ಬೆಳಗಾವಿ: ಇಂದು ಜಿಲ್ಲೆಯ ಪಿಎಲ್‍ಡಿ ಬ್ಯಾಂಕ್‍ಗೆ ಚುನಾವಣೆ ನಡೆಯಲಿದೆ. ಸಮ್ಮಿಶ್ರ ಸರ್ಕಾರಕ್ಕೂ ಇಂದೇ ನಿರ್ಣಾಯಕ ದಿನವಾಗಿದ್ದು, ಲಕ್ಷ್ಮಿ ಗೆದ್ದರೆ ಕುಮಾರಸ್ವಾಮಿ ಆಡಳಿತಕ್ಕೆ ಕೊನೆಗಾಲ ಎದುರಾಗ್ತಿದೆಯಾ ಅನ್ನೋ ಪ್ರಶ್ನೆಯೊಂದು ಮೂಡಿದೆ.
ಇಂದಿನ ಪಿಎಲ್‍ಡಿ ಬ್ಯಾಂಕ್ ಚುನಾವಣೆ ಕುತೂಹಲ ಕೆರಳಿಸಿದ್ದು, ಜಾರಕಿಹೊಳಿ ಬ್ರದರ್ಸ್ ಮತ್ತು ಲಕ್ಷ್ಮಿ ಹೆಬ್ಬಾಳ್ಕರ್ ಸಮರ ಕ್ಲೈಮ್ಯಾಕ್ಸ್ ತಲುಪಿದೆ. 9 ಜನ ಪಿಎಲ್‍ಡಿ ಬ್ಯಾಂಕ್ ನಿರ್ದೇಶಕರನ್ನು ಹೊಂದಿರುವ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್, ಅಧ್ಯಕ್ಷ ಸ್ಥಾನಕ್ಕೆ ತಮ್ಮ ಬೆಂಬಲಿಗರನ್ನೇ ಕೂರಿಸಲು ಹಠ ಹಿಡಿದಿದ್ದಾರೆ. ಎಲ್ಲ ಬೆಂಬಲಿತ ಪಿಎಲ್‍ಡಿ ಬ್ಯಾಂಕ್ ನಿರ್ದೇಶಕರಿಗೆ ಪೊಲೀಸ್ ರಕ್ಷಣೆಗೆ ಮನವಿ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ಲಕ್ಷ್ಮಿ ಹೆಬ್ಬಾಳ್ಕರ್ – ಜಾರಕಿಹೊಳಿ ಕಗ್ಗಂಟು ಬಿಡಿಸಲು ಕಾಂಗ್ರೆಸ್ ಹೈಕಮಾಂಡ್ ಎಂಟ್ರಿ!
Advertisement
Advertisement
ಚುನಾವಣೆ ಪ್ರಕ್ರಿಯೆಯನ್ನು ವಿಡಿಯೋ ಚಿತ್ರಣ ಮಾಡಿಸಬೇಕೆಂದು ಜಿಲ್ಲಾಡಳಿತಕ್ಕೆ ಬೇಡಿಕೆ ಇಡಲಾಗಿದ್ದು, ಈಗಾಗಲೇ ಹೆಬ್ಬಾಳ್ಕರ್ ಬಣಕ್ಕೆ ನಾಮನಿರ್ದೇಶಿತ ಸದಸ್ಯ ಮಹಾದೇವ್ ಪಾಟೀಲ್ ಬೆಂಬಲ ಸೂಚಿಸಿದ್ದಾರೆ. ಇತ್ತ ಜಾರಕಿಹೊಳಿ ಸಹೋದರರು ತಮ್ಮದೇ ದಾಳ ಉರುಳಿಸಿದ್ದು, ಕಾನೂನು ಸುವ್ಯವಸ್ಥೆ ಹಾಳಾಗಬಹುದು. ಚುನಾವಣೆಯನ್ನೇ ಮುಂದೂಡಿ ಎಂದು ಜಿಲ್ಲಾಡಳಿತಕ್ಕೆ ಮನವಿ ಮಾಡಿಕೊಂಡಿದ್ದಾರೆ. ಬೆಂಬಲಿಗರನ್ನು ತಮ್ಮ ಬಳಿಯೇ ಉಳಿಸಿಕೊಂಡು ನೇರವಾಗಿ ಚುನಾವಣಾ ಸ್ಥಳಕ್ಕೆ ಕರೆದೊಯ್ಯಲು ವ್ಯವಸ್ಥೆ ಮಾಡಲಾಗಿದೆ. ಒಟ್ಟಿನಲ್ಲಿ ಗೆಲುವಿಗಾಗಿ ಎರಡು ಬಣದಿಂದ ಕೊನೆಗಳಿಗೆವರೆಗೆ ಶತ ಪ್ರಯತ್ನ ನಡೆಯಲಿದೆ.
Advertisement
ಮಹಾರಾಷ್ಟ್ರದ ಅಂಬೋಲಿ ಬಳಿಯ ರೆಸಾರ್ಟ್ ನಲ್ಲಿ ಲಕ್ಷ್ಮಿ ಹೆಬ್ಬಾಳ್ಕರ್ ಪಟಾಲಂ ಬೀಡುಬಿಟ್ಟಿದೆ. ಇಂದು ಬೆಳಗ್ಗೆ ಸದಸ್ಯರು ಲಕ್ಷ್ಮಿ ಹೆಬ್ಬಾಳ್ಕರ್ ಭೇಟಿ ಬಳಿಕ ಬ್ಯಾಂಕ್‍ಗೆ ಆಗಮಿಸಲಿದ್ದಾರೆ. ಲಕ್ಷ್ಮಿ ಹೆಬ್ಬಾಳ್ಕರ್ ಸಹೋದರ ಚನ್ನರಾಜ್ ಹಟ್ಟಿಹೊಳಿ ಸಂಪರ್ಕದಲ್ಲಿರುವ ಸದಸ್ಯರು ಬೇರೆ ಯಾರ ಸಂಪರ್ಕಕ್ಕೂ ಬಂದಿಲ್ಲ ಅನ್ನೋ ಮಾಹಿತಿ ಪಬ್ಲಿಕ್ ಟಿವಿಗೆ ಉನ್ನತ ಮೂಲಗಳಿಂದ ತಿಳಿದುಬಂದಿದೆ. ಇದನ್ನೂ ಓದಿ: ಯಾವುದೇ ಕಾರಣಕ್ಕೂ ಕ್ಷಮಿಸಲ್ಲ-ರಮೇಶ್ ಜಾರಕಿಹೊಳಿ ವಿರುದ್ಧ ಡಿಕೆಶಿ ಕೆಂಡಾಮಂಡಲ!
Advertisement
ಎಷ್ಟೇ ಎದುರಾಳಿಗಳು ಬಂದ್ರೂ ಕೂಡ ಮೆಟ್ಟಿ ನಿಂತಾಗ ಮಾತ್ರ ನಾಯಕರಾಗಲು ಸಾಧ್ಯ ಅಂತ ಬೆಳಗಾವಿ ಜಾರಕಿಹೊಳಿ ಬ್ರದರ್ಸ್ ವಿರುದ್ಧ ಕಾಂಗ್ರೆಸ್ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಗುಡುಗಿದ್ದಾರೆ. ರಾಜಕೀಯದಲ್ಲಿ ಇದೆಲ್ಲಾ ಸಹಜ, ಕಷ್ಟ ಬಂದಾಗ ಹೋರಾಟ ಮಾಡ್ಬೇಕು. ಒಂದೇ ಒಂದು ಹೆಜ್ಜೆ ಹಿಂದೆ ಇಡಲ್ಲ. ಏನೇ ಪರಿಸ್ಥಿತಿ ಬರಲಿ ಏನು ಬೇಕಾದ್ರೂ ಆಗ್ಲಿ. ಸಮಾಜದಲ್ಲಿ ಶಿಕ್ಷಕರಿಗೆ ಹೆದರಿದಷ್ಟು ಬೇರೆ ಯಾರಿಗೂ ಹೆದರಿಲ್ಲ. ಶಿಕ್ಷಕರ ಎದುರು ನಾನು ನಡುಗುತ್ತಿದ್ದೆ. ಇಂದು ಇಡೀ ಸಭಾಂಗಣವನ್ನೇ ನಡುಗಿಸುತ್ತೇನೆ. ನನಗೆ ಬೆಂಬಲ ಇದೆ. ಗೆಲುವು ನನ್ನದೇ ಅಂತ ಹೆಬ್ಬಾಳ್ಕರ್ ಹೇಳಿದ್ದಾರೆ. ಇದನ್ನೂ ಓದಿ: ಲಕ್ಷ್ಮೀ ಹೆಬ್ಬಾಳ್ಕರ್ ನ ಹದ್ದು ಬಸ್ತುನಲ್ಲಿ ಇಡದಿದ್ದರೇ, ಉಗ್ರ ಕ್ರಮ ಕೈಗೊಳ್ತೀವಿ: ರಮೇಶ್ ಜಾರಕಿಹೊಳಿ
ಲಕ್ಷ್ಮೀ ಹೆಬ್ಬಾಳ್ಕರ್ ಹಾಗೂ ಜಾರಕಿಹೊಳಿ ಬ್ರದರ್ಸ್ ಬಣದಲ್ಲಿ ಯಾರ್ಯಾರು ಇದ್ದಾರೆ?
ಲಕ್ಷ್ಮಿ ಹೆಬ್ಬಾಳ್ಕರ್ ಬಣ
1. ಮಹಾಂತೇಶ ಪಾಟೀಲ್
2. ಮುಷಪ್ಪ ಹಟ್ಟಿ
3. ಬಾಪುಸಾಹೇಬ್ ಜಮಾದಾರ್
4. ಚಿದಂಬರ ಕುಡಚಿ
5. ಬಾಪುಗೌಡ ಪಾಟೀಲ್
6. ಪರುಶರಾಮ ಪಾಟೀಲ್
7. ಮಹಾದೇವ ಪಾಟೀಲ್
8. ರೇಖಾ ಕುತ್ರೆ
9. ಗೀತಾ ಪಿಂಗಟ್
ಸತೀಶ ಜಾರಕಿಹೊಳಿ ಬಣ
1. ರಾಮಪ್ಪ ಗೋಳಿ
2. ಪ್ರಸಾದ ಪಾಟೀಲ
3. ಸಚಿನ್ ಕೋಲಾರ
4. ಶಂಕರ್ ನಾವಗೇಕರ್
5. ಮಹಾಂತೇಶ್ ಉಳ್ಳಾಗಡ್ಡಿ
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv