ಬೆಂಗಳೂರು: ಆನ್‌ಲೈನ್ ಜೂಜಿಗೆ (Online Game) ದಾಸನಾಗಿದ್ದವನು ಹಣಕ್ಕಾಗಿ ಕಿಡ್ನಾಪ್ ಮಾಡಿ ಇದೀಗ ಸಿಕ್ಕಿಬಿದ್ದ ಪ್ರಸಂಗವೊಂದು ಸಿಲಿಕಾನ್ ಸಿಟಿ ಬೆಂಗಳೂರಿನಲಿ ನಡೆದಿದೆ.
ಆರೋಪಿಯನ್ನು ಜೀವನ್ ಎಂದು ಗುರುತಿಸಲಾಗಿದೆ. ಈತ ಆಕ್ಸ್‌ಫರ್ಡ್ ಕಾಲೇಜು ವಾರ್ಡನ್ ಆಗಿದ್ದು, ದುಡ್ಡಿಗಾಗಿ ಹೈಡ್ರಾಮಾ ಸೃಷ್ಠಿಸಿ ಇದೀಗ ಪೊಲೀಸರ ಅಥಿತಿಯಾಗಿದ್ದಾನೆ. ಇದನ್ನೂ ಓದಿ: ಗೋಬಿ, ಕಾಟನ್ ಕ್ಯಾಂಡಿ ಆಯ್ತು ಈಗ ಕಬಾಬ್, ಪಾನಿಪುರಿ ಟೆಸ್ಟ್‌ಗೆ ಪ್ಲಾನ್!
Advertisement
ಜೀವನ್ ಚಿಕ್ಕಮ್ಮ ಸುನಂದಾ ಕೂಡ ಅದೇ ಕಾಲೇಜಿನಲ್ಲಿ ಕೆಲಸ ಮಾಡ್ತಿದ್ದರು. ಇತ್ತ ತಲೆಯ ಮೇಲೆ ಟೊಮೆಟೋ ಸಾಸ್ ಚೆಲ್ಲಿಕೊಂಡು ಜೀವನ್ ತನ್ನ ಚಿಕ್ಕಮ್ಮನಿಗೆ ಫೋಟೋಗಳನ್ನು ಕಳಿಸಿದ್ದಾನೆ. ಮಗನ ಮಾತು ಕೇಳಿದ ಕೂಡಲೇ ಗಾಬರಿಗೊಂಡಿರುವ ಸುನಂದಾ ಅವರು ಬೊಮ್ಮನಹಳ್ಳಿ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸ್ ವಿಚಾರಣೆ ವೇಳೆ ಜೀವನ್ ಹಣಕ್ಕಾಗಿ ಗೆಳೆಯರೊಂದಿಗೆ ಸೇರಿ ಕಿಡ್ನಾಪ್ ನಾಟಕವಾಡಿರೋದು ಬೆಳಕಿಗೆ ಬಂದಿದೆ.
Advertisement
Advertisement
ಗೋಲ್ಡ್ 369 ಎಂಬ ಆನ್‌ಲೈನ್ ಆಪ್ ನಲ್ಲಿ ಜೂಜಾಡಿ ಜೀವನ್ ಹಣ ಕಳೆದುಕೊಂಡಿದ್ದಾನೆ. ಮತ್ತೆ ಜೂಜಾಡಲು ಹಣವಿಲ್ಲದಿದ್ದಾಗ ಗೆಳೆಯರೊಂದಿಗೆ ಸೇರಿ ಕಿಡ್ನಾಪ್ ಆಗಿದ್ದೇನೆಂದು ನಾಟಕವಾಡಿದ್ದ. ಅಲ್ಲದೇ ಕಿಡ್ನಾಪ್ ಕಥೆ ಕಟ್ಟುವ ಮೂಲಕ 20 ಸಾವಿರ ಹಣವನ್ನ ಅಕೌಂಟ್ ಗೆ ಹಾಕಿಸಿಕೊಂಡಿದ್ದನು.
Advertisement
ಸದ್ಯ ಬೊಮ್ಮನಹಳ್ಳಿ ಪೊಲೀಸರಿಂದ ಆರೋಪಿ ಜೀವನ್, ವಿನಯ್, ಪೂರ್ಣೇಶ್, ಪ್ರೀತಮ್ ಹಾಗೂ ರಾಜುವನ್ನು ಪೊಲೀಸರು ಬಂಧನ ಮಾಡಿದ್ದಾರೆ.
ಆನೇಕಲ್ ನ ಬಿಂಗಿಪುರ ಮನೆಯೊಂದರಲ್ಲಿ ವಾಸವಾಗಿ ಆನ್‌ಲೈನ್ ಜೂಜಾಡ್ತಿದ್ದ ವೇಳೆ ಬಂಧಿಸಲಾಗಿದೆ.