ಕಲಬುರಗಿ: ದಿನಕ್ಕೊಂದು ಮೊಟ್ಟೆ ತಿಂದರೆ ಆರೋಗ್ಯಕ್ಕೆ ಒಳ್ಳೆಯದು ಅಂತಾ ವೈದ್ಯರು ಹೇಳುತ್ತಾರೆ, ಆದರೆ ಕಲಬುರಗಿ ಜಿಲ್ಲೆಯ ಹಲವೆಡೆ ಕೃತಕ ಮೊಟ್ಟೆ ಮಾರಾಟದ ಜಾಲ ಇದೀಗ ಬಯಲಾಗಿದೆ.
Advertisement
ಬ್ರೇಕ್ ಥ್ರೂ ಸೈನ್ಸ್ ಸೊಸೈಟಿ ನಗರದ ವಿವಿಧ ಅಂಗಡಿಗಳಲ್ಲಿ ಮೊಟ್ಟೆ ಖರೀದಿಸಿದೆ. ನಂತರ ಆ ಮೊಟ್ಟೆಯನ್ನು ಕಲಬುರಗಿ ವಿವಿಯ ಜೈವಿಕ ತಂತ್ರಜ್ಞಾನ ವಿಭಾಗದಲ್ಲಿ ಪ್ರಯೋಗಿಸಿದಾಗ ಕೃತಕ ಮೊಟ್ಟೆಯ ಜಾಲ ಬಯಲಾಗಿದೆ.
Advertisement
Advertisement
ಸಾಧಾರಣ ಮೊಟ್ಟೆಯಲ್ಲಿರಬೇಕಾದ ಸೊಡಿಯಂ ಅಲ್ಬುಮಿನ್(ಬಿಳಿ ಪದಾರ್ಥ) ಈ ಕೃತಕ ಮೊಟ್ಟೆಯಲ್ಲಿ ಇಲ್ಲ. ಅದರ ಬದಲು ಕೃತಕವಾಗಿ ತಯಾರಿಸಿದ ಜಿಲಾಟಿನ್ ಇರುವುದು ಕಂಡುಬಂದಿದೆ. ಇಂತಹ ಕೃತಕ ಮೊಟ್ಟೆ ಬಳಸಿದ್ರೆ ನರಮಂಡಲ ಮತ್ತು ಲಿವರ್ ಮೇಲೆ ಅಡಪರಿಣಾಮ ಬೀರುತ್ತದೆ ಎಂದು. ಹೀಗಾಗಿ ಸರ್ಕಾರ ಈ ಬಗ್ಗೆ ಎಚ್ಚೆತ್ತುಕೊಳ್ಳಬೇಕು. ಹಾಗೂ ಜಿಲ್ಲಾಡಳಿತ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಬ್ರೇಕ್ ಥ್ರೂ ಸೈನ್ಸ್ ಸೊಸೈಟಿ ಮನವಿ ಮಾಡಿದೆ.