ಬೆಂಗಳೂರು: ಮೆಟ್ರೋ ನಿಲ್ದಾಣಗಳಲ್ಲಿ (Metro Station) ಸಾಲು ಸಾಲು ಆತ್ಮಹತ್ಯೆ ಪ್ರಕರಣಗಳು ನಡೆಯುತ್ತಿರುವುದರಿಂದ ಬೆಂಗಳೂರು ಮೆಟ್ರೋ ರೈಲು ಕಾರ್ಪೋರೇಷನ್ ಲಿಮಿಟೆಡ್ (BMRCL) ಎಚ್ಚೆತ್ತುಕೊಂಡಿದ್ದು, ಅವಾಂತರಗಳನ್ನ ತಡೆಯುವ ಬಗ್ಗೆ ಚಿಂತನೆ ನಡೆಸುತ್ತಿದೆ.
Advertisement
ನಗರದ ಎಲ್ಲಾ ಮೆಟ್ರೋ ನಿಲ್ದಾಣಗಳಲ್ಲೂ ಫ್ಲಾಟ್ ಫಾರ್ಮ್ ಸ್ಕ್ರೀನ್ ಡೋರ್ ಅಳವಡಿಕೆಗೆ ಪ್ಲಾನ್ ಮಾಡಲಾಗುತ್ತಿದೆ. ಪ್ರಯಾಣಿಕರ ಸುರಕ್ಷತೆಗಾಗಿ ಯು ಗಾರ್ಡರ್ ಅಳವಡಿಕೆ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ. ಜೊತೆಗೆ ಸೆಕ್ಯುರಿಟಿ ಸಿಬ್ಬಂದಿ ಸಂಖ್ಯೆ ಮತ್ತಷ್ಟು ಹೆಚ್ಚಳ ಮಾಡುವುಕ್ಕೂ ನಿರ್ಧರಿಸಲಾಗುತ್ತದೆ.
Advertisement
Advertisement
ಕಳೆದ ಬಾರಿ ಆತ್ಮಹತ್ಯಾ ಪ್ರಕರಣ ನಡೆದಾಗಲೇ ಸಿಬ್ಬಂದಿ ಸಂಖ್ಯೆ ಹೆಚ್ಚು ಮಾಡಲಾಗಿತ್ತು. ಗುರುವಾರ ನಡೆದ ಪ್ರಕರಣದ ನಂತರ ಸಿಬ್ಬಂದಿ ಸಂಖ್ಯೆಯನ್ನು ಇನ್ನೂ ಹೆಚ್ಚಳ ಮಾಡಲು ಬಿಎಂಆರ್ ಸಿಎಲ್ ನಿರ್ಧರಿಸಿದೆ. ಪ್ರಯಾಣಿಕರ ಸಂಖ್ಯೆ ಹೆಚ್ಚಿರುವ ನಿಲ್ದಾಣ ಮಾತ್ರವಲ್ಲ, ನಗರದ ಎಲ್ಲಾ ನಿಲ್ದಾಣಗಳಿಗೂ ಸಿಬ್ಬಂದಿ ಹೆಚ್ಚಳ ಮಾಡುವ ಪ್ಲಾನ್ ಇದೆ. ಇದನ್ನೂ ಓದಿ: ಮೆಟ್ರೋ ರೈಲು ಹಳಿಗೆ ಹಾರಿ ವಿದ್ಯಾರ್ಥಿ ಆತ್ಮಹತ್ಯೆ – ಮೆಟ್ರೋ ಸೇವೆಯಲ್ಲಿ ವ್ಯತ್ಯಯ
Advertisement
ನಿನ್ನೆಯ ಪ್ರಕರಣದಲ್ಲಿ ಸ್ಟೇಷನ್ ಪ್ರಾರಂಭದ ಕಾರ್ನರ್ ಬಳಿ ಯುವಕ ಹೋಗಿದ್ದ. ಈ ಹಿನ್ನೆಲೆಯಲ್ಲಿ ಸ್ಟೇಷನ್ ಕಾರ್ನರ್ ಬಳಿ ಸಂಪೂರ್ಣ ತಡೆಗೋಡೆಗೆ ಪ್ಲಾನ್ ಮಾಡಲಾಗುತ್ತಿದೆ ಎಂದು ಬಿಎಂಆರ್ ಸಿಎಲ್ ಉನ್ನತ ಮೂಲಗಳಿಂದ ಪಬ್ಲಿಕ್ ಟಿವಿಗೆ ಮಾಹಿತಿ ಸಿಕ್ಕಿದೆ.