ಅಹಮದಾಬಾದ್: ಸೂರತ್ನಲ್ಲಿ (Surat) ನಿಶ್ಚಿತಾರ್ಥ (Engagement) ಮುಗಿಸಿಕೊಂಡು ಲಂಡನ್ಗೆ ಹೊರಟಿದ್ದ ಜೋಡಿಯೊಂದು ವಿಮಾನ ದುರಂತದಲ್ಲಿ (Plane Crash) ಸಾವನ್ನಪ್ಪಿದ್ದಾರೆ.
ಮೃತರನ್ನು ಹಾರ್ದಿಕ್ ಹಾಗೂ ವಿಭೂತಿ ಎಂದು ಗುರುತಿಸಲಾಗಿದೆ. ವಿಭೂತಿ ಲಂಡನ್ನಲ್ಲಿ ಫಿಸಿಯೋಥೆರಪಿ ಮಾಸ್ಟರ್ಸ್ ಮಾಡುತ್ತಿದ್ದರು. ಹಾರ್ದಿಕ್ ಲಂಡನ್ನಲ್ಲಿ ಅಮೆಜಾನ್ ಉದ್ಯೋಗಿಯಾಗಿದ್ದರು. ಅಲ್ಲಿಯೇ ಭೇಟಿಯಾಗಿ, ಇಬ್ಬರ ನಡುವೆ ಲವ್ ಶುರುವಾಗಿತ್ತು. 10 ದಿನ ರಜೆ ಹಾಕಿ ಎಂಗೇಜ್ಮೆಂಟ್ ಮಾಡಿಕೊಳ್ಳಲು ಊರಿಗೆ ಬಂದಿದ್ದರು. ಎಂಗೇಜ್ಮೆಂಟ್ ಮುಗಿಸಿ ಮದುವೆಯ ಕನಸು ಕಂಡಿದ್ದ ಜೋಡಿ ಲಂಡನ್ಗೆ ವಾಪಸ್ ಆಗುವಾಗ ವಿಮಾನ ದುರಂತದಲ್ಲಿ ದುರಂತ ಅಂತ್ಯ ಕಂಡಿದ್ದಾರೆ. ಮೃತರನ್ನು ನೆನೆದು ಕುಟುಂಬಸ್ಥರು ಕಣ್ಣೀರಿಟ್ಟಿದ್ದಾರೆ. ಇದನ್ನೂ ಓದಿ: ಅಹಮದಾಬಾದ್ ವಿಮಾನ ದುರಂತ – ಸಾವಿನ ಸಂಖ್ಯೆ 265ಕ್ಕೆ ಏರಿಕೆ
ಗುರುವಾರ ಅಹಮದಾಬಾದ್ನಲ್ಲಿ ಅಪಘಾತಗೊಂಡ ಏರ್ ಇಂಡಿಯಾ (Air India) ವಿಮಾನದಲ್ಲಿ 12 ಮಂದಿ ಸಿಬ್ಬಂದಿ ಸೇರಿ 242 ಜನ ಇದ್ದರು. ಈ ಅವಘಡದಲ್ಲಿ 241 ಜನ ಸಾವನ್ನಪ್ಪಿದ್ದಾರೆ. ಓರ್ವ ಮಾತ್ರ ಪವಾಡ ಸದೃಶ್ಯವಾಗಿ ಬದುಕುಳಿದಿದ್ದಾರೆ. ಇದನ್ನೂ ಓದಿ: Plane Crash | ಟಾಟಾ ಗ್ರೂಪ್ ಇತಿಹಾಸದ ಕರಾಳ ದಿನಗಳಲ್ಲಿ ಇದೂ ಒಂದು – ಸಂಸ್ಥೆಯ ಅಧ್ಯಕ್ಷರಿಂದ ಭಾವುಕ ಪತ್ರ