ನವದೆಹಲಿ: ಜಾಗರಣೆಗಾಗಿ (Jagran) ಭಕ್ತರಿಗೆ ಕೂರಲು ಸಿದ್ಧಪಡಿಸಿದ್ದ ವೇದಿಕೆ (Stage) ಕುಸಿದು ಬಿದ್ದ ಪರಿಣಾಮ ಓರ್ವ ಮಹಿಳೆ ಸಾವನ್ನಪ್ಪಿದ್ದು, 17 ಮಂದಿ ಗಾಯಗೊಂಡ ಘಟನೆ ದೆಹಲಿಯ (New Delhi) ಕಲ್ಕಾಜಿ ದೇಗುಲದಲ್ಲಿನಡೆದಿದೆ.
ಘಟನೆಯಲ್ಲಿ 45 ವರ್ಷದ ಮಹಿಳೆ ಸಾವನ್ನಪ್ಪಿದ್ದಾರೆ. ಘಟನೆ ಸಂಭವಿಸಿದ ಕೂಡಲೇ ಮಹಿಳೆಯನ್ನು ಇಬ್ಬರು ವ್ಯಕ್ತಿಗಳು ಆಟೋ ರಿಕ್ಷಾದಲ್ಲಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಅಷ್ಟುಹೊತ್ತಿಗಾಗಲೇ ಮಹಿಳೆ ಸಾವನ್ನಪ್ಪಿದ್ದರು. ಶುಕ್ರವಾರ ರಾತ್ರಿ ಅನುಮತಿ ಇಲ್ಲದೇ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ 1,600ಕ್ಕೂ ಹೆಚ್ಚು ಜನರು ಭಾಗವಹಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಹನುಮಧ್ವಜ ಕೆಳಗಿಳಿಸಿದ ಪೊಲೀಸರು – ಸ್ಥಳೀಯರ ಮೇಲೆ ಲಾಠಿ ಚಾರ್ಚ್, ಕೆರಗೋಡು ಗ್ರಾಮ ಉದ್ವಿಗ್ನ
Advertisement
Advertisement
ಘಟನೆ ಕುರಿತು ಮಾತನಾಡಿದ ಹಿರಿಯ ಪೊಲೀಸ್ ಅಧಿಕಾರಿ, ನಮಗೆ ಮಧ್ಯರಾತ್ರಿ 12:30ರ ಸುಮಾರಿಗೆ ಕಲ್ಕಾಜಿ ದೇವಸ್ಥಾನದಲ್ಲಿ (Kalkaji Temple) ಜಾಗರಣೆಗಾಗಿ ಸಿದ್ಧಪಡಿಸಿದ್ದ ವೇದಿಕೆ ಕುಸಿದುಬಿದ್ದಿದೆ ಎಂದು ದೂರವಾಣಿ ಕರೆ ಮೂಲಕ ಮಾಹಿತಿ ಬಂದಿತು. ವಿಷಯ ತಿಳಿದ ತಕ್ಷಣ ಪೊಲೀಸ್ ತಂಡ ಸ್ಥಳಕ್ಕೆ ದೌಡಾಯಿಸಿತ್ತು. ಈ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಅಪ್ರಾಪ್ತೆಗೆ ಕಿರುಕುಳ; ಅನ್ಯಕೋಮಿನ ಯುವಕ ಅರೆಸ್ಟ್ – ಹಿಂದೂ ಕಾರ್ಯಕರ್ತರಿಂದ ಪೊಲೀಸ್ ಠಾಣೆಗೆ ಮುತ್ತಿಗೆ
Advertisement
ಕಾರ್ಯಕ್ರಮ ಆಯೋಜಕರು ಮತ್ತು ಇತರ ವಿಐಪಿಗಳ ಕುಟುಂಬಗಳು ಕುಳಿತುಕೊಳ್ಳಲು ನಿರ್ಮಿಸಲಾದ ಮರದ ವೇದಿಕೆ ಅತಿಯಾದ ತೂಕದಿಂದ ವಾಲಲು ಪ್ರಾರಂಭಿಸಿದ್ದು, ಮಧ್ಯರಾತ್ರಿಯ ಸುಮಾರಿಗೆ ಭಕ್ತರ ಮೇಲೆ ಬಿದ್ದಿದೆ. ವೇದಿಕೆ ಕುಸಿದ ಬಳಿಕ ಜನರು ಭಯದಿಂದ ಚೀರಾಡುತ್ತಾ ಸ್ಥಳದಿಂದ ಹೊರಗೆ ಓಡಿಹೋಗಿದ್ದಾರೆ. ಈ ವೇಳೆ ಕಾಲ್ತುಳಿತ ಉಂಟಾಗಿ ಹಲವರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಎಐಐಎಮ್‌ಎಸ್ ಟ್ರಾಮಾ ಸೆಂಟರ್, ಸಫ್ದರ್‌ಜಂಗ್ ಆಸ್ಪತ್ರೆ ಮತ್ತು ಸಾಕೇತ್‌ನ ಒಂಘಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರಲ್ಲಿ ಹಲವರಿಗೆ ಗಂಭೀರ ಗಾಯವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಗುಡ್‌ನ್ಯೂಸ್ – ಇನ್ಮುಂದೆ ಬೆಂಗಳೂರು ಒನ್‌ನಲ್ಲೇ ಆಸ್ತಿ ತೆರಿಗೆ ಪಾವತಿಗೆ ಅವಕಾಶ!
Advertisement
ಕಾರ್ಯಕ್ರಮಕ್ಕೆ ಅನುಮತಿ ನೀಡದಿದ್ದರೂ, ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಸಾಕಷ್ಟು ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ನಿರ್ಲಕ್ಷ್ಯದಿಂದ ಸಾವಿಗೆ ಕಾರಣವಾದ ಮತ್ತು ಜನರ ಸುರಕ್ಷತೆಗೆ ಅಪಾಯವನ್ನುಂಟುಮಾಡಿದ ಕಾರ್ಯಕ್ರಮದ ಆಯೋಜಕರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಇದನ್ನೂ ಓದಿ: ರಾತ್ರೋರಾತ್ರಿ ಹನುಮ ಧ್ವಜ ತೆರವಿಗೆ ಅಧಿಕಾರಿಗಳ ಎಂಟ್ರಿ – ರೊಚ್ಚಿಗೆದ್ದ ಗ್ರಾಮಸ್ಥರು