ಬೆಂಗಳೂರು: ಸಿಲಿಕಾನ್ ಸಿಟಿಯನ್ನು ಪ್ಲಾಸ್ಟಿಕ್ ಮುಕ್ತ ಮಾಡುವ ನಿಟ್ಟಿನಲ್ಲಿ ನಗರದಲ್ಲಿ ಏಕ ಬಳಕೆ ಪ್ಲಾಸ್ಟಿಕ್ ನಿಷೇಧಕ್ಕೆ ಆದೇಶ ಹೊರಡಿಸಿದ್ದ ಬಿಬಿಎಂಪಿ, ಪ್ಲಾಸ್ಟಿಕ್ ಬಳಕೆದಾರರು ಮತ್ತು ತಯಾರಿಕಾ ಕಾರ್ಖಾನೆಗಳ ವಿರುದ್ಧ ಸಮರ ಮುಂದುವರಿಸಿದೆ. ಒಂದೇ ತಿಂಗಳಲ್ಲಿ ಲಕ್ಷ ಲಕ್ಷ ದಂಡ ಸಂಗ್ರಹಿಸುವ ಮೂಲಕ ಪ್ಲಾಸ್ಟಿಕ್ ಬಳಕೆಗೆ ಮತ್ತಷ್ಟು ಕಡಿವಾಣ ಹಾಕಿದೆ.
Advertisement
ನಗರವನ್ನ ಪ್ಲಾಸ್ಟಿಕ್ ಮುಕ್ತ ಮಾಡುವ ನಿಟ್ಟಿನಲ್ಲಿ ಕಳೆದ ತಿಂಗಳು ಏಕ ಬಳಕೆ ಪ್ಲಾಸ್ಟಿಕ್ ಅನ್ನ ಬಳಕೆ ಮಾಡದಂತೆ ಬಿಬಿಎಂಪಿ ಆದೇಶ ಹೊರಡಿಸಿತ್ತು. ಬಿಬಿಎಂಪಿ ಆದೇಶದ ಬಳಿಕವು ನಗರದ ಹಲವು ಕಡೆ ಕದ್ದು ಮುಚ್ಚಿ ಪ್ಲಾಸ್ಟಿಕ್ ಬಳಕೆ, ತಯಾರಿಕೆ ನಡೆಯುತ್ತಿತ್ತು. ಈ ಎಲ್ಲಾ ಕಳ್ಳಾಟದ ಮೇಲೆಯೂ ಕಣ್ಣಿಟ್ಟಿದ್ದ ಬಿಬಿಎಂಪಿ, ಪ್ಲಾಸ್ಟಿಕ್ ತಯಾರಿಕೆ, ಮತ್ತು ಬಳಕೆ ಮಾಡ್ತಿದ್ದ ಅಂಗಡಿಗಳು, ಕಾರ್ಖಾನೆಗಳ ವಿರುದ್ಧ ಭರ್ಜರಿ ಕಾರ್ಯಚರಣೆ ಮಾಡುವುದರ ಜೊತೆಗೆ ಒಂದೇ ತಿಂಗಳಲ್ಲಿ ದಂಡದ ರೂಪದಲ್ಲಿ ಲಕ್ಷಾಂತರ ರೂಪಾಯಿ ಹಣ ಸಂಗ್ರಹ ಮಾಡಿದೆ.
Advertisement
Advertisement
ಬಿಬಿಎಂಪಿ ವ್ಯಾಪ್ತಿಯಲ್ಲಿ ಪ್ಲಾಸ್ಟಿಕ್ ಬಳಕೆ ಮಾಡುತ್ತಿರುವ ಮಾರಾಟ ಮಳಿಗೆಗಳು ಹಾಗೂ ಪ್ಲಾಸ್ಟಿಕ್ ಉತ್ಪಾದಿಸುತ್ತಿರುವ ಘಟಕಗಳ ಮೇಲೆ ಜು.1ರಿಂದ ಜು.30 ವರೆಗೆ ತಪಾಸಣೆ ನಡೆಸಿ ಒಟ್ಟು 10,962 ಕೆ.ಜಿ ನಿಷೇಧಿತ ಪ್ಲಾಸ್ಟಿಕ್ ಉತ್ಪನ್ನಗಳನ್ನ ಜಪ್ತಿ ಮಾಡಿದೆ. ಅಲ್ಲದೆ ಇವುಗಳ ಬಳಕೆ ಮತ್ತು ತಯಾರಿಕೆಯಲ್ಲಿ ತೊಡಗಿದ್ದವರಿಗೂ ದಂಡದ ಬಿಸಿ ಮುಟ್ಟಿಸಿದ್ದು, ದಂಡದ ರೂಪದಲ್ಲಿ ಬರೊಬ್ಬರಿ ರೂ.21,48,600 ಸಂಗ್ರಹ ಮಾಡಿದೆ. ಇದನ್ನೂ ಓದಿ: ಬೆಂಗ್ಳೂರಲ್ಲಿ ನಕಲಿ ಪ್ಲೇಟ್ ದಂಧೆ – ದುಡ್ಡು ಕೊಟ್ರೆ ಸಿಗುತ್ತೆ ಸಿಎಂ, ಸಚಿವರ ಕಾರ್ ನಂಬರ್
Advertisement
ಈ ತಿಂಗಳಲ್ಲಿ ವಶಕ್ಕೆ ಪಡೆದ ಪ್ಲಾಸ್ಟಿಕ್ & ದಂಡದ ವಿವರ
ವಲಯ – ದಂಡ – ಪ್ಲಾಸ್ಟಿಕ್ (ಕೆ.ಜಿಗಳಲ್ಲಿ)
* ಪೂರ್ವ – 3,67,100 – 287
* ಪಶ್ಚಿಮ – 5,31,100 – 1,768
* ದಕ್ಷಿಣ – 2,59,400 – 581
* ಮಹದೇವಪುರ – 3,43,400 – 634
* ಆರ್ ಆರ್ ನಗರ – 3,04,900 – 354
* ಯಲಹಂಕ – 1,00,700 – 238
* ದಾಸರಹಳ್ಳಿ – 1,10,200 – 6,738
* ಬೊಮ್ಮನಹಳ್ಳಿ – 1,31,800 – 359
* ಒಟ್ಟು = 21,48,600 – 10,962
ಇಷ್ಟೇ ಅಲ್ಲ ಪ್ಲಾಸ್ಟಿಕ್ ವಿರುದ್ಧ ಸಮರದಲ್ಲಿ ಬಿಬಿಎಂಪಿ ತನ್ನ ವ್ಯಾಪ್ತಿಯ ಎಲ್ಲಾ ವಲಯಗಳಲ್ಲೂ ಬಿಬಿಎಂಪಿ ಕಿರಿಯ ಆರೋಗ್ಯ ಪರಿವೀಕ್ಷಕರು, ಮಾರ್ಷಲ್‍ಗಳ ಮೇಲ್ವಿಚಾರಕರು ಹಾಗೂ ಮಾರ್ಷಲ್‍ಗಳ ತಂಡವು ಅನಿರೀಕ್ಷಿತವಾಗಿ ಸಗಟು ವ್ಯಾಪಾರ ಮಳಿಗೆಗಳು, ಅಂಗಡಿಗಳು, ಹೊಟೇಲ್ ಉದ್ದಿಮೆ, ಪ್ಲಾಸ್ಟಿಕ್ ಉತ್ಪಾದಿಸುವ ಉದ್ದಿಮೆಗಳಿಗೆ ಭೇಟಿ ನೀಡಿ ಪ್ಲಾಸ್ಟಿಕ್ ಜಪ್ತಿ ಮುಂದುವರಿಸಲಿದ್ದಾರೆ. ಜೊತೆಗೆ ದಂಡ ವಿಧಿಸಿ ಮತ್ತೊಮ್ಮೆ ಪ್ಲಾಸ್ಟಿಕ್ ಬಳಕೆ ಮಾಡದಂತೆ ಮತ್ತಷ್ಟು ಜಾಗೃತಿ ಮೂಡಿಸುವ ಕೆಲಸ ಮಾಡಲಾಗುವುದಾಗಿ ಘನತ್ಯಾಜ ನಿರ್ವಹಣೆ ವಿಭಾಗದ ವಿಶೇಷ ಆಯುಕ್ತ ಹರೀಶ್ ಕುಮಾರ್ ತಿಳಿಸಿದ್ದಾರೆ.
ಒಟ್ಟಾರೆ ನಗರವನ್ನ ಪ್ಲಾಸ್ಟಿಕ್ ಮುಕ್ತ ಮಾಡುವ ವಿಚಾರದಲ್ಲಿ ಬಿಬಿಎಂಪಿ ಏನೋ ಮಹತ್ವದ ಹೆಜ್ಜೆ ಇಟ್ಟಿದೆ. ಆದರೆ ಪಾಲಿಕೆಯ ಈ ಯೋಜನೆಗೆ ಸಾರ್ವಜನಿಕರು ಸಹಕರಿಸಿದ್ರೆ ಮಾತ್ರ ಸಿಲಿಕಾನ್ ಸಿಟಿಯನ್ನ ಪಾಸ್ಲಿಕ್ ಮುಕ್ತ ಮಾಡೋಕೆ ಸಾಧ್ಯ.