ಹೈದರಾಬಾದ್: ತೆಲಂಗಾಣ ರಾಜ್ಯ ವಿಮಾನಯಾನ ಅಕಾಡೆಮಿಗೆ ಸೇರಿದ ಹೆಲಿಕಾಪ್ಟರ್‍ವೊಂದರ ಡೋರ್ ಇಲ್ಲಿನ ಲಾಲಗುಡದ ಕಟ್ಟಡವೊಂದರ ಮೇಲೆ ಬಿದ್ದ ಘಟನೆ ಸೋಮವಾರದಂದು ನಡೆದಿದೆ.
ಹೆಲಿಕಾಪ್ಟರ್ ಬಾಗಿಲು ಜೋರಾಗಿ ಶಬ್ದದೊಂದಿಗೆ ಕಟ್ಟಡವೊಂದರ ಮೇಲೆ ಬಿದ್ದಿದೆ. ಶಬ್ದ ಕೇಳಿ ಏನಾಯಿತೆಂದು ನೋಡಲು ಇಲ್ಲಿನ ನಿವಾಸಿಗಳು ಹೊರಬಂದಿದ್ದಾರೆ. ನಂತರ ಹೆಲಿಕಾಪ್ಟರ್ ಬಾಗಿಲು ಬಿದ್ದಿದ್ದ ಕಂಡು ಇಲ್ಲಿನ ಯಾದವ್ ಬಸ್ತಿಯ ನಿವಾಸಿಗಳು ಶಾಕ್ ಆಗಿದ್ರು. ಅದೃಷ್ಟವಶಾತ್ ಘಟನೆಯಲ್ಲಿ ಯಾರಿಗೂ ಗಾಯವಾಗಿಲ್ಲ ಹಾಗೂ ಕಟ್ಟಡಕ್ಕೆ ಯಾವುದೇ ಹಾನಿಯಾಗಿಲ್ಲ ಎಂದು ವರದಿಯಾಗಿದೆ. ಇಲ್ಲಿನ ನಿವಾಸಿಗಳು ವಿಮಾನದ ಡೋರ್ ತೆಗೆದುಕೊಂಡು ಪೊಲೀಸ್ ಠಾಣೆಗೆ ಹೋಗಿ ವಿಷಯ ತಿಳಿಸಿದ್ದಾರೆ. ಈ ಬಾಗಿಲು ತರಬೇತುದಾರರ ಹೆಲಿಕಾಪ್ಟರ್‍ಗೆ ಸೇರಿದ್ದು ಎಂದು ಪೊಲೀಸರು ಪತ್ತೆ ಮಾಡಿದ್ದಾರೆ.
Advertisement
ಜೋರಾದ ಶಬ್ದದೊಂದಿಗೆ ಹೆಲಿಕಾಪ್ಟರ್ ಬಾಗಿಲು ಬಿದ್ದಿದೆ. ಆದ್ರೆ ಘಟನೆಯಲ್ಲಿ ಯಾರಿಗೂ ಗಾಯವಾಗಿಲ್ಲ ಎಂದು ಲಾಲಗುಡ ಇನ್ಸ್ ಪೆಕ್ಟರ್ ಕೆ. ಕುಮಾರ್ ಸಿಂಗ್ ಹೇಳಿದ್ದಾರೆ. ಸದ್ಯ ಮುರಿದುಬಿದ್ದ ವಿಮಾನದ ಬಾಗಿಲನ್ನು ಅಕಾಡೆಮಿಗೆ ಹಸ್ತಾಂತರಿಸಲಾಗಿದೆ.
Advertisement
Advertisement
ಘಟನೆ ನಡೆದಿರುವ ಬಗ್ಗೆ ಅಕಾಡೆಮಿಯ ಪ್ರಾಂಶುಪಾಲರಾದ ಚಂದ್ರಶೇಖರ್ ರಾವ್ ಖಚಿತಪಡಿಸಿದ್ದು, ಈ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.
Advertisement
ಘಟನೆ ಬಗ್ಗೆ ನಾಗರೀಕ ವಿಮಾನಯಾನದ ನಿರ್ದೇಶಕರು ತನಿಖೆ ಮಾಡಲಿದ್ದಾರೆ. ಘಟನೆ ನಡೆದ ವೇಳೆ ಮಲ್ಟಿ ಎಂಜಿನ್ ಡೈಮಂಡ್ ಡಿಎ-42 ಹೆಲಿಕಾಪ್ಟರ್‍ನಲ್ಲಿ ಹಿರಿಯ ಪೈಲಟ್ ಹಾಗೂ ತರಬೇತಿ ಪಡೆಯುವ ವ್ಯಕ್ತಿ ಇದ್ದರು. ಡೋರ್ ಮುರಿದುಬಿದ್ದ ನಂತರವೂ ಹಾರಾಟ ಮುಂದುವರೆಸಿದ್ದು, ಹೆಲಿಕಾಪ್ಟರ್ ಸುರಕ್ಷಿತವಾಗಿ ಲ್ಯಾಂಡ್ ಆಗಿದೆ ಎಂದು ಅವರು ಹೇಳಿದ್ದಾರೆ.