದ ಹೈಡ್ರಾಮ ನಡೆದು ಹೋಗಿದೆ. ಇಂದು ನಡೆಯಬೇಕಿದ್ದ ಪಿಎಲ್ ಡಿ ಬ್ಯಾಂಕ್ ನ ಚುನಾವಣೆಯನ್ನ ಇದ್ದಕ್ಕಿದ್ದಂತೆ ಕಳೆದ ರಾತ್ರಿ ಮುಂದೂಡಲಾಯ್ತು. ಇದರಿಂದ ಆಕ್ರೋಶಗೊಂಡ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಬೆಂಬಲಿಗರ ಜೊತೆ ತಹಶೀಲ್ದಾರ್ ಕಚೇರಿ ಮುಂದೆ ಅಹೋರಾತ್ರಿ ಧರಣಿಗೆ ಮುಂದಾದರು. ಸತೀಶ್ ಜಾರಕಿಹೋಳಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ರು.
Advertisement
Advertisement
ಸತೀಶ್ ಬೆಂಬಲಿಗರು ಲಕ್ಷ್ಮಿ ವಿರುದ್ಧವೂ ಪ್ರತಿಭಟನೆ ನಡೆಸಿದ್ರು. ಸತೀಶ್ ಜಾರಕಿಹೋಳಿ ಬೆಂಬಲಿಗರು ತಹಶೀಲ್ದಾರ್ ಕಚೇರಿ ಕಾಂಪೌಂಡ್ ಏರಿ ಒಳ ನುಗ್ಗಲು ಯತ್ನಿಸಿದರು. ಈ ವೇಳೆ ಪೊಲೀಸರ ಜೊತೆ ವಾಗ್ವಾದ ನಡೆಸಿದ್ರು. ಕೊನೆಗೆ ಎಸ್‍ಪಿ ರಾಜಪ್ಪ ಹರಸಾಹಸ ಮಾಡಿ ಪರಿಸ್ಥಿತಿ ಹತೋಟಿಗೆ ತರುವಲ್ಲಿ ಯಶಸ್ವಿಯಾಗಿದ್ದಾರೆ. ಅಪರ ಜಿಲ್ಲಾಧಿಕಾರಿ ಸ್ಥಳಕ್ಕಾಗಮಿಸಿ ಕಾನೂನಿನ ಬಗ್ಗೆ ತಿಳಿ ಹೇಳಿ ಇಬ್ಬರ ಮನವೊಲಿಸಿ ವಾಪಸ್ ಕಳಿಸಿದರು. ಜಾರಕಿಹೊಳಿ ಬೆಂಬಲಿಗರ ಗುಂಪಿನಲ್ಲಿ ಬಿಜೆಪಿಯ ಕೆಲವು ಮುಖಂಡರು ಕಾಣಿಸಿಕೊಂಡಿದ್ದು ವಿಶೇಷವಾಗಿತ್ತು.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv