ಕಠ್ಮಂಡು: 67 ಪ್ರಯಾಣಿಕರಿದ್ದ ಬಾಂಗ್ಲಾದೇಶದ ಯುಎಸ್-ಬಾಂಗ್ಲಾ ಏರ್ ಲೈನ್ಸ್ ನ ವಿಮಾನ ಇಂದು ನೇಪಾಳದ ರಾಜಧಾನಿ ಕಠ್ಮಂಡುವಿನ ತ್ರಿಭುವನ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಪಘಾತಕ್ಕೀಡಾಗಿದೆ.
ವಿಮಾನದಲ್ಲಿ ನಾಲ್ವರು ಸಿಬ್ಬಂದಿ ಹಾಗೂ 67 ಪ್ರಯಾಣಿಕರಿದ್ದರು. ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗುವಾಗ ವಿಮಾನ ಅಪಘಾತಕ್ಕೀಡಾಗಿದ್ದು, ಕೂಡಲೇ ಬೆಂಕಿ ಹೊತ್ತಿಕೊಂಡಿದೆ.
Advertisement
Advertisement
ವಿಮಾನದಲ್ಲಿದ್ದ 17 ಮಂದಿಯನ್ನ ರಕ್ಷಣೆ ಮಾಡಲಾಗಿದೆ ಎಂದು ವಿಮಾನ ನಿಲ್ದಾಣ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಉಳಿದ ಪ್ರಯಾಣಿಕರ ಸ್ಥಿತಿ ಬಗ್ಗೆ ಸದ್ಯಕ್ಕೆ ಹೆಚ್ಚಿನ ಮಾಹಿತಿ ಸಿಕ್ಕಿಲ್ಲ ಎಂದು ವಿಮಾನ ನಿಲ್ದಾಣ ವಕ್ತಾರರಾದ ಬೀರೇಂದ್ರ ಪ್ರಸಾದ್ ಶ್ರೇಷ್ಠ ಹೇಳಿದ್ದಾರೆ.
Advertisement
ಬೆಂಕಿಯನ್ನ ನಿಯಂತ್ರಣಕ್ಕೆ ತರಲು ಪ್ರಯತ್ನ ನಡೆಯುತ್ತಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದುಬರಬೇಕಿದೆ ಎಂದು ಅವರು ಹೇಳಿದ್ದಾರೆ.
Advertisement
ವಿಮಾನವು ರನ್‍ವೇ ನಲ್ಲಿ ಲ್ಯಾಂಡ್ ಆಗುವ ವೇಳೆ ವಿಮಾನ ನಿಲ್ದಾಣದ ಬಳಿ ಇರೋ ಫುಟ್‍ಬಾಲ್ ಮೈದಾನದಲ್ಲಿ ಅಪಘಾತಕ್ಕೀಡಾಗಿ ಬೆಂಕಿ ಹೊತ್ತಿಕೊಂಡಿದೆ. ಕೂಡಲೇ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿದ್ದು ಕಾರ್ಯಾಚರಣೆ ನಡೆಸಿದ್ದಾರೆ.
EXCLUSIVE : US-Bangla catches fire in TIAhttps://t.co/CmGPzNsrIU pic.twitter.com/NRagVtfx8B
— República (@RepublicaNepal) March 12, 2018
#Video The 78-seater Bombardier Dash 8 Q400 aircraft of US-Bangla Airlines caught fire after it careened off the runway during landing & crashed. The aircraft (S2-AGU) took off from Dhaka & landed at TIA at 2:20pm
Video courtesy: @1stNepali https://t.co/4bJvvM3jtH pic.twitter.com/0hbs7Woub9
— The Kathmandu Post (@kathmandupost) March 12, 2018