ಇತ್ತೀಚಿನ ದಿನಗಳಲ್ಲಿ ನಾಗರಿಕ ವಿಮಾನಗಳು (Flights) ಮಧ್ಯಪ್ರಾಚ್ಯ (Middle East) ಭಾಗಗಳ ಮೇಲೆ ಹಾರಾಟ ನಡೆಸುವಾಗ ನ್ಯಾವಿಗೇಷನ್ ವ್ಯವಸ್ಥೆಯ ಸಮಸ್ಯೆಗಳನ್ನು ಎದುರಿಸುತ್ತಿವೆ ಎಂದು ಸಾಕಷ್ಟು ವರದಿಗಳಾಗಿವೆ. ಇದು ವಿಮಾನಗಳ ಹಾರಾಟದ ಸುರಕ್ಷತೆಗೆ ಸಮಸ್ಯೆಯೊಡ್ಡಿದೆ ಎಂದು ವಿಮಾನಯಾನ ಸಂಸ್ಥೆಗಳು ಕಳವಳ ವ್ಯಕ್ತಪಡಿಸಿವೆ. ಈ ಸಮಸ್ಯೆಯನ್ನು ನಿಭಾಯಿಸುವುದು ಹೇಗೆ ಎಂಬುದರ ಬಗ್ಗೆ ಭಾರೀ ಚರ್ಚೆ ಕೂಡ ನಡೆಯುತ್ತಿದೆ.
ಇತ್ತೀಚೆಗೆ ಅನೇಕ ವಿಮಾನಗಳು ಇರಾನ್ ಗಡಿಯಲ್ಲಿ ಗ್ಲೋಬಲ್ ನ್ಯಾವಿಗೇಷನ್ ಸ್ಯಾಟಲೈಟ್ ಸಿಸ್ಟಮ್ (GNSS) ಜಾಮಿಂಗ್ ಸಮಸ್ಯೆಯನ್ನು ಎದುರಿಸಿವೆ. ಇದೇ ಸಮಸ್ಯೆ ಎದುರಿಸಿದ ವಿಮಾನವೊಂದು ಅನುಮತಿಯಿಲ್ಲದೆ ಇರಾನ್ ವಾಯುಪ್ರದೇಶಕ್ಕೆ ಪ್ರವೇಶಿಸಿ ಬಹಳಷ್ಟು ಕಾಲ ಹಾರಾಟ ನಡೆಸಿತ್ತು. ಬಳಿಕ ಈ ವಿಚಾರ ಚರ್ಚೆಯಾದಾಗ ಅನೇಕ ಪೈಲಟ್‍ಗಳು ಈ ಸಮಸ್ಯೆಯ ಬಗ್ಗೆ ಮಾಹಿತಿ ನೀಡಿದ್ದರು. ಇದನ್ನೂ ಓದಿ: ಕಾಫಿನಾಡಿನ ಸ್ವರ್ಗ ಮುಳ್ಳಯ್ಯನಗಿರಿ ನೀವೂ ಭೇಟಿ ಕೊಡಿ
Advertisement
ಜಿಪಿಎಸ್ ವಂಚನೆ, ಜಾಮಿಂಗ್ ಎಂದರೇನು?
ವಿಮಾನಗಳಿಗೆ ಯಾರಾದರೂ ಟ್ರಾನ್ಸ್‌ಮಿಟರ್ ಬಳಸಿ ನಕಲಿ ಜಿಪಿಎಸ್ ಸಿಗ್ನಲ್ ಕಳುಹಿಸಿದರೆ, ಅದು ಮೂಲ ಸಿಗ್ನಲ್‍ಗೆ ವಿರುದ್ಧವಾಗಿ ಕಾರ್ಯನಿರ್ವಹಿಸುತ್ತದೆ. ಇದು ವಿಮಾನಗಳ ನ್ಯಾವಿಗೇಷನ್ ವ್ಯವಸ್ಥೆಯನ್ನು ಗೊಂದಲಕ್ಕೀಡು ಮಾಡುತ್ತದೆ. ಇಲ್ಲವೇ ನ್ಯಾವಿಗೇಷನ್ ಇಲ್ಲದೆಯೇ ವಿಮಾನದ ಹಾರಾಟಕ್ಕೆ ಕಾರಣವಾಗಲಿದೆ. ಇದರಿಂದ ಪೈಲಟ್‍ಗಳು ತಮ್ಮ ಉದ್ದೇಶಿತ ಮಾರ್ಗದಿಂದ ಮೈಲುಗಳಷ್ಟು ದೂರದಲ್ಲಿ ಹಾರುತ್ತಿದ್ದಾರೆ ಎಂದು ಭಾವಿಸುತ್ತಾರೆ. ಕೆಲವೊಮ್ಮೆ ನ್ಯಾವಿಗೇಷನ್ ನಾಮಥ್ರ್ಯವನ್ನು ವಿಮಾನಗಳು ಕಳೆದುಕೊಳ್ಳುತ್ತವೆ. ಇದರಿಂದ ವಿಮಾನ ಅಪಘಾತಕ್ಕೆ ಒಳಗಾಗುವ ಸಾಧ್ಯತೆ ಇರುತ್ತದೆ.
Advertisement
Advertisement
ವಿಮಾನಗಳು ಎಲ್ಲೆಲ್ಲಿ ಈ ಸಮಸ್ಯೆ ಎದುರಿಸುತ್ತಿವೆ?
ಉತ್ತರ ಇರಾಕ್ ಮತ್ತು ಅಜೆರ್‍ಬೈಜಾನ್ ಮೇಲಿನ ವಾಯುಮಾರ್ಗಗಳನ್ನು ಗ್ಲೋಬಲ್ ನ್ಯಾವಿಗೇಷನ್ ಸ್ಯಾಟಲೈಟ್ ಸಿಸ್ಟಮ್ (Global Navigation Satellite System) ಜಾಮಿಂಗ್ ಸಮಸ್ಯೆಯ ಪ್ರಾಥಮಿಕ ಪ್ರದೇಶ ಎಂದು ಗುರುತಿಸಲಾಗಿದೆ. ಅಲ್ಲದೇ ವಿಮಾನಗಳು ಇದೇ ರೀತಿಯ ಸಮಸ್ಯೆಗಳನ್ನು ಎರ್ಬಿಲ್ ಬಳಿಯೂ ಎದುರಿಸುತ್ತಿವೆ. ಈ ವರ್ಷ ಸೆಪ್ಟೆಂಬರ್ ವೇಳೆಗೆ 12 ಪ್ರತ್ಯೇಕ ಘಟನೆಗಳು ವರದಿಯಾಗಿದ್ದು, ನವೆಂಬರ್ 20 ರಂದು ಟರ್ಕಿಯ ಅಂಕಾರಾ ಬಳಿ ಇತ್ತೀಚಿನ ಘಟನೆ ವರದಿಯಾಗಿದೆ.
Advertisement
ಜಾಮಿಂಗ್ ಹಿಂದೆ ಯಾರ ಕೈವಾಡವಿದೆ?
ಇದರ ಹಿಂದೆ ಯಾರ ಕೈವಾಡವಿದೆ ಎಂದು ಈವರೆಗೂ ಅಧಿಕೃತವಾಗಿ ಕಂಡುಹಿಡಿಯಲು ಸಾಧ್ಯವಾಗಿಲ್ಲ. ಈ ಪ್ರದೇಶಗಳಲ್ಲಿ ಗಡಿ ಸಮಸ್ಯೆ ಇರುವುದರಿಂದ ಮಿಲಿಟರಿ ಎಲೆಕ್ಟ್ರಾನಿಕ್ ವಾರ್‍ಫೇರ್ ಸಿಸ್ಟಮ್‍ಗಳನ್ನು (ಶತ್ರು ದೇಶಗಳ ದಾಳಿಯಿಂದ ರಕ್ಷಿಸಲು ವಿದ್ಯುತ್ಕಾಂತೀಯ ಶಕ್ತಿ ಬಳಸಿ, ಯುದ್ಧ ವಿಮಾನಗಳ, ಇನ್ನಿತರೆ ರೇಡಿಯೋ ಸಂಕೇತಗಳನ್ನು ನಿಯಂತ್ರಿಸುವುದು) ನಿಯೋಜಿಸಲಾಗಿದೆ. ಇದೇ ಕಾರಣಕ್ಕೆ ವಿಮಾನಗಳ ನ್ಯಾವಿಗೇಷನ್ ತಂತ್ರಜ್ಞಾನ ಸಮಸ್ಯೆ ಎದುರಿಸುತ್ತಿರಬಹುದು ಎಂದು ನಂಬಲಾಗಿದೆ.
ಗ್ಲೋಬಲ್ ನ್ಯಾವಿಗೇಷನ್ ಸ್ಯಾಟಲೈಟ್ ಸಿಸ್ಟಮ್ ಜಾಮಿಂಗ್ ಸಮಸ್ಯೆಯನ್ನು ಎದುರಿಸಲು ಭಾರತದ ವಿಮಾನಯಾನ ನಿಯಂತ್ರಕ ಡಿಜಿಸಿಎ (DGCA) ಎಲ್ಲಾ ಭಾರತದ ವಿಮಾನಯಾನ ಸಂಸ್ಥೆಗಳಿಗೆ ಸಲಹೆಯನ್ನು ನೀಡಿದೆ. ಇಂತಹ ಸಮಸ್ಯೆ ಎದುರಿಸುವ ವಿಮಾನಗಳಿಂದ ತರ್ತು ಕರೆ ಹೋಗುವಂತೆ ಮಾಡಲಾಗಿದ್ದು, ಈ ವೇಳೆ ಅಗತ್ಯ ಸಲಹೆ ನೀಡಲಾಗುತ್ತದೆ. ಈ ಸಮಸ್ಯೆಯ ಅಧ್ಯಯನಕ್ಕೆ ನುರಿತ ಪೈಲಟ್‍ಗಳ ಸಮಿತಿಯನ್ನು ತಂಡವನ್ನು ರಚಿಸಲು ಸಿದ್ಧತೆ ನಡೆಸಿಕೊಳ್ಳಲಾಗುತ್ತಿದೆ.
ಬರ್ಮುಡಾ ಟ್ರಯಾಂಗಲ್ ಒಂದು ಮೆಲುಕು
ಬರ್ಮುಡಾ ಟ್ರಯಾಂಗಲ್ ಪ್ರದೇಶದಲ್ಲೂ ವಿಮಾನಗಳು ಹಾಗೂ ಹಡಗುಗಳು ಸಿಗ್ನಲ್ ಹಾಗೂ ಇನ್ನಿತರೆ ಸಮಸ್ಯೆಗಳನ್ನು ಎದುರಿಸಿ ಕಣ್ಮರೆಯಾಗಿದ್ದನ್ನು ನಾವಿಲ್ಲಿ ಸ್ಮರಿಸಬಹುದು. ಈ ಪ್ರದೇಶದಲ್ಲಿ ಕಣ್ಮರೆಯಾದ ಹಡಗುಗಳು ಮತ್ತು ವಿಮಾನಗಳ ನಿಖರವಾದ ಸಂಖ್ಯೆ ತಿಳಿದಿಲ್ಲ. ಸುಮಾರು 50 ಹಡಗುಗಳು ಮತ್ತು 20 ವಿಮಾನಗಳು ನಾಪತ್ತೆಯಾಗಿವೆ ಎಂದು ಅಂದಾಜಿಸಲಾಗಿದೆ. ಈ ಪ್ರದೇಶದಲ್ಲಿ ನಾಪತ್ತೆಯಾಗಿರುವ ಹಲವು ಹಡಗುಗಳು ಮತ್ತು ವಿಮಾನಗಳ ಅವಶೇಷಗಳು ಪತ್ತೆಯಾಗಿಲ್ಲ. ಬರ್ಮುಡಾ ಟ್ರಯಾಂಗಲ್ ಪ್ರದೇಶದಲ್ಲಿ ಕಣ್ಮರೆಯಾಗಿರುವುದು ಮಾನವ ದೋಷ ಅಥವಾ ಹವಾಮಾನ ವಿದ್ಯಮಾನಗಳ ಪರಿಣಾಮವಾಗಿದೆಯೇ ಎಂಬುದು ಸಹ ಇನ್ನೂ ತಿಳಿದಿಲ್ಲ. ಇದನ್ನೂ ಓದಿ: 2000 ರೂ. ಮುಖಬೆಲೆಯ 9760 ಕೋಟಿ ರೂ. ವಿನಿಮಯವಾಗಿಲ್ಲ: ಆರ್‌ಬಿಐ