ಫಿಲಡೆಲ್ಫಿಯಾದಲ್ಲಿ ವಿಮಾನ ಪತನ – 6 ಮಂದಿ ದುರ್ಮರಣ, ಟ್ರಂಪ್‌ ಸಂತಾಪ

Public TV
2 Min Read
Philadelphia

ಫಿಲಡೆಲ್ಫಿಯಾ: ಪೆನ್ಸಿಲ್ವೆನಿಯಾದ ಅತಿದೊಡ್ಡ ನಗರವಾದ ಫಿಲಡೆಲ್ಫಿಯಾದಲ್ಲಿ ಲಘು ವಿಮಾನ ಪತನಗೊಂಡಿದ್ದು (Philadelphia Plane Crashes) ಕನಿಷ್ಠ 6 ಮಂದಿ ಸಾವಪ್ಪಿದ್ದಾರೆ ಎಂದು ವರದಿಯಾಗಿದೆ. ಈ ದುರಂತದಲ್ಲಿ ಸ್ಥಳೀಯರೂ ಸಾವನ್ನಪ್ಪಿದ್ದು ಹೆಚ್ಚಿನ ಸಾವುನೋವುಗಳಾಗಿರುವ ಸಾಧ್ಯತೆಗಳಿವೆ ಎಂದು ವರದಿಗಳು ತಿಳಿಸಿವೆ.

ಅಪಘಾತಕ್ಕೀಡಾದ ವಿಮಾನದಲ್ಲಿ ಒಂದು ಮಗು ಸೇರಿದಂತೆ 6 ಜನರು ಪ್ರಯಾಣಿಸುತ್ತಿದ್ದರು. ಈ ಆರು ಜನರೂ ಮೆಕ್ಸಿಕನ್‌ ಮೂಲದವರು ಎಂದು ತಿಳಿದುಬಂದಿದೆ. ಇದನ್ನೂ ಓದಿ: ಇಬ್ಬರು ಪುರುಷರೊಟ್ಟಿಗೆ ಸೆಕ್ಸ್‌ – ಶೂಟಿಂಗ್‌ ಮಾಡುವಾಗಲೇ ಹೋಟೆಲ್‌ ಬಾಲ್ಕನಿಯಿಂದ ಬಿದ್ದು ನೀಲಿ ತಾರೆ ಸಾವು

ಲಘು ವಿಮಾನವು ಈಶಾನ್ಯ ಫಿಲಡೆಲ್ಫಿಯಾ ವಿಮಾನ ನಿಲ್ದಾಣದಿಂದ (Philadelphia Airport) ಮಿಸೌರಿಯ ಸ್ಪ್ರಿಂಗ್‌ಫೀಲ್ಡ್-ಬ್ರಾನ್ಸನ್ ರಾಷ್ಟ್ರೀಯ ವಿಮಾನ ನಿಲ್ದಾಣದ ಕಡೆಗೆ ಹೊರಟಿತ್ತು. ಆದ್ರೆ ಈಶಾನ್ಯ ಫಿಲಡೆಲ್ಫಿಯಾ ವಿಮಾನ ನಿಲ್ದಾಣದಿಂದ 3 ಮೈಲಿ ದೂರದಲ್ಲಿ ವಿಮಾನ ಟೇಕಾಫ್‌ ಆದ ಕೇವಲ 30 ಸೆಕೆಂಡುಗಳಲ್ಲಿ ಪತಗೊಂಡಿದೆ. ಈ ವೇಳೆ ಬೆಂಕಿ ಉಂಡೆಗಳು ಚಿಮ್ಮಿದ್ದು ಹತ್ತಿರದ ಮನೆಗಳಿಗೂ ಹಾನಿಯಾಗಿದೆ.

ಸದ್ಯಕ್ಕೆ ವಿಮಾನದಲ್ಲಿದ್ದವರು ಬದುಕಿಳಿದಿರುವ ಯಾವುದೇ ಸಾಧ್ಯತೆಗಳಿಲ್ಲ. ಅಲ್ಲದೇ ವಿಮಾನ ಪತನದ ಬಳಿಕ ಎಷ್ಟು ಕೆಳಗಿದ್ದವರಲ್ಲಿ ಎಷ್ಟು ಜನ ಸಾವನ್ನಪ್ಪಿದ್ದಾರೆ ಎಂಬುದು ಇನ್ನೂ ಖಚಿತವಾಗಿಲ್ಲ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಟಿಕ್‌ಟಾಕ್ ವೀಡಿಯೋ ಮಾಡಿದ್ದಕ್ಕೆ ಪಾಕಿಸ್ತಾನದಲ್ಲಿ 15 ವರ್ಷದ ಪುತ್ರಿಯನ್ನೇ ಗುಂಡಿಕ್ಕಿ ಕೊಂದ ಅಪ್ಪ

ಘಟನೆಗೆ ಪೆನ್ಸಿಲ್ವೇನಿಯಾ ಗವರ್ನರ್ ಜೋಶ್ ಶಪಿರೊ ಕಂಬನಿ ಮಿಡಿದಿದ್ದಾರೆ. ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ಎಕ್ಸ್‌ ಖಾತೆಯಲ್ಲಿ ಸಂತಾಪ ಸೂಚಿಸಿದ್ದಾರೆ. ʻಫಿಲಡೆಲ್ಫಿಯಾದಲ್ಲಿ ವಿಮಾನವು ಪತನಗೊಂಡಿರುವುದು ನೋಡಿ ತುಂಬಾ ದುಃಖವಾಗಿದೆ, ಮುಗ್ಧ ಜೀವಗಳು ಬಲಿಯಾಗಿವೆ ಎಂದು ಶೋಕ ವ್ಯಕ್ತಪಡಿಸಿದ್ದಾರೆ.

ಕಳೆದ ಮೂರು ದಿನಗಳ ಹಿಂದೆಯಷ್ಟೇ ವಾಷಿಂಗ್ಟನ್‌ ಡಿಸಿಯಲ್ಲಿ ಸೇನಾ ಹೆಲಿಕಾಪ್ಟರ್‌ – ಅಮೆರಿಕರ ವಿಮಾನದ ನಡುವಿನ ದುರಂತದಲ್ಲಿ (Plane Helicopter Collision) 67 ಮಂದಿ ದುರ್ಮರಣಕ್ಕೀಡಾದ ಘಟನೆ ನಡೆಸಿತ್ತು. ಈ ಬೆನ್ನಲ್ಲೇ ಅಮೆರಿಕದ ರಾಷ್ಟ್ರವಾಗಿರುವ ಪೆನ್ಸಿಲ್ವೆನಿಯಾದಲ್ಲಿ ಮತ್ತೊಂದು ದುರಂತವಾಗಿದೆ.

Share This Article