ಬೆಂಗಳೂರು: ನಿಷೇಧಿತ ಪ್ಲಾಸ್ಟಿಕ್ ಜಪ್ತಿ ಮಾಡಿರುವ ಬಿಬಿಎಂಪಿ ಮಾರ್ಷಲ್ ಗಳು 5.97 ಲಕ್ಷ ರೂ. ದಂಡ ವಸೂಲಿ ಮಾಡಿದ್ದಾರೆ.
Advertisement
ಏಕಬಳಕೆ ಪ್ಲಾಸ್ಟಿಕ್ ಉಪಯೋಗಿಸುವ ಮಾರಾಟಗಾರರು ಮತ್ತು ಮಳಿಗೆಗಳ ಮೇಲೆ ಮಾರ್ಷಲ್ ಗಳು ದಾಳಿ ಮಾಡಿದ್ದಾರೆ. ಜುಲೈ 01 ರಿಂದ ನಿನ್ನೆಯವರೆಗೂ 5.97 ಲಕ್ಷ ರೂ. ದಂಡ ವಸೂಲಿ ಮಾಡಿದ್ದಾರೆ. 999 ಸ್ಥಳಗಳಲ್ಲಿ ತಪಾಸಣೆ ಮಾಡಿ 1380 ಕೆಜಿ ನಿಷೇಧಿತ ಪ್ಲಾಸ್ಟಿಕ್ ವಶಕ್ಕೆ ಪಡೆದುಕೊಳ್ಳಲಾಗಿದೆ.
Advertisement
Advertisement
ಬೆಂಗಳೂರಿನ 8 ವಲಯಗಳಲ್ಲೂ ನಿಷೇಧಿತ ಪ್ಲಾಸ್ಟಿಕ್ ಬಳಕೆ ಮಾಡ್ತಿರೋದು ಬಯಲಾಗಿದೆ. 8 ವಾರ್ಡ್ ಗಳಲ್ಲೂ ನಿಷೇಧಿತ ಪ್ಲಾಸ್ಟಿಕ್ ಬಳಕೆಗೆ ಬಿಬಿಎಂಪಿ ಘನತ್ಯಾಜ್ಯ ವಿಭಾಗ ಕ್ರಮ ವಹಿಸುತ್ತಾ ಇದೆ. ಇದನ್ನೂ ಓದಿ: ಏಕ ಬಳಕೆಯ ಪ್ಲಾಸ್ಟಿಕ್ ಸಂಪೂರ್ಣ ನಿಷೇಧಿಸಲು ಒಂದು ವರ್ಷ ಅವಕಾಶ ಕೊಡಿ: ವರ್ತಕರ ಸಂಘ ಮನವಿ