ಇಸ್ಲಾಮಾಬಾದ್: ಭಾರತದಿಂದ 12ಕ್ಕೂ ಹೆಚ್ಚು ಮಂದಿ ಪ್ರಯಾಣಿಕರನ್ನು ಹೊತ್ತೊಯ್ದ ಚಾರ್ಟರ್ ಏರ್‌ಪ್ಲೇನ್ ಕರಾಚಿಯಲ್ಲಿರುವ ಪಾಕಿಸ್ತಾನದ ಜಿನ್ನಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸೋಮವಾರ ಲ್ಯಾಂಡಿಂಗ್ ಆಗಿದೆ.
ಈ ವಿಶೇಷ ವಿಮಾನವು ಹೈದರಾಬಾದ್‍ನ ರಾಜೀವ್ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊರಟು ಮಧ್ಯಾಹ್ನ 12:10 ಕ್ಕೆ (ಸ್ಥಳೀಯ ಕಾಲಮಾನ) ಕರಾಚಿ ವಿಮಾನ ನಿಲ್ದಾಣಕ್ಕೆ ಬಂದಿಳಿದಿದೆ ಎಂದು ತಿಳಿದುಬಂದಿದೆ. ಇದನ್ನೂ ಓದಿ: ಅಜಾತಶತ್ರು ವಾಜಪೇಯಿ 4ನೇ ಪುಣ್ಯತಿಥಿ – ಗಣ್ಯರಿಂದ ಪುಷ್ಪ ನಮನ
Advertisement
Advertisement
ಈ ಬಗ್ಗೆ ಪ್ರತಿಕ್ರಿಯಿಸಿರುವ ನಾಗರಿಕ ವಿಮಾನಯಾನ ಪ್ರಾಧಿಕಾರದ (ಸಿಎಎ) ವಕ್ತಾರರು, ಅಂತರರಾಷ್ಟ್ರೀಯ ಚಾರ್ಟರ್ ವಿಮಾನವು ಭಾರತದಿಂದ ಪಾಕಿಸ್ತಾನಕ್ಕೆ ಬಂದಿರುವುದು ನಿಜ. ಆದರೆ ಇದನ್ನು ಹೊರತುಪಡಿಸಿ ದೇಶದೊಂದಿಗೆ ಯಾವುದೇ ಸಂಬಂಧವನ್ನು ಹೊಂದಿಲ್ಲ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಅಖಿಲ ಭಾರತ ಫುಟ್‌ಬಾಲ್ ಫೆಡರೇಶನ್ ಅಮಾನತುಗೊಳಿಸಿದ ಫಿಫಾ
Advertisement
Advertisement
ಕರಾಚಿಯಲ್ಲಿ ಲ್ಯಾಂಡ್ ಸ್ವಲ್ಪ ಹೊತ್ತು ಲ್ಯಾಂಡ್ ಆದ ವಿಮಾನ ನಂತರ 12 ಮಂದಿ ಪ್ರಯಾಣಿಕರೊಂದಿಗೆ ವಾಪಸ್ ಹೊರಟಿತು. ಆದರೆ ಕರಾಚಿ ವಿಮಾನ ನಿಲ್ದಾಣದಲ್ಲಿ ವಿಮಾನ ಏಕೆ ಲ್ಯಾಂಡ್ ಆಗಿತ್ತು ಎಂಬುದರ ಬಗ್ಗೆ ಇನ್ನೂ ಸ್ಪಷ್ಟವಾದ ಮಾಹಿತಿ ತಿಳಿದು ಬಂದಿಲ್ಲ. ಇದೇ ರೀತಿ ಕಳೆದ ತಿಂಗಳು ತಾಂತ್ರಿಕ ಸಮಸ್ಯೆಗಳಿಂದಾಗಿ ಭಾರತದಿಂದ ಹೊರಟ ಎರಡು ವಿಮಾನಗಳು ಕರಾಚಿಗೆ ಬಂದಿಳಿದಿತ್ತು.