– ಪ್ರದೀಪ್ ಈಶ್ವರ್, ಎಂ.ಸಿ ಸುಧಾಕರ್, ಮಾಜಿ ಶಾಸಕ ಬಚ್ಚೇಗೌಡ ವಿರುದ್ಧ ವಾಗ್ದಾಳಿ
ಚಿಕ್ಕಬಳ್ಳಾಪುರ: ಸಂಸದ ಡಾ.ಕೆ ಸುಧಾಕರ್ ಹಾಗೂ ಸಚಿವ ಎಂ.ಸಿ ಸುಧಾಕರ್ ಸೇರಿದಂತೆ ಶಾಸಕ ಪ್ರದೀಪ್ ಈಶ್ವರ್, ಮಾಜಿ ಶಾಸಕ ಕೆ ಪಿ ಬಚ್ಚೇಗೌಡ ನಡುವೆ ಪ್ರತಿಷ್ಠೆಯಾಗಿ ತೀವ್ರ ಕೂತೂಹಲ ಮೂಡಿಸಿದ್ದ ಪಿಎಲ್‌ಡಿ ಬ್ಯಾಂಕ್ ಚುನಾವಣೆಯಲ್ಲಿ (PLD Bank Election) ಸಂಸದ ಸುಧಾಕರ್ (K Sudhakar) ಬೆಂಬಲಿಗರು ಭರ್ಜರಿ ಜಯಭೇರಿ ಬಾರಿಸಿದ್ದಾರೆ.
Advertisement
ಚಿಕ್ಕಬಳ್ಳಾಪುರ ತಾಲೂಕು ಪಿಎಲ್‍ಡಿ ಬ್ಯಾಂಕ್ ಚುನಾವಣೆಯಲ್ಲಿನ 13 ನಿದೇರ್ಶಕರ ಸ್ಥಾನಗಳ ಪೈಕಿ 5 ಕ್ಷೇತ್ರಗಳಿಗೆ ಅವಿರೋಧವಾಗಿ ಆಯ್ಕೆಯಾಗಿತ್ತು. ಅದರಲ್ಲಿ ಸಂಸದ ಸುಧಾಕರ್ ಬೆಂಬಲಿತರೇ ಆಯ್ಕೆಯಾಗಿದ್ರು. ಒಬ್ರು ಕಾಂಗ್ರೆಸ್ ಬೆಂಬಲಿಸಿದ್ರು. ಇನ್ನೂ ಉಳಿದ 7 ಕ್ಷೇತ್ರಗಳಿಗೆ ಚುನಾವಣೆ ನಡೆದಿದ್ದು, ನ್ಯಾಯಾಲಯದ ತಡೆಯಾಜ್ಞೆ ಮೇರೆಗೆ ನಂದಿ ಕ್ಷೇತ್ರದ ಫಲಿತಾಂಶ ತಡೆಹಿಡಿಯಲಾಗಿದೆ. ಉಳಿದ 6 ಕ್ಷೇತ್ರಗಳ ಫಲಿತಾಂಶ ಪ್ರಕಟವಾಗಿ ಆರು ಕ್ಷೇತ್ರಗಳಲ್ಲೂ ಸಂಸದ ಸುಧಾಕರ್ ಬೆಂಬಲಿತರೇ ಗೆದ್ದು ಬೀಗಿದ್ದಾರೆ. ಹೀಗಾಗಿ ಫಲಿತಾಂಶದ ನಂತರ ಸಂಸದ ಸುಧಾಕರ್ ಪಿಎಲ್‍ಡಿ ಬ್ಯಾಂಕ್ ವರೆಗೂ ಮೆರವಣಿಗೆ ನಡೆಸಿ ಸಂಭ್ರಮಾಚರಣೆ ನಡೆಸಿದರು. ಈ ವೇಳೆ ಮಾತನಾಡಿದ ಸಂಸದ ಸುಧಾಕರ್, ಇದೊಂದು ಅಭೂತಪೂರ್ವ ಗೆಲುವು ತಂದುಕೊಟ್ಟಿದ್ದಾರೆ. ಎನ್‍ಡಿಯ ಮೈತ್ರಿ ಕೂಟದಿಂದ ರೈತರ ಅಭಿವೃದ್ಧಿ ಅಂತ ರೈತರು ಸ್ಪಷ್ಟ ಸಂದೇಶ ಕೊಟ್ಟಿದ್ದಾರೆ ಎಂದರು.
Advertisement
Advertisement
ರಾಜ್ಯ ಸರ್ಕಾರದ ವಿರುದ್ಧ ಸಂಸದ ಸುಧಾಕರ್ ವಾಗ್ದಾಳಿ:
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದಿಂದ ಜನ ಭ್ರಮನಿರಸನಗೊಂಡಿದ್ದಾರೆ. ಕಾಂಗ್ರೆಸ್ ಭ್ರಷ್ಟಾಚಾರದಲ್ಲಿ ಮುಳುಗಿ ಹೋಗಿದೆ. ಕ್ಷೇತ್ರದಲ್ಲಿ ಅಭಿವೃದ್ಧಿ ಶೂನ್ಯ, ನಾನು ಮಾಡಿದ ಕೆಲಸಗಳಿಗೆ ಫೈಂಟ್ ಬಳಿಯುವ ಕೆಲಸ ಮಾಡಿ ಉದ್ಗಾಟನೆ ಮಾಡೋದು ಬಿಟ್ಟು ಹೊಸ ಕೆಲಸ ಮಾಡುತ್ತಿಲ್ಲ. ರೈತರು ಎಲ್ಲಿ ಹೋದರೂ ಪ್ರೈಸ್ ಟ್ಯಾಗ್ ಇಟ್ಟಿದ್ದಾರೆ. ಪ್ರತಿ ಇಲಾಖೆಯಲ್ಲೂ ಭ್ರಷ್ಟಾಚಾರ ತಾಂಡವವಾಡುತ್ತಿದೆ. ವಿದ್ಯುತ್ ಲೋಡ್ ಶೆಡ್ಡಿಂಗ್ ಆರಂಭಿಸಿದ್ದಾರೆ, ಕರ್ನಾಟಕ ಕಾಂಗ್ರೆಸ್ ಆಡಳಿತದಿಂದ ಬೇಸತ್ತಿದ್ದಾರೆ. ಅದರ ಫಲಿತಾಂಶವೇ ಇಂದಿನ ಚುನಾವಣೆಯ ಜಯ ಎಂದು ಬಣ್ಣಿಸಿದರು.
Advertisement
ಪ್ರದೀಪ್ ಈಶ್ವರ್-ಮಾಜಿ ಶಾಸಕ ಕೆಪಿ ಬಚ್ಚೇಗೌಡ ವಿರುದ್ದ ವಾಗ್ದಾಳಿ.
ಇನ್ನೂ ಚುನಾವಣೆಯಲ್ಲಿ ಮಾಜಿ ಶಾಸಕರು ಹಾಗೂ ಹಾಲಿ ಶಾಸಕರು ಅಧಿಕೃತವಾಗಿ ಸೇರ್ಕೊಂಡು ತಂಡ ಮಾಡಿಕೊಂಡು ಫೀಲ್ಡ್‌ಗೆ ಇಳಿದ್ರು. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಅನಧಿಕೃತವಾಗಿ ರಾತ್ರೋರಾತ್ರಿ ತಂಡ ಮಾಡ್ಕೊಂಡು ನನ್ನ ಸೋಲಿಗೆ ಕಾರಣರಾದರು. ಆದ್ರೆ ಈಗ ಅವರು ಹಾಗೆ ಗಟ್ಟಿಯಾಗಿರಲಿ ಆಗ ಜನ ನಮಗೆ ಒಳ್ಳೆ ರೀತಿಯಲ್ಲಿ ಆರ್ಶೀವಾದ ಮಾಡ್ತಾರೆ. ಬಚ್ಚೇಗೌಡರೇ ಎಲ್ಲರಿಗಿಂತ ಅತಿಯಾದ ಸಂತೋಷ ನಿಮ್ಮ ತಂದೆಯವರಾದ ದಿವಂಗತ ಕೆ.ಬಿ ಪಿಳ್ಳಪ್ಪನವರು ಪಟ್ಟಿರ್ತಾರೆ. ಕೆ.ಬಿ ಪಿಳ್ಳಪ್ಪನವರು ಸದಾ ಕಾಂಗ್ರೆಸ್ ವಿರುದ್ಧ ಹೋರಾಟ ಮಾಡಿದವರು. ಆದ್ರೆ ನೀವು ಕಾಂಗ್ರೆಸ್ ಜೊತೆ ಕೈ ಜೋಡಿಸಿ ನನ್ನ ಸೋಲಿಸುವ ಪಾಪದ ಕೆಲಸ ಮಾಡಿದ್ರೀ ಅಂತ ಆಕ್ರೋಶ ಹೊರ ಹಾಕಿದ್ರು.
ಸಚಿವ ಸುಧಾಕರ್ ವಿರುದ್ಧ ಸಂಸದ ಸುಧಾಕರ್ ವಾಗ್ದಾಳಿ:
ಮಹಾಭಾರತದಲ್ಲಿ ಧರ್ಮದಿಂದ ಯುದ್ಧ ಗೆಲ್ಲುವಂತೆ ಶ್ರೀಕೃಷ್ಣಪರಮಾತ್ಮ ಹೇಳಿದ್ರು. ಸೂರ್ಯ ಮುಳುಗಿದ ಮೇಲೆ ಯುದ್ದ ಮಾಡಬೇಡಿ ಅಂದಿದ್ರು. ಆದ್ರೆ ನೀವು ರಾತ್ರಿ ಆದ ಮೇಲೆ ನಮ್ಮ ಅಭ್ಯರ್ಥಿ ಅಪಹರಿಸಿ ನಿಮ್ಮ ಅಭ್ಯರ್ಥಿ ನಾಮಿನೇಷನ್ ವಾಪಾಸ್ ಪಡೆದ್ರಿ ಇಂತಹ ರಾಜಕಾರಣ ಮಾಡಬೇಕಾ..? ಜಿಲ್ಲಾ ಉಸ್ತುವಾರಿ ಸಚಿವರು ಅವರ ಮನೆಗೆ ಹೋಗಿ ಆಸೆ ಆಮಿಷಗಳನ್ನ ಬೆದರಿಕೆ ಕೊಟ್ಟು ಕರ್ಕೊಂಡ್ರಲ್ಲ. ಚಿಕ್ಕಬಳ್ಳಾಪುರ ಅಷ್ಟು ಸುಲಭ ಅಲ್ಲ ಏನೋ ಅನ್ಕೊಬಿಟ್ಟಿದ್ರಾ ಸುಧಾಕರ್? ನಿಮ್ಮತ್ರ ಯಾರೋ ಕೆಲ ಭಟ್ಟಂಗಿಗಳು ನನ್ನತ್ರ ಲಾಭ ತಗೊಂಡು ನಿನ್ನತ್ರ ಬಂದವರಲ್ಲ, ಅವ್ರಿಂದ ರಾಜಕಾರಣ ಆಗಲ್ಲ, ಅವರು ಲಾಭ ಮಾಡಿಕೊಳ್ಳೋಕೆ ಬಂದಿರೋ ದಲ್ಲಾಳಿಗಳು, ಪೊಲೀಸರು ಅಧಿಕಾರಿಗಳ ಮಧ್ಯೆ ಲಾಭ ಮಾಡಿಕೊಳ್ಳೋಕೆ ಬಂದಿರೋವರು ಅಂತ ಆಕ್ರೋಶ ಹೊರಹಾಕಿದರು.