ಜೀ ಕನ್ನಡ ವಾಹಿನಿಯಲ್ಲಿ ಮೂಡಿ ಬರುತ್ತಿರುವ ಜೊತೆ ಜೊತೆಯಲಿ (Jothe Jotheyaali) ಧಾರಾವಾಹಿಯ ಕಥೆಯಲ್ಲಿ ಭಾರೀ ಬದಲಾವಣೆ ಆಗಲಿದೆ. ಅನಿರುದ್ಧ (Aniruddha) ನಿರ್ವಹಿಸುತ್ತಿದ್ದ ಆರ್ಯವರ್ಧನ್ (Aryavardhan) ಪಾತ್ರವನ್ನು ಮುಗಿಸಲೆಂದೋ ಅಥವಾ ಹೊಸ ಕಲಾವಿದನ ಎಂಟ್ರಿಗೋ ಕಥೆಯಲ್ಲೊಂದು ಜಾಗ ಕಲ್ಪಿಸಿದ್ದಾರೆ. ಹಾಗಾಗಿ ಆರ್ಯವರ್ಧನ್ ಪಾತ್ರ ಇರತ್ತಾ? ಅಥವಾ ಹೊಸ ಕಲಾವಿದನ ಆಗಮನವಾಗತ್ತಾ ಎನ್ನುವ ಕುತೂಹಲ ಮೂಡಿದೆ.
Advertisement
ಆರ್ಯವರ್ಧನ್ ಪಾತ್ರಕ್ಕೆ ನಟ ಹರೀಶ್ ರಾಜ್ (Harish Raj) ಆಯ್ಕೆಯಾಗಿದ್ದಾರೆ ಎನ್ನುವ ಸುದ್ದಿಯಿತ್ತು. ಆದರೆ, ಹರೀಶ್ ರಾಜ್ ಮಾಡುತ್ತಿರುವುದು ಆರ್ಯವರ್ಧನ್ ಸಹೋದರನ ಪಾತ್ರ. ವಿಶ್ವಾಸ್ ದೇಸಾಯಿ ಹೆಸರಿನ ಪಾತ್ರವನ್ನು ಹರೀಶ್ ರಾಜ್ ನಿರ್ವಹಿಸುತ್ತಿದ್ದಾರೆ. ಈಗ ಎರಡೂ ಪಾತ್ರಗಳು ಆಸ್ಪತ್ರೆ ಪಾಲಾಗಿವೆ. ಕೋಟಿ ಕೋಟಿ ನಷ್ಟ ಮಾಡಿಕೊಂಡಿರುವ ವಿಶ್ವಾಸ್ ದೇಸಾಯಿ ಕೆರೆಗೆ ಬಿದ್ದು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಅವನನ್ನು ರಕ್ಷಿಸಿ ಸದ್ಯ ಆಸ್ಪತ್ರೆಗೆ ಸೇರಿಸಿದ್ದಾರೆ. ಈ ಕಡೆ ಆರ್ಯವರ್ಧನ್ ಕಾರು ಅಪಘಾತವಾಗಿ (Accident) ಅವನು ಅದೇ ಆಸ್ಪತ್ರೆ ಸೇರಿದ್ದಾನೆ. ಇದನ್ನೂ ಓದಿ:ನಿನ್ನ ತಲೆಯ ಮೇಲೆ ತೆಂಗಿನಕಾಯಿ ಒಡೆದು ಬಿಗ್ ಬಾಸ್ ಮನೆಯಿಂದ ಹೋಗ್ತೀನಿ: ಸೋನುಗೆ ಗುರೂಜಿ ವಾರ್ನಿಂಗ್
Advertisement
Advertisement
ವಿಶ್ವಾಸ್ ದೇಸಾಯಿ ಮತ್ತು ಆರ್ಯವರ್ಧನ್ ಒಂದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆರ್ಯವರ್ಧನ್ ಮುಖಕ್ಕೆ ತೀವ್ರವಾದ ಪೆಟ್ಟಾಗಿರುವುದರಿಂದ ಪ್ಲಾಸ್ಟಿಕ್ ಸರ್ಜರಿ (Plastic Surgery) ಮಾಡುವುದು ಅನಿವಾರ್ಯ ಎಂದು ವೈದ್ಯರು ತಿಳಿಸಿದ್ದಾರೆ. ಅಲ್ಲಿಗೆ ಈ ಪಾತ್ರ ಏನಾಗುತ್ತದೆ ಎನ್ನುವ ಕುತೂಹಲ ನೋಡುಗರದ್ದು. ಪ್ಲಾಸ್ಟಿಕ್ ಸರ್ಜರಿ ಮಾಡಿದರೆ, ಮುಖ ಬದಲಾವಣೆಯೊಂದರೆ ಹೊಸ ಕಲಾವಿದರಿಗೆ ಅವಕಾಶ ಸಿಗತ್ತಾ? ಅಥವಾ ಸರ್ಜರಿಯಲ್ಲಿ ಯಡವಟ್ಟಾಗಿ ಇನ್ನೇನಾದರೂ ಕಥೆಯಲ್ಲಿ ಬದಲಾವಣೆ ಆಗತ್ತಾ ಎನ್ನುವುದು ಸದ್ಯಕ್ಕೆ ಸಸ್ಪೆನ್ಸ್.
Advertisement
ಆರ್ಯವರ್ಧನ್ ಪಾತ್ರಕ್ಕೆ ಅಪಘಾತವಾದಾಗಲೇ ಕಥೆಯಲ್ಲಿ ಏನೋ ಒಂದು ಆಗುತ್ತದೆ ಎಂಬ ಅನುಮಾನ ಬಂದಿತ್ತು. ಪ್ಲಾಸ್ಟಿಕ್ ಸರ್ಜರಿಯೇ ಈ ಅಪಘಾತ ಮಾಡಿಸಲು ಕಾರಣ ಎನ್ನುವ ಅಂಶವೂ ಪ್ರಸ್ತಾಪವಾಗಿತ್ತು. ಕೊನೆಗೂ ಪ್ರೇಕ್ಷಕ ಊಹಿಸಿದಂತೆಯೇ ಆಗಿದೆ. ಅನಿರುದ್ಧ ಮಾಡುತ್ತಿದ್ದ ಪಾತ್ರಕ್ಕೆ ಪ್ಲಾಸ್ಟಿಕ್ ಸರ್ಜರಿ ಮಾಡುವಂತಹ ಗಳಿಗೆ ಕೂಡಿ ಬಂದಿದೆ.