ಮುಂಬೈ: ಈ ವರ್ಷ ಕಾರು ಖರೀದಿಸಬೇಕು ಎಂದು ಯೋಚಿಸುತ್ತಿದ್ದೀರಾ? ಹಾಗಾದ್ರೆ ನಿಮಗೆ ಇಲ್ಲಿದೆ ಸಿಹಿ ಸುದ್ದಿ. ಕಾರು ಉತ್ಪಾದನಾ ಕಂಪನಿಗಳು (Car Manufacturing Companies) ಈಗ ಗ್ರಾಹಕರಿಗೆ ಭಾರೀ ಡಿಸ್ಕೌಂಟ್ (Discounts), ಎಕ್ಸ್‌ಚೇಂಜ್ ಬೋನಸ್, ಖಾತರಿ ಗಿಫ್ಟ್ ನೀಡಲು ಆರಂಭಿಸಿವೆ.
ಅಂದಾಜು 5-10% ದರವನ್ನು ಕಡಿಮೆ ಮಾಡಿದ್ದು ಕಳೆದ ಐದು ವರ್ಷಗಳಲ್ಲಿ ಇಷ್ಟೊಂದು ಆಫರ್ ಮೊದಲ ಬಾರಿಗೆ ನೀಡಿವೆ. ದೀಪಾವಳಿವರೆಗೂ (Deepavali) ಈ ಆಫರ್ ಮುಂದುವರಿಯುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.
Advertisement
2023-24 ಹಣಕಾಸು ವರ್ಷದಲ್ಲಿ ಕಾರು ಮಾರಾಟ ಭರ್ಜರಿ ಏರಿಕೆ ಕಂಡಿತ್ತು. ಆದರೆ ಈ ಹಣಕಾಸು ವರ್ಷದ ಆರಂಭದಲ್ಲಿ ಮಾರಾಟ ಕಡಿಮೆಯಾಗಿದೆ. ದೀರ್ಘ ಕಾಲ ನಡೆದ ಲೋಕಸಭಾ ಚುನಾವಣೆ (Lok Sabha Election) ಮತ್ತು ಬಿಸಿ ಗಾಳಿಯಿಂದ (Heat Wave) ಕಡಿಮೆ ಕಾರುಗಳು ಮಾರಾಟವಾಗುತ್ತಿರುವ ಹಿನ್ನೆಲೆಯಲ್ಲಿ ಕಂಪನಿಗಳು ಈಗ ರಿಯಾಯಿತಿ ಘೋಷಣೆ ಮಾಡಿವೆ.
Advertisement
ಸಾಧಾರಣವಾಗಿ ಡಿಸೆಂಬರ್ ಅಥವಾ ಯಾವುದಾದರೂ ಹಬ್ಬಗಳ ಸಂದರ್ಭದಲ್ಲಿ ಈ ರೀತಿಯ ರಿಯಾಯಿತಿ, ಆಫರ್‌ಗಳನ್ನು ಕಂಪನಿಗಳು ಪ್ರಕಟಿಸುತ್ತವೆ. ಆದರೆ ಈ ಬಾರಿ ಜೂನ್ ತಿಂಗಳಿನಲ್ಲೇ ರಿಯಾಯಿತಿಗಳು ಪ್ರಕಟವಾಗಿರುವುದು ವಿಶೇಷ. ಇದನ್ನೂ ಓದಿ: ವಿಶ್ವ ಆರೋಗ್ಯಕ್ಕಾಗಿ ಯೋಗ – ʻಸ್ವಯಂ ಮತ್ತು ಸಮಾಜಕ್ಕಾಗಿ ಯೋಗʼ
Advertisement
Advertisement
ಯಾವ ಕಂಪನಿ ಎಷ್ಟು ರಿಯಾಯಿತಿ ಘೋಷಣೆ?
ಟಾಟಾ ಮೋಟಾರ್ಸ್ – 25,000 ರೂ. ನಿಂದ 1,00,000 ರೂ.ವರೆಗೆ
ಹೋಂಡಾ ಕಾರ್ಸ್ – 55,000 ರೂ.ನಿಂದ 1,00,000 ರೂ.ವರೆಗೆ
ಮಾರುತಿ ಸುಜುಕಿ – 55,000 ರೂ. ನಿಂದ 95,000 ರೂ.ವರೆಗೆ
(ಎಕ್ಸ್‌ಚೇಂಜ್ ಬೋನಸ್, ಕ್ಯಾಶ್ ಡಿಸ್ಕೌಂಟ್, ಗಿಫ್ಟ್, ಇಂಧನ ಮಾದರಿ ಎಲ್ಲವೂ ಸೇರಿ)
ಯಾವ ಕಾರಿಗೆ ಏನು ಆಫರ್?
ಟಾಟಾ ಮೋಟಾರ್ಸ್ ಸೆಪ್ಟೆಂಬರ್ 2023 ರಲ್ಲಿ ಬಿಡುಗಡೆಯಾದ ಎರಡನೇ ತಲೆಮಾರಿನ ನೆಕ್ಸಾನ್ ಕಾಂಪ್ಯಾಕ್ಟ್ ಎಸ್‌ಯುವಿಯಲ್ಲಿ 1 ಲಕ್ಷ ರೂ.ವರೆಗೆ ಆಫರ್ ಪ್ರಕಟಿಸಿದೆ. ಮಾರುತಿ ಸುಜುಕಿ ಫ್ರಾಂಕ್ಸ್‌ಗೆ 72,000 ರೂ.ವರೆಗೆ ಮತ್ತು ಗ್ರಾಂಡ್ ವಿಟಾರಾದಲ್ಲಿ 95,000 ರೂ.ವರೆಗೆ ಆಫರ್ ನೀಡುತ್ತಿದೆ.
ಸ್ಕೋಡಾ ಕಂಪನಿಯ Slavia ಕಾರಿಗೆ 94,000 ರೂ. ದರ (ಎಕ್ಸ್ ಶೋರೂಂ ದರ 10.69 ಲಕ್ಷ ರೂ.) ಕಡಿತ ಮಾಡಿದೆ. Kushaq ಮಾದರಿಯ ಕಾರಿಗೆ 1.10 ಲಕ್ಷ ರೂ.(ಎಕ್ಸ್ ಶೋ ರೂಂ ದರ 11.99 ಲಕ್ಷ ರೂ.), Kushaq Monte Carlo Automatic ಕಾರಿಗೆ 2.19 ಲಕ್ಷ ರೂ.(ಎಕ್ಸ್ ಶೋ ರೂಂ ದರ 15.59 ಲಕ್ಷ ರೂ.) ದರ ಕಡಿತ ಮಾಡಿದೆ.