ಬೆಂಗಳೂರು: ವಿಧಾನಸೌಧ ಸೇರಿದಂತೆ ಸರ್ಕಾರಿ ಕಚೇರಿ, ಸರ್ಕಾರಿ ಕಾರ್ಯಕ್ರಮದಲ್ಲಿ ಪ್ಲಾಸ್ಟಿಕ್ ಬಾಟಲ್ ಬಳಸಬಾರದು. ಕಡ್ಡಾಯವಾಗಿ ಸ್ಟೀಲ್ ಲೋಟದಲ್ಲೇ ನೀರು ಕೊಡಬೇಕು ಹೀಗೊಂದು ಆದೇಶವಾಗಿ ಎರಡು ತಿಂಗಳು ಕಳೆದಿದೆ.
ರಾಜ್ಯದಲ್ಲಿ ಪ್ಲಾಸ್ಟಿಕ್ ಮಿತಿಮೀರಿದ ಬಳಕೆಯಿಂದ ಪರಿಸರದ ಮೇಲೆ ಹಾನಿಯಾಗುತ್ತಿರೋದ್ರಿಂದ ಸರ್ಕಾರಿ ಕಚೇರಿ, ಸಮಾರಂಭದಲ್ಲಿ ಪ್ಲಾಸ್ಟಿಕ್ ಬಳಕೆ ಮಾಡದೇ ಸ್ಟೀಲ್ ನ್ನೇ ಕಡ್ಡಾಯವಾಗಿ ಬಳಕೆ ಮಾಡಿ ಜಾಗೃತಿ ಮೂಡಿಸಬೇಕು ಅಂತಾ ಆದೇಶ ಪ್ರತಿಯಲ್ಲಿದೆ. ಆದ್ರೇ ಬೇರೆಯವರಿಗೆ ಜಾಗೃತಿ ಮೂಡಿಸೋದು ಪಕ್ಕಕ್ಕಿರಲಿ. ಸ್ವತಃ ಸರ್ಕಾರಿ ಅಧಿಕಾರಿಗಳೇ ಪಾಲನೆ ಮಾಡ್ತಿಲ್ಲ. ಇದನ್ನೂ ಓದಿ: ಪ್ಲಾಸ್ಟಿಕ್ ವಿರುದ್ಧ ಮತ್ತೆ ಬಿಬಿಎಂಪಿ ಸಮರ – ಹೋಟೆಲ್, ಅಂಗಡಿಗಳಲ್ಲಿ ಪ್ಲಾಸ್ಟಿಕ್ ಬಳಸಿದರೆ ಲೈಸೆನ್ಸ್ ರದ್ದು
ಸಿಎಂ ಕಾರ್ಯಕ್ರಮ ಸೇರಿದಂತೆ , ಸರ್ಕಾರಿ ಕಚೇರಿಯಲ್ಲಿ ಪ್ಲಾಸ್ಟಿಕ್ ಬಾಟಲ್‍ನದ್ದೇ ಕಾರುಬಾರು. ಈ ಮೂಲಕ ಪ್ಲಾಸ್ಟಿಕ್ ನಿಷೇಧಕ್ಕಾಗಿ ಸರ್ಕಾರದ ಕಾನೂನನ್ನು ಸರ್ಕಾರವೇ ಉಲ್ಲಂಘನೆ ಮಾಡುತ್ತಿರುವುದು ವಿಷಾದನೀಯ ವಿಚಾರವಾಗಿದೆ.