ಟೊರೊಂಟೋ: ಲ್ಯಾಂಡ್ ಆಗಿ ರನ್ ವೇಯಲ್ಲಿ ಸಾಗುವಾಗ ವಿಮಾನ ಪಲ್ಟಿಯಾಗಿ ಹೊತ್ತಿ ಉರಿದ (Plane Crash) ಘಟನೆ ಕೆನಡಾದ (Canada) ರಾಜಧಾನಿ ಟೊರೊಂಟೋದಲ್ಲಿ (Toronto) ನಡೆದಿದೆ.
80 ಜನರನ್ನು ಹೊತ್ತಿದ್ದ ಡೆಲ್ಟಾ ಏರ್ ಲೈನ್ಸ್ ವಿಮಾನ ಲ್ಯಾಂಡ್ ಆಗಿ ರನ್‌ವೇಯಲ್ಲಿ ಮುಂದಕ್ಕೆ ಬರುತ್ತಿತ್ತು. ಈ ವೇಳೆ ಅವಘಡ ಸಂಭವಿಸಿದೆ. ವಿಮಾನ ದುರಂತದಲ್ಲಿ ಕನಿಷ್ಠ 18 ಜನರಿಗೆ ಗಾಯಗಳಾಗಿವೆ. ಇದರಲ್ಲಿ ಒಂದು ಮಗು ಸೇರಿದಂತೆ, ಓರ್ವ ವ್ಯಕ್ತಿ ಹಾಗೂ ಮಹಿಳೆಯೊಬ್ಬರ ಸ್ಥಿತಿ ಗಂಭೀರವಾಗಿದೆ. ಘಟನೆಯಲ್ಲಿ ಯಾವುದೇ ಸಾವು ಸಂಭವಿಸಿಲ್ಲ. ವಿಮಾನ ಅಪಘಾತಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲ. ಇದನ್ನೂ ಓದಿ: ಬಿಜೆಪಿ ಸಿಎಂಗಳು ಸಿಟಿ ರೌಂಡ್ ಮಾಡಿದ್ದು ಫೋಟೋಶೂಟಿಗಾ? – ಡಿಕೆಶಿ ಫುಲ್ ಗರಂ
Advertisement
Someone sends this, I don’t actually know what it is pic.twitter.com/C0miakUdOW
— JonNYC (@xJonNYC) February 17, 2025
Advertisement
76 ಪ್ರಯಾಣಿಕರು ಮತ್ತು ನಾಲ್ವರು ಸಿಬ್ಬಂದಿ ಇದ್ದ ವಿಮಾನ ಅಮೆರಿಕದ ಮಿನ್ನೇಸೋಟದ ಮಿನ್ನಿಯಾಪೋಲಿಸ್‌ನಿಂದ ಕೆನಡಾದ ಅತಿದೊಡ್ಡ ಮಹಾನಗರ ಟೊರೊಂಟೊಕ್ಕೆ ಬಂದಿತ್ತು ಎಂದು ವಿಮಾನಯಾನ ಸಂಸ್ಥೆ ತಿಳಿಸಿದೆ.
Advertisement
A Delta flight carrying roughly 80 passengers from Minnesota appears to have crash landed at Toronto Pearson Airport. No casualties have been reported as of this time. Numerous photos and videos have been released showing passengers safely exiting the plane, which flipped upside… pic.twitter.com/YWjztVufla
— MeidasTouch (@MeidasTouch) February 17, 2025
Advertisement
ವಿಮಾನ ಪಲ್ಟಿಯಾಗುತ್ತಿದ್ದಂತೆ ನಿಲ್ದಾಣದಲ್ಲಿದ್ದ ಸಿಬ್ಬಂದಿ ಕೂಡಲೇ ಬೆಂಕಿ ನಂದಿಸಿ, ರಕ್ಷಣಾ ಕಾರ್ಯಾಚರಣೆ ನಡೆಸಿದ್ದಾರೆ. ಬಳಿಕ ಗಾಯಗಳುಗಳನ್ನು ಹೆಲಿಕಾಪ್ಟರ್ ಮೂಲಕ ಆಸ್ಪತ್ರೆಗಳಿಗೆ ಕರೆದೊಯ್ಯಲಾಯಿತು. ಘಟನೆಯ ನಂತರ ವಿಮಾನ ನಿಲ್ದಾಣದಲ್ಲಿ ವಿಮಾನಗಳ ಹಾರಾಟವನ್ನು ಸ್ಥಗಿತಗೊಳಿಸಲಾಗಿತ್ತು. ಸುಮಾರು ಎರಡು ಗಂಟೆಗಳ ಬಳಿಕ ವಿಮಾನ ನಿಲ್ದಾಣದಿಂದ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇತ್ತೀಚೆಗೆ ಉತ್ತರ ಅಮೆರಿಕದಲ್ಲಿ ವಾಷಿಂಗ್ಟನ್‌ನಲ್ಲಿ ಯುಎಸ್ ಸೇನಾ ಹೆಲಿಕಾಪ್ಟರ್ ಮತ್ತು ಪ್ಯಾಸೆಂಜರ್ ಜೆಟ್ ನಡುವೆ ಆಕಾಶದಲ್ಲಿ ಡಿಕ್ಕಿ ಸಂಭವಿಸಿ 67 ಜನರು ಸಾವನ್ನಪ್ಪಿದ್ದರು. ಇದನ್ನೂ ಓದಿ: ಮುಖ್ಯ ಚುನಾವಣಾ ಆಯುಕ್ತರಾಗಿ ಜ್ಞಾನೇಶ್ ಕುಮಾರ್ ನೇಮಕ