ಬೀಜಿಂಗ್: 133 ಜನರಿದ್ದ ಚೀನಾದ ವಿಮಾನವು ದಕ್ಷಿಣ ಪ್ರಾಂತ್ಯದ ಗುವಾಂಗ್ಸಿಯಲ್ಲಿ ಸೋಮವಾರ ಪತನಗೊಂಡಿದೆ. ವಿಮಾನ ಬಿದ್ದ ರಭಸಕ್ಕೆ ಪರ್ವತದ ಅರಣ್ಯ ಪ್ರದೇಶ ಹೊತ್ತಿ ಉರಿದಿದೆ.
ಚೈನಾ ಈಸ್ಟರ್ನ್ ಏರ್‌ಲೈನ್ಸ್ ಬೋಯಿಂಗ್-737 ವಿಮಾನವು ಟೆಂಗ್ ಕೌಂಟಿಯ ವುಝೌ ನಗರದ ಅಪಘಾತಕ್ಕೀಡಾಗಿದೆ. ಇದ್ದಕ್ಕಿದ್ದಂತೆ ವಿಮಾನ ಪರ್ವತಕ್ಕೆ ಅಪ್ಪಳಿಸಿದೆ. ಪರಿಣಾಮವಾಗಿ ಪರ್ವತದ ಪ್ರದೇಶವೆಲ್ಲಾ ಬೆಂಕಿಗಾಹುತಿಯಾಗಿದೆ. ಸ್ಥಳಕ್ಕೆ ರಕ್ಷಣಾ ಸಿಬ್ಬಂದಿಯನ್ನು ಕಳುಹಿಸಲಾಗಿದೆ. ಮೃತರು ಮತ್ತು ಗಾಯಾಳುಗಳ ಸಂಖ್ಯೆ ಮಾಹಿತಿ ನಿಖರವಾಗಿ ಲಭಿಸಿಲ್ಲ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: 133 ಪ್ರಯಾಣಿಕರಿದ್ದ ಚೀನಾ ವಿಮಾನ ಪತನ
Advertisement
Advertisement
ಶಾಂಘೈ ಮೂಲದ ಚೈನಾ ಈಸ್ಟರ್ನ್, ಚೀನಾದ ಪ್ರಮುಖ ಮೂರು ವಿಮಾನಯಾನ ಸಂಸ್ಥೆಗಳಲ್ಲಿ ಒಂದಾಗಿದೆ. ವಿಮಾನ ಟ್ರ‍್ಯಾಕಿಂಗ್ ವೆಬ್‌ಸೈಟ್ ‘ಫ್ಲೈಟ್ ರೇಡರ್24’ ಮಾಹಿತಿ ಪ್ರಕಾರ, ಕುನ್ಮಿಂಗ್‌ನಿಂದ ಗುವಾಂಗ್‌ಝೌಗೆ ಪ್ರಯಾಣಿಸುತ್ತಿದ್ದ MU5735 ವಿಮಾನ ಅಪಘಾತಕ್ಕೀಡಾಗಿದೆ. ಲ್ಯಾಂಡಿಂಗ್ ಆಗಲು ಸಿದ್ಧವಾಗುತ್ತಿದ್ದ ಸಂದರ್ಭದಲ್ಲಿ ವೇಗವನ್ನು ಕಳೆದುಕೊಂಡು ಪತನಗೊಂಡಿದೆ ಎಂದು ತಿಳಿಸಿದೆ.
Advertisement
ನಿಯಂತ್ರಣ ಕಳೆದುಕೊಂಡ ವಿಮಾನವು ಸುಮಾರು 3,225 ಅಡಿ ಆಳದ ಪರ್ವತಾರಣ್ಯ ಪ್ರಪಾತಕ್ಕೆ ಕೇವಲ 3 ನಿಮಿಷದಲ್ಲಿ ಅಪ್ಪಳಿಸಿದೆ. ಅಪಘಾತದ ನಿಖರವಾದ ಸ್ಥಳವು ಟೆಂಗ್ ಕೌಂಟಿಯ ಲ್ಯಾಂಗ್ನಾನ್ ಟೌನ್‌ಶಿಪ್ ಎಂದು ಗುರುತಿಸಲಾಗಿದೆ. ಇದನ್ನೂ ಓದಿ: ಶ್ಯಾಮನೂರು ಶಿವಶಂಕರಪ್ಪನವರದ್ದು ಎಷ್ಟನೇ ಬಣ – ಸಿದ್ದುಗೆ ಬಿಜೆಪಿ ಪ್ರಶ್ನೆ
Advertisement
Final seconds of #MU5735 pic.twitter.com/gCoMX1iMDL
— ChinaAviationReview (@ChinaAvReview) March 21, 2022
ಈ ವಿಮಾನವನ್ನು ಜೂನ್, 2015 ರಲ್ಲಿ ಬೋಯಿಂಗ್‌ನಿಂದ ಚೀನಾ ಈಸ್ಟರ್ನ್ಗೆ ಹಸ್ತಾಂತರಿಸಲಾಯಿತು. ಆರು ವರ್ಷಗಳಿಂದ ಈ ವಿಮಾನ ಹಾರಾಟ ನಡೆಸುತ್ತಿತ್ತು.
ಈ ಹಿಂದೆಯೂ ಚೀನಾದ ವಿಮಾನ ಅಪಘಾತಗೊಂಡು ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಕರು ಮೃತಪಟ್ಟಿದ್ದರು. 2010ರಲ್ಲಿ ಹೆನಾನ್ ಏರ್‌ಲೈನ್ಸ್ ವಿಮಾನವು ಈಶಾನ್ಯ ಹೀಲಾಂಗ್‌ಜಿಯಾಂಗ್ ಪ್ರಾಂತ್ಯದಲ್ಲಿ ಅಪಘಾತಕ್ಕೀಡಾಗಿತ್ತು. ಅದರಲ್ಲಿದ್ದ 92 ಜನರಲ್ಲಿ ಕನಿಷ್ಠ 42 ಜನರು ಸಾವನ್ನಪ್ಪಿದ್ದರು. ಇದನ್ನೂ ಓದಿ: ಉಬರ್ ಚಾಲಕರಾದ ಅಫ್ಘಾನ್ ಮಾಜಿ ಹಣಕಾಸು ಸಚಿವ
???? Boeing 737 passenger jet carrying 133 people crashes into mountains in rural China
+ Plume of smoke is seen billowing from the wreckage
READ MORE: https://t.co/tECXl4TGaW pic.twitter.com/q11LZlnHRG
— Daily Mail Online (@MailOnline) March 21, 2022
1994 ರಲ್ಲಿ ಚೀನಾ ನಾರ್ತ್ವೆಸ್ಟ್ ಏರ್‌ಲೈನ್ಸ್ ಅಪಘಾತಕ್ಕೀಡಾದ ಅದರಲ್ಲಿ ಪ್ರಯಾಣಿಸುತ್ತಿದ್ದ 160 ಜನರನ್ನು ಮೃತಪಟ್ಟಿದ್ದರು.