ಇಸ್ತಾಂಬುಲ್: ವಿಮಾನವೊಂದು ರನ್ ವೇಯಲ್ಲಿ ಸ್ಕಿಡ್ ಆಗಿ ಕಪ್ಪು ಸಮುದ್ರ ದಂಡೆಯ ಬಳಿ ಬಿದ್ದಿರುವ ಘಟನೆ ಉತ್ತರ ಟರ್ಕಿಯ ಟ್ರಬ್‍ಜಾನ್ ವಿಮಾನ ನಿಲ್ದಾಣದಲ್ಲಿ ನಡೆದಿದೆ.
ಪೆಗಾಸಸ್ ಕಂಪೆನಿಯ ಜೆಟ್ ವಿಮಾನ ಲ್ಯಾಂಡ್ ಆಗಿ ರನ್ ವೇಯಲ್ಲಿ ಮುಂದಕ್ಕೆ ಚಲಿಸುತ್ತಿದ್ದಾಗ ಸ್ಕಿಡ್ ಆಗಿದೆ. ಸ್ಕಿಡ್ ಆದ ವಿಮಾನ ತಿರುಗಿ ಕಪ್ಪು ಸಮುದ್ರದ ಬಳಿ ಚಲಿಸಿ ನಿಂತುಕೊಂಡಿದೆ.
Advertisement
ಸಿಬ್ಬಂದಿ ಪ್ರಯಾಣಿಕರು ಸೇರಿ ಒಟ್ಟು 168 ಮಂದಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕಪ್ಪು ಸಮುದ್ರದ ಕಲ ಅಡಿ ದೂರದಲ್ಲಿ ವಿಮಾನ ನಿಂತುಕೊಂಡಿದೆ. ಒಂದು ವೇಳೆ ವಿಮಾನ ಸಮುದ್ರಕ್ಕೆ ಉರುಳಿ ಬಿದ್ದಿದ್ದಾರೆ ಭಾರೀ ಸಾವು ನೋವು ಸಂಭವಿಸುವ ಸಾಧ್ಯತೆ ಇತ್ತು.
Advertisement
ಯಾವ ಕಾರಣಕ್ಕೆ ವಿಮಾನ ಸ್ಕಿಡ್ ಆಗಿದೆ ಎನ್ನುವುದಕ್ಕೆ ತನಿಖೆ ನಡೆಸಲಾಗುವುದು ಎಂದು ಪೆಗಾಸಸ್ ಮಾಧ್ಯಮಗಳಿಗೆ ತಿಳಿಸಿದೆ. ಇದನ್ನೂ ಓದಿ: ಮಂಗಳೂರು ವಿಮಾನ ನಿಲ್ದಾಣದಲ್ಲಿ ತಪ್ಪಿದ ಭಾರೀ ದುರಂತ
Advertisement
https://youtu.be/5ghagEwvS1g
Advertisement
Dün akşam Trabzon'da pistten çıkan TC-CPF kuyruk tescilli uçağın tahliyesine dair video
pic.twitter.com/eFtEas32js
— HavaSosyalMedya® (@HavaSosyalMedya) January 14, 2018