ಕೋಲಾರ: ಜೀವರಾಶಿಗೆ ಮಾರಕವಾಗಿರುವ ಪ್ಲಾಸ್ಟಿಕ್ ಭೂಮಿ ಮೇಲೆ ಸೃಷ್ಟಿಯಾಗಿರುವ ಕಳೆಯಾಗಿದ್ದು, ನಾಶ ಮಾಡೋದು ಅಸಾಧ್ಯ. ಹೀಗಿರುವಾಗ ಕೋಲಾರದಲ್ಲೊಂದು ತಂಡ ಅದನ್ನು ಸಮರ್ಪಕವಾಗಿ ಮರು ಬಳಕೆ ಮಾಡುವ ಜೊತೆಗೆ ನಿರ್ವಹಣೆ ಮಾಡಿ ಪ್ರಕೃತಿಗೆ ಉಸಿರಾಡಲು ದಾರಿ ಮಾಡಿಕೊಟ್ಟಿದ್ದಾರೆ.
ಪ್ರವಾಸಿ ತಾಣದ ಬೆಟ್ಟಗುಡ್ಡ ಮರಗಿಡಗಳ ನಡುವೆ ಬಿದ್ದಿರುವ ರಾಶಿ ರಾಶಿ ಪ್ಲಾಸ್ಟಿಕ್‍ನ್ನು ಆರಿಸಿಕೊಂಡು ತಂದು ಒಂದೆಡೆ ಸುರಿಯುತ್ತಿರುವ ವಿದ್ಯಾರ್ಥಿಗಳು ನೀರಿನ ಬಾಟಲ್‍ಗಳಿಗೆ ತುಂಬಿಸುತ್ತಿರುವ ಇನ್ನೊಂದು ತಂಡ, ಇದೆಲ್ಲಾ ಕಂಡುಬಂದಿದ್ದು, ಕೋಲಾರದ ದಕ್ಷಿಣ ಕಾಶಿ ಅಂತರಗಂಗೆಯಲ್ಲಿ. ಹೌದು ಪ್ರವಾಸಿ ತಾಣಗಳು ಸೇರಿದಂತೆ ಎಲ್ಲಂದರಲ್ಲಿ ಪ್ಲಾಸ್ಟಿಕ್ ಮಾಲಿನ್ಯ ಹೆಚ್ಚಾಗಿದೆ, ಇದರಿಂದ ಕೇವಲ ಪ್ರಕೃತಿಗಷ್ಟೇ ಅಲ್ಲಾ ಮಾನವನಿಗೂ ಮಾರಕವಾಗುತ್ತಿದೆ. ಇದನ್ನೂ ಓದಿ: ಮೋದಿ ಸರ್ಕಾರ ನಿದ್ರಿಸುತ್ತಿದೆ- ಲಾರಿ ಚಿತ್ರ ಹಂಚಿಕೊಂಡ ತರೂರ್
Advertisement
Advertisement
ಹೀಗಿರುವಾಗ ಅದನ್ನು ನಾಶ ಮಾಡೋದಾದರೂ ಹೇಗೆ ಅನ್ನೋ ಆತಂಕದಲ್ಲಿ ಎಲ್ಲರು ಇರುವಾಗ ಕೋಲಾರದಲ್ಲಿ ಸಮಾನ ಮನಸ್ಕರ ತಂಡವೊಂದು ಪ್ಲಾಸ್ಟಿಕ್ ತ್ಯಾಜ್ಯ ಮುಕ್ತ ಕೋಲಾರ ಆಂದೋಲನ ಸಮಿತಿ ರಚನೆ ಮಾಡಿಕೊಂಡು ಸದ್ದಿಲ್ಲದೆ ಪ್ಲಾಸ್ಟಿಕ್‍ನ್ನು ಮರುಬಳಕೆ ಮಾಡುತ್ತಿದ್ದಾರೆ. ಹೀಗೆ ಪ್ರವಾಸಿ ತಾಣಗಳಲ್ಲಿ ಇರುವ ಪ್ಲಾಸ್ಟಿಕ್ ಕವರ್ ಸೇರಿ ಹಲವು ತ್ಯಾಜ್ಯಗಳನ್ನು ಸಂಗ್ರಹಿಸಿ ಅದನ್ನು ನೀರಿನ ಪ್ಲಾಸ್ಟಿಕ್ ಬಾಟಲ್‍ಗಳಲ್ಲಿ ಬಿಗಿಯಾಗಿ ತುಂಬಿಸಿ ಅದನ್ನು ಪ್ಲಾಸ್ಟಿಕ್ ಇಟ್ಟಿಗೆ ರೂಪ ಕೊಡಲಾಗುತ್ತಿದೆ. ಇದನ್ನೂ ಓದಿ: ರಾಜ್ಯದಲ್ಲಿ ಪೆಟ್ರೋಲ್ 100.63, ಡೀಸೆಲ್ 85.03ರೂ. – ಸರ್ಕಾರದಿಂದ ಅಧಿಕೃತ ಅಧಿಸೂಚನೆ
Advertisement
ಹೀಗೆ ಕಳೆದ 2 ವರ್ಷದಿಂದ ಸಮಾನ ಮನಸ್ಥಿತಿ ಹೊಂದಿರುವ ವಿವಿಧ ಸಂಘಟನೆಗಳು ಒಂದು ವೇದಿಕೆ ಮಾಡಿಕೊಂಡು ಈವರೆಗೆ ಸುಮಾರು ಒಂದು ಲಕ್ಷಕ್ಕೂ ಅಧಿಕ ಪ್ಲಾಸ್ಟಿಕ್ ಬ್ರಿಕ್ಸ್‍ಗಳನ್ನ ತಯಾರಿ ಮಾಡಿದ್ದಾರೆ. ಇಟ್ಟಿಗೆ ರೀತಿಯಲ್ಲಿ ಬಾಟಲ್‍ಗಳಲ್ಲಿ ಪ್ರಕೃತಿಗೆ ಮಾರಕವಾಗುವ ಪ್ಲಾಸ್ಟಿಕ್ ಕವರಗಳನ್ನು ಅದರೊಳಗೆ ಬಿಗಿಯಾಗಿ ತುಂಬಿಡಲಾಗುತ್ತಿದೆ. ಹೀಗೆ ಮಾಡಲಾದ ಪ್ಲಾಸ್ಟಿಕ್ ಬ್ರಿಕ್ಸ್‍ಗಳನ್ನು ಒಂದೆಡೆ ಸಂಗ್ರಹಿಸಿ ನಂತರ ಅದನ್ನು ವಿವಿದ ಕಲಾಕೃತಿ, ಶೌಚಾಲಯ ಕಟ್ಟಡ, ಪಾರ್ಕ್‍ಗಳಲ್ಲಿ ಕಲಾಕೃತಿಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಇದನ್ನೂ ಓದಿ: ಪೆಟ್ರೋಲ್ ಬೆಲೆ ಇಳಿಸಿದ್ದು ಭಯದಿಂದ: ಪ್ರಿಯಾಂಕಾ ಗಾಂಧಿ
Advertisement
ಇಂಥಾದೊಂದು ಕೆಲಸಕ್ಕೆ ಕೋಲಾರ ಜಿಲ್ಲೆಯಲ್ಲಿ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದ್ದು, ವಿದ್ಯಾರ್ಥಿ ಸಂಘಟನೆಗಳು, ಸಂಘ ಸಂಸ್ಥೆಗಳು ಕೈಜೋಡಿವೆ. ಈ ಮೂಲಕ ಪ್ಲಾಸ್ಟಿಕ್ ಕವರ್‍ಗಳು ಚರಂಡಿಗಳು, ನೀರಿನ ಕಾಲುವೆಗಳಲ್ಲಿ ತುಂಬಿಕೊಂಡು ಸೃಷ್ಟಿಮಾಡುವ ಸಮಸ್ಯೆಗಳಿಗೆ ಇದರಿಂದ ಪರಿಹಾರ ಸಿಕ್ಕಂತಾಗುತ್ತಿದೆ. ಅಷ್ಟೇ ಅಲ್ಲಾ ಪ್ಲಾಸ್ಟಿಕ್‍ನ್ನು ಸಮರ್ಪಕವಾಗಿ ಮರುಬಳಕೆ ಮಾಡಲಾಗುತ್ತಿದೆ ಅನ್ನೋದು ಆಯೋಜಕರ ಮಾತು ಕೂಡ.
ಪ್ರಕೃತಿಗೆ ಮಾರಕವಾಗುವ ಈ ಪ್ಲಾಸ್ಟಿಕ್‍ನ್ನು ಸುಟ್ಟು ಹಾಕಿದರೂ ಜೀವರಾಶಿಗೆ ಮಾರಕವಾಗುವ ಪರಿಣಾಮ ಮರು ಬಳಕೆ ಮಾಡುವ ಮಹತ್ವದ ಕೆಲಸಕ್ಕೆ ಕೋಲಾರದ ತಂಡ ಶ್ರಮಿಸುತ್ತಿದೆ. ಈ ಕಾರ್ಯಕ್ಕೆ ಜನರು ಸ್ವಯಂಪ್ರೇರಿತರಾಗಿ ಕೈಜೋಡಿಸಿದ್ದೇ ಆದಲ್ಲಿ ಪ್ಲಾಸ್ಟಿಕ್ ಅನ್ನೋ ವಿಷವನ್ನು ನಿರ್ವಹಣೆ ಮಾಡೋದು ದೊಡ್ಡ ವಿಷಯವಲ್ಲ.