ಟೋಕಿಯೋ: ವೇಗವಾಗಿ ಬೀಸಿದ ಗಾಳಿಯಿಂದ ವಿಮಾನ (Plane) ಲ್ಯಾಂಡಿಂಗ್ (Landing) ಮಾಡಲು ಪರದಾಡಿದ ಘಟನೆ ಜಪಾನ್‌ನಲ್ಲಿ (Japan) ನಡೆದಿದೆ.
ಪೀಚ್ ಕಂಪನಿಯ ವಿಮಾನವು ಫುಕುವೋಕಾ ವಿಮಾನ ನಿಲ್ದಾಣದಲ್ಲಿ ಇಳಿಯಬೇಕಿತ್ತು. ಈ ವೇಳೆ ಗಾಳಿ ಬೀಸಿದ್ದರಿಂದ ವಿಮಾನ ಮತ್ತೆ ಟೇಕಾಫ್ ಆಗಿದೆ. ಟೇಕಾಫ್ ವೇಳೆ ವಿಮಾನ ಆಕಾಶದಲ್ಲಿ ವಾಲಿದೆ. ಅದರೂ ಪೈಲೆಟ್ ನಿಯಂತ್ರಣ ತಂದು ವಿಮಾನವನ್ನು ಮುಂದಕ್ಕೆ ಹಾರಿಸಿದ್ದಾರೆ. ವಿಮಾನ ಆಕಾಶದಲ್ಲಿ ಗಾಳಿಗೆ ವಾಲುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ (Social Media) ವೈರಲ್ ಆಗಿದೆ.
Advertisement
Video captures Jeju Air 737 battling strong winds from Typhoon Shanshan during aborted landing in Fukuoka.
Flight 1408 from South Korea landed safely on another runway moments later.
Typhoon Shanshan slammed into Japan on Thursday, injuring dozens as howling winds smashed… pic.twitter.com/5mKw2jGyhi
— Breaking Aviation News & Videos (@aviationbrk) August 29, 2024
Advertisement
ಶಂಶಾನ್ ಚಂಡಮಾರುತ (Shanshan Cyclone) ಗುರುವಾರ ಬೆಳಿಗ್ಗೆ ಜಪಾನ್‌ಗೆ ಅಪ್ಪಳಿಸಿತ್ತು. ಶಂಶಾನ್ ಚಂಡಮಾರುತದ ಬಲವಾದ ಗಾಳಿಯಿಂದಾಗಿ ಜಪಾನ್‌ನ ಫುಕುವೋಕಾ ವಿಮಾನ ನಿಲ್ದಾಣದಲ್ಲಿ ಶುಕ್ರವಾರ ಹಲವಾರು ವಿಮಾನಗಳು ತಮ್ಮ ಲ್ಯಾಂಡಿಂಗ್ ರದ್ದುಗೊಳಿಸಿದ್ದವು. ಇದನ್ನೂ ಓದಿ:ರೇಣುಕಾಸ್ವಾಮಿ ಕೊಲೆ ಪ್ರಕರಣದ ತನಿಖೆ ಮುಕ್ತಾಯ ಹಂತಕ್ಕೆ – ಗೃಹಸಚಿವರ ಭೇಟಿಯಾದ ತನಿಖಾಧಿಕಾರಿ
Advertisement
ಚಂಡಮಾರುತದಿಂದ ನೂರಕ್ಕೂ ಅಧಿಕ ಸಂಖ್ಯೆಯ ವಿಮಾನ ಸೇರಿದಂತೆ ಕೆಲವು ಹೈ-ಸ್ಪೀಡ್ ವಿಮಾನಗಳ ಸೇವೆಯನ್ನು ರದ್ದುಗೊಳಿಸಲಾಗಿದೆ.