ಕೆಜಿಎಫ್, ಕಾಂತಾರ, ಸೋಜುಗದ ಸೂಜಿ ಮಲ್ಲಿಗೆ ಹೀಗೆ ಹತ್ತು ಹಲವು ಗೀತೆಗಳಿಗೆ ಧ್ವನಿಯಾದ ಗಾಯಕಿ ಅನನ್ಯ ಭಟ್ (Ananya Bhat) ಹಸೆಮಣೆ ಏರಿದ್ದಾರೆ. ಇದೇ ನವೆಂಬರ್ 9ರಂದು ತಿರುಪತಿಯಲ್ಲಿ (Tirupati) ಕುಟುಂಬಸ್ಥರು, ಆಪ್ತ ಬಳಗದ ಸಮ್ಮುಖದಲ್ಲಿ ಸರಳವಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.

ಇಂಟರ್‌ನ್ಯಾಷನಲ್ ಮ್ಯೂಜಿಷಿಯನ್, ಡ್ರಮ್ಮರ್ ಮಂಜು ಅವರನ್ನ ವರೆಸಿದ್ದಾರೆ ಅನನ್ಯ. ಖ್ಯಾತ ಜ್ಯೋತಿಷ್ಯ ಶಾಸ್ತ್ರದ ಲೇಖಕರು ಪಂಡಿತರು ಆದ ಪಂಡಿತ್ ಡಾ.ಅರುಣ್ ಗುರೂಜಿ ಅವರ ನೇತೃತ್ವದಲ್ಲಿ ತಿರುಪತಿಯಲ್ಲಿ ವಿವಾಹವಾಗಿದ್ದಾರೆ.ಇದನ್ನೂ ಓದಿ: ತಿರುವೀರ್ ನಟನೆಯ ಹೊಸ ಚಿತ್ರಕ್ಕೆ ಚಾಲನೆ: ನಾಲ್ಕು ಭಾಷೆಯಲ್ಲಿ ನಿರ್ಮಾಣ
ಚಲನಚಿತ್ರ ಗೀತೆ, ಭಕ್ತಿ ಗೀತೆ, ಜಾನಪದ ಗೀತೆಗಳನ್ನ ತಮ್ಮ ಮಧುರ ಕಂಠದಿಂದ ಹಾಡಿ ಖ್ಯಾತಿ ಪಡೆದಿರುವ ಅನನ್ಯ ಭಟ್ ತಮ್ಮದೇ ಕ್ಷೇತ್ರದಲ್ಲಿ ಖ್ಯಾತಿ ಪಡೆದಿರುವ ಮಂಜು ಅವರನ್ನ ವಿವಾಹವಾಗಿದ್ದಾರೆ. ಅನನ್ಯ ಭಟ್ ಫೋಟೋಗಳು ಜಾಲತಾಣದಲ್ಲಿ ವೈರಲ್ ಆಗಿದ್ದು, ಅವರ ಅಭಿಮಾನಿಗಳು ಶುಭ ಹಾರೈಸುತ್ತಿದ್ದಾರೆ.



