ಕೊರೊನಾ ಇದ್ದರೂ T20 ವಿಶ್ವಕಪ್ ಆಡಲು ಆಟಗಾರರಿಗೆ ಅವಕಾಶ!

Public TV
1 Min Read
T20 WORLD CUP 2

ಸಿಡ್ನಿ: ಆಸ್ಟ್ರೇಲಿಯಾದಲ್ಲಿ (Australia) ಟಿ20 ವಿಶ್ವಕಪ್ (T20 World Cup) ಚುಟುಕು ಸಮರ ಆರಂಭಗೊಂಡಿದೆ. ಈ ಟೂರ್ನಿಯಲ್ಲಿ ಕೊರೊನಾ (Corona) ಪಾಸಿಟಿವ್ ಆದರೂ ಆಟಗಾರ ಆಡಲು ಐಸಿಸಿ (ICC) ಅವಕಾಶ ನೀಡಿದೆ ಎಂದು ಮೂಲಗಳಿಂದ ವರದಿಯಾಗಿದೆ.

851527 corona testing kit

ಐಸಿಸಿಯ ಸೂಚನೆ ಪ್ರಕಾರ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾಗವಹಿಸುವ ಆಟಗಾರರಿಗೆ ಕೋವಿಡ್-19 (Covid-19) ಟೆಸ್ಟ್ ಕಡ್ಡಾಯವಲ್ಲ. ಆಟಗಾರನಿಗೆ ಕೊರೊನಾ ಪಾಸಿಟಿವ್ ವರದಿಯಾದರೂ ಐಸೋಲೇಶನ್‍ನಲ್ಲಿರಬೇಕೆಂದು ಕಡ್ಡಾಯ ನಿಯಮವಿಲ್ಲ. ತಂಡದ ವೈದ್ಯಕೀಯ ತಂಡ ಯಾವುದೇ ಸಮಸ್ಯೆ ಇಲ್ಲ ಎಂದರೆ ಪಾಸಿಟಿವ್ ವರದಿಯಾದ ಆಟಗಾರನೂ ಆಡಬಹುದಾಗಿದೆ ಎಂದು ತಿಳಿಸಿರುವುದಾಗಿ ವರದಿಯಾಗಿದೆ. ಇದನ್ನೂ ಓದಿ: 2023ರ IPL ಹರಾಜಿಗೆ ಡೇಟ್ ಫಿಕ್ಸ್ – ಬೆಂಗಳೂರಿನಲ್ಲಿ ನಡೆಯಲಿದೆ ಹರಾಜು

T20 WORLD CUP 1

ಅಲ್ಲದೇ ಪಂದ್ಯ ಆರಂಭಕ್ಕೂ ಮುನ್ನ ಆಟಗಾರನಿಗೆ ಕೊರೊನಾ ಪಾಸಿಟಿವ್ ವರದಿಯಾದರೆ ಆತನನ್ನು ತಂಡದಿಂದ ಹೊರಗಿಡುವ ಅವಕಾಶವಿದೆ. ಆತನಿಗೆ ಆ ಬಳಿಕ ನೆಗೆಟಿವ್ ಬಂದರೂ ತಂಡದಲ್ಲಿ ಆಡುವ ಅವಕಾಶವಿದೆ. ಇದನ್ನೂ ಓದಿ: ರೋಹಿತ್‍ಗೆ ನೆಟ್ಸ್‌ನಲ್ಲಿ ಇನ್‍ಸ್ವಿಂಗ್ ಎಸೆದ ಹನ್ನೊಂದರ ಪೋರ

covid 19 5070658 1280

ಈ ನಿಯಮ ಇದು ಮೊದಲೇನಲ್ಲ. ಈ ಹಿಂದೆ ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆದ ಕಾಮನ್‍ವೆಲ್ತ್ ಗೇಮ್ಸ್  (Birmingham Commonwealth Games) ಕ್ರಿಕೆಟ್ ಟೂರ್ನಿಯ ಫೈನಲ್‍ನಲ್ಲಿ ಆಸ್ಟ್ರೇಲಿಯಾದ ಆಲ್‍ರೌಂಡರ್ ತಾಲಿಯಾ ಮೆಕ್‍ಗ್ರಾತ್‍ಗೆ ಕೊರೊನಾ ಪಾಸಿಟಿವ್ ವರದಿಯಾಗಿತ್ತು. ಆದರೂ ತಂಡದೊಂದಿಗೆ ಇದ್ದು ಆಡಿದ್ದರು. ಜೊತೆಗೆ ಮಾಸ್ಕ್ ಧರಿಸಿಕೊಂಡಿದ್ದರು.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *