ಮುಂಬೈ: ಮಸೀದಿಗಳ ಹೊರಗೆ ಹನುಮಾನ್ ಚಾಲೀಸಾ ನುಡಿಸುವುದು ಒಂದು ದಿನದ ವಿಷಯವಲ್ಲ, ಧ್ವನಿವರ್ಧಕಗಳ ಕುರಿತು ಸುಪ್ರೀಂ ಕೋರ್ಟ್ ಹೇಳುವವರೆಗೂ ಮತ್ತು ಸರ್ಕಾರ ಈ ಪರಿಸ್ಥಿತಿಯನ್ನು ಪರಿಹರಿಸುವವರೆಗೆ ಮುಂದುವರಿಸಬೇಕು ಎಂದು ಮಹಾರಾಷ್ಟ್ರ ನವನಿರ್ಮಾಣ ಸೇನಾ(ಎಂಎನ್‍ಎಸ್) ಅಧ್ಯಕ್ಷ ರಾಜ್ ಠಾಕ್ರೆ ಬುಧವಾರ ಹೇಳಿದರು.
ಇದು ಧಾರ್ಮಿಕ ವಿಷಯವಲ್ಲ, ಸಾಮಾಜಿಕ ಸಮಸ್ಯೆಯಾಗಿದೆ. ಇದನ್ನು ಮೊದಲು ಅರ್ಥಮಾಡಿಕೊಳ್ಳಬೇಕು. ಈ ಕುರಿತು ಕೆಲಸ ಮಾಡದಿದ್ದರೆ, ಪ್ರತಿಭಟನೆಯೊಂದೇ ಇದರ ಮಾರ್ಗವಾಗಿದೆ ಎಂದು ಹೇಳಿದರು.
Advertisement
Advertisement
ನನಗೆ ತಿಳಿದಿರುವಂತೆ, ಮುಂಬೈನಲ್ಲಿ 1,140 ಕ್ಕೂ ಹೆಚ್ಚು ಮಸೀದಿಗಳಿವೆ. ಇವುಗಳಲ್ಲಿ 135 ಮಸೀದಿಗಳು ಮಾರ್ಗಸೂಚಿಗಳನ್ನು ಉಲ್ಲಂಘಿಸಿ ಮುಂಜಾನೆ 5 ಗಂಟೆಗೆ ಅಜಾನ್ ಆಡಿದವು. ಈ ಮಸೀದಿಗಳ ವಿರುದ್ಧ ನೀವು ಯಾವ ಕ್ರಮ ತೆಗೆದುಕೊಳ್ಳುತ್ತೀರಿ ಎಂದು ನಾನು ಪೆÇಲೀಸರನ್ನು ಕೇಳಲು ಬಯಸುತ್ತೇನೆ ಎಂದು ತಿಳಿಸಿದರು.
Advertisement
ಮುಂಬೈ ಪೆÇಲೀಸರು 140ಕ್ಕೂ ಹೆಚ್ಚು ಎಂಎನ್‍ಎಸ್ ಕಾರ್ಯಕರ್ತರನ್ನು ಬಂಧಿಸಿದ್ದಾರೆ. ಎಂಎನ್‍ಎಸ್ ಮುಖ್ಯಸ್ಥರು ತಾವು ಮತ್ತು ತಮ್ಮ ಪಕ್ಷವು ಕಾನೂನುಬದ್ಧವಾಗಿ ಧ್ವನಿವರ್ಧಕಗಳನ್ನು ತೆಗೆಯುವಂತೆ ಪ್ರತಿಭಟನೆಯನ್ನು ಮಾಡುತ್ತಿದ್ದೇವೆ. ಅಲ್ಲದೇ ಕೆಲವು ದೇವಸ್ಥಾನಗಳಲ್ಲೂ ಅಕ್ರಮ ಧ್ವನಿವರ್ಧಕಗಳನ್ನು ಅಳವಡಿಸಲಾಗಿದೆ ಎಂದರು. ಇದನ್ನೂ ಓದಿ: ಆರೋಗ್ಯಮೇಳದಲ್ಲಿ ಭಾಗವಹಿಸಿ ಆರೋಗ್ಯಕರ ಜೀವನ ನಿಮ್ಮದಾಗಿಸಿಕೊಳ್ಳಿ: ಸುಧಾಕರ್
Advertisement
ಮಸೀದಿಗಳಿಂದ ಎಲ್ಲ ಅಕ್ರಮ ಧ್ವನಿವರ್ಧಕಗಳನ್ನು ತೆಗೆದುಹಾಕಬೇಕು ಎಂಬುದು ನನ್ನ ಉದ್ದೇಶ. ಅವರನ್ನು ತೊಲಗಿಸುವವರೆಗೆ ನಾವು ನಮ್ಮ ಹೋರಾಟವನ್ನು ಮುಂದುವರಿಸುತ್ತೇವೆ. ಸುಪ್ರೀಂ ಕೋರ್ಟ್ ನಿಯಮಗಳ ಪ್ರಕಾರ, ಧ್ವನಿವರ್ಧಕವು 45-55 ಡೆಸಿಬಲ್‍ಗಳನ್ನು ಮೀರಬಾರದು ಎಂದು ವಿವರಿಸಿದರು.
ರಾಜ್ ಠಾಕ್ರೆ ಅವರು ಈ ಹಿಂದೆ ಮೇ 3 ರಂದು ರಾಜ್ಯ ಸರ್ಕಾರ ಮತ್ತು ಮಸೀದಿಗಳಿಗೆ ಧ್ವನಿವರ್ಧಕವನ್ನು ತೆಗೆದುಹಾಕುವಂತೆ ಗಡುವನ್ನು ನೀಡಿದ್ದರು. ಅದಕ್ಕೂ ಮೊದಲು ಅವರು ಎಲ್ಲ ಅಕ್ರಮ ಧ್ವನಿವರ್ಧಕಗಳನ್ನು ತೆಗೆದುಹಾಕಬೇಕೆಂದು ಒತ್ತಾಯಿಸಿದ್ದರು.
ಔರಂಗಾಬಾದ್‍ನಲ್ಲಿ ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದ ರಾಜ್ ಠಾಕ್ರೆ, ಮೇ 3 ರ ಗಡುವಿನ ನಂತರ ರಾಜ್ಯದಲ್ಲಿ ಏನಾಗುತ್ತದೆ ಎಂಬುದಕ್ಕೆ ನಾನು ಜವಾಬ್ದಾರನಾಗಿರುವುದಿಲ್ಲ ಎಂದಿದ್ದರು. ಆದರೆ ಈದ್ ಮೇ 4ಕ್ಕೆ ಮುಂದೆ ಹೋಗಿದ್ದಕ್ಕೆ ಈದ್‍ನಲ್ಲಿ ಘರ್ಷಣೆ ಬೇಡವೆಂದು ತಮ್ಮ ಪಕ್ಷದ ಕಾರ್ಯಕರ್ತರನ್ನು ಒತ್ತಾಯಿಸಿದರು. ಈ ಹಿನ್ನೆಲೆ ಮೇ 4 ರಂದು ಎಂಎನ್‍ಎಸ್ ಕಾರ್ಯಕರ್ತರು ಮುಂಬೈ, ನವಿ ಮುಂಬೈ ಮತ್ತು ಥಾಣೆಯ ಅನೇಕ ಮಸೀದಿಗಳ ಮುಂದೆ ಬೆಳಗ್ಗೆ ಆಜಾನ್ ಸಮಯದಲ್ಲಿ ಹನುಮಾನ್ ಚಾಲೀಸಾವನ್ನು ನುಡಿಸಿದರು. ಇದನ್ನೂ ಓದಿ: ಆತಂಕದಿಂದ ಲಗೇಜ್ ತೆಗೆದುಕೊಂಡು ಎಲ್ಲಿಗೆ ಓಡಿದರು ಆಲಿಯಾ ಭಟ್