LatestMain PostNational

ಹೆಬ್ಬಾವಿಗೆ ಪ್ಲಾಸ್ಟಿಕ್ ಸರ್ಜರಿ!

ಮುಂಬೈ: ಗಾಯಗೊಂಡ ಹೆಬ್ಬಾವಿಗೆ (Python) ಪ್ಲಾಸ್ಟಿಕ್ ಸರ್ಜರಿ (Plastic Surgery) ಮಾಡಲಾಗುತ್ತಿರುವ ಘಟನೆಯೊಂದು ಮುಂಬೈನಲ್ಲಿ ನಡೆದಿದೆ.

ಕಳೆದ ತಿಂಗಳು ಗಂಭೀರ ಗಾಯಗೊಂಡ 10 ಅಡಿ ಉದ್ದದ ಹೆಬ್ಬಾವನ್ನು ಅರಣ್ಯ ಇಲಾಖೆಯ ಸಮನ್ವಯದಲ್ಲಿ ಆರ್‍ಎಡಬ್ಲ್ಯುಡಬ್ಲ್ಯು (RAWW) ನಿಂದ ರಕ್ಷಿಸಲಾಯಿತು. ಅಂದಿನಿಂದ ಹಾವಿನ ಸ್ಥಿತಿ ಗಂಭೀರವಾಗಿತ್ತು. ಈಗ ಹೆಬ್ಬಾವಿನ ಪ್ಲಾಸ್ಟಿಕ್ ಸರ್ಜರಿ ಮಾಡಲಾಗುತ್ತಿದೆ ಎಂದು ಡಾ.ರೀನಾ ದೇವ್ ತಿಳಿಸಿದ್ದಾರೆ.

ಕಳೆದ 45 ದಿನಗಳಿಂದ ಹಾವಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಈಗಾಗಲೇ 2 ಶಸ್ತ್ರಚಿಕಿತ್ಸೆಗಳು ನಡೆದಿವೆ. ಪ್ಲಾಸ್ಟಿಕ್ ಸರ್ಜರಿ ನಂತರ ಹೆಬ್ಬಾವು 3 ತಿಂಗಳ ಕಾಲ ತೀವ್ರ ನಿಗಾದಲ್ಲಿರಲಿದೆ. ಪ್ಲಾಸ್ಟಿಕ್ ಸರ್ಜರಿಗೆ 3 ಗಂಟೆ ಬೇಕು ಎಂದು ಅವರು ತಿಳಿಸಿದ್ದಾರೆ. ಇದನ್ನೂ ಓದಿ: ಉಗ್ರರಿಗೆ ಆಶ್ರಯ ನೀಡಿದ್ದ ಮದರಸಾವನ್ನು ಧ್ವಂಸಗೊಳಿಸಿದ ಮುಸ್ಲಿಮರು

Live Tv

Leave a Reply

Your email address will not be published.

Back to top button