ಚಂಡೀಗಢ: ಮಾಜಿ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಅವರು ಪಂಜಾಬ್ ಲೋಕ ಕಾಂಗ್ರೆಸ್ ಪಕ್ಷವನ್ನು ಸ್ಥಾಪಿಸಿದ್ದು, ಫೆಬ್ರವರಿ 14ರ ರಾಜ್ಯ ವಿಧಾನಸಭಾ ಚುನಾವಣೆಗೆ ಪಕ್ಷದ ಚಿಹ್ನೆಯಾನ್ನಾಗಿ ಹಾಕಿ ಸ್ಟಿಕ್ ಮತ್ತು ಬಾಲ್ ಚುನಾವಣಾ ಆಯೋಗ ನೀಡಿದೆ.
ಈ ಕುರಿತಂತೆ ಅಮರಿಂದರ್ ಸಿಂಗ್ ಅವರು, ಪಂಜಾಬ್ ಲೋಕ ಕಾಂಗ್ರೆಸ್ ಹಾಕಿ ಸ್ಟಿಕ್ ಮತ್ತು ಬಾಲ್ ತನ್ನ ಪಕ್ಷದ ಚಿಹ್ನೆಯಾಗಿ ಪಡೆದಿದೆ ಎಂದು ಹೇಳಲು ಸಂತೋಷವಾಗುತ್ತಿದೆ. ಸದ್ಯ ಗುರಿಯನ್ನು ತಲುಪುವುದು ಮಾತ್ರ ಬಾಕಿ ಇದೆ ಎಂದು ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ: ಫಸ್ಟ್ ಟೈಂ ಮನುಷ್ಯನಿಗೆ ಹಂದಿ ಹೃದಯ ಕಸಿ ಶಸ್ತ್ರಚಿಕಿತ್ಸೆ ಯಶಸ್ವಿ
Happy to inform that Punjab Lok Congress has received it’s Party Symbol – Hockey Stick and Ball.#Bas_Hun_Goal_Krna_Baki ???? pic.twitter.com/7nv0Nv0XNX
— Punjab Lok Congress (@plcpunjab) January 10, 2022
ರಾಜ್ಯ ವಿಧಾನಸಭಾ ಚುನಾವಣೆಯನ್ನು ಎದುರಿಸಲು ಪಿಎಲ್‍ಸಿ ಚುನಾವಣೆಗೂ ಮುನ್ನವೇ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿದೆ. ಪಂಜಾಬ್ ಕಾಂಗ್ರೆಸ್ ಮುಖ್ಯಸ್ಥ ನವಜೋತ್ ಸಿಂಗ್ ಸಿಧು ಅವರೊಂದಿಗಿನ ವಿವಾದಗಳ ನಂತರ ಕಳೆದ ವರ್ಷ ರಾಜೀನಾಮೆ ನೀಡಿದ್ದ ಅಮರಿಂದರ್ ಸಿಂಗ್ ಅವರು ಕಾಂಗ್ರೆಸ್ ತೊರೆದು ನಂತರ ತಮ್ಮದೇ ಆದ ರಾಜಕೀಯ ಸಂಘಟನೆ ಪಂಜಾಬ್ ಲೋಕ ಕಾಂಗ್ರೆಸ್ ಸ್ಥಾಪಿಸಿದ್ದರು. ಫೆಬ್ರವರಿ 14 ರಂದು ಪಂಜಾಬ್‍ನಲ್ಲಿ ಮತದಾನ ನಡೆಯಲಿದ್ದು, ಮಾರ್ಚ್ 10 ರಂದು ಮತ ಎಣಿಕೆ ನಡೆಯಲಿದೆ. ಇದನ್ನೂ ಓದಿ: ಮಕರ ಸಂಕ್ರಾಂತಿಗೆ ಗಾಳಿಪಟ ಹಾರಿಸೋದೇಕೆ? ವಿಶೇಷತೆ ಏನು?