ಬೆಂಗಳೂರು: ಕಾಂಗ್ರೆಸ್ (Congress) ಮೊದಲ ಪಟ್ಟಿ ಬಿಡುಗಡೆಗೆ ಹೆಸರು ಅಂತಿಮಗೊಳಿಸುವ ಸಿದ್ದತೆ ಜೋರಾಗಿದೆ. ಮೊದಲ ಪಟ್ಟಿಯಲ್ಲಿ 100 ಜನರ ಹೆಸರು ಬಿಡುಗಡೆ ಮಾಡುವ ಸಾಧ್ಯತೆ ಇದ್ದು, ಸಿದ್ದರಾಮಯ್ಯ (Siddaramaiah) ಹಾಗೂ ಡಿಕೆಶಿ (D.K.Shivakumar) ನಡುವೆ 50/50 ಫಾರ್ಮುಲ ಟಿಕೆಡ್ ಹಂಚಿಕೆಯಾಗುವ ಸಾಧ್ಯತೆ ಇದೆ.
ಈ ಫಾರ್ಮುಲ ಜಾರಿಗೂ ಮುನ್ನ ಸಿದ್ದರಾಮಯ್ಯ ಹಾಗೂ ಡಿಕೆಶಿ ನಡುವೆ ಸಂಧಾನ ಸಭೆ ಮಾತುಕತೆ ಸಹ ನಡೆಯಲಿದೆ. ಫೆಬ್ರವರಿ 1 ರಂದು ಇಬ್ಬರ ನಡುವೆ ಒಮ್ಮತಾಭಿಪ್ರಾಯದ ಸೀಕ್ರೆಟ್ ಮೀಟಿಂಗ್ ನಡೆಯೋದು ಫಿಕ್ಸ್ ಎನ್ನಲಾಗಿದೆ. ಅಲ್ಲಿ ಒಮ್ಮತ ಮೂಡಿದರೆ ಫೆಬ್ರವರಿ 10 ರೊಳಗೆ 100 ಜನರ ಮೊದಲ ಪಟ್ಟಿ ಬಿಡುಗಡೆ ಬಹುತೇಕ ಖಚಿತ ಎನ್ನುತ್ತಿವೆ ಕಾಂಗ್ರೆಸ್ ಮೂಲಗಳು. ಇದನ್ನೂ ಓದಿ: ರಾಜ್ಯದಲ್ಲಿ 150 ಸ್ಥಾನ ಗೆದ್ದು BJP ಅಧಿಕಾರಕ್ಕೆ ಬರೋದು ಖಚಿತ – ಅರುಣ್ ಸಿಂಗ್ ವಿಶ್ವಾಸ
ಸಿದ್ದರಾಮಯ್ಯ ಹಾಗೂ ಡಿಕೆಶಿ ಇಬ್ಬರಿಗೂ ಹೈಕಮಾಂಡ್ನಿಂದ 100/ 50-50 ಫಾರ್ಮುಲದ ಸಂದೇಶ ರವಾನೆಯಾಗಿದೆ. ಕಾಂಗ್ರೆಸ್ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆಗೆ ಕಾಂಗ್ರೆಸ್ನಲ್ಲಿ ಸಿದ್ದತೆ ಜೋರಾಗಿದೆ. ಈ ಸಂಬಂಧ ಫೆಬ್ರವರಿ 2 ರಂದು ಮಹತ್ವದ ಸಭೆ ಸಹ ಕರೆಯಲಾಗಿದೆ. ಅದಕ್ಕೂ ಮೊದಲು ಫೆಬ್ರವರಿ 1 ರಂದು ಸಿದ್ದರಾಮಯ್ಯ ಹಾಗೂ ಡಿಕೆಶಿ ನಡುವೆ ಸಮನ್ವಯ ಸಭೆ ನಡೆಯಲಿದೆ ಎನ್ನಲಾಗಿದೆ.
ರಾಜ್ಯ ಕಾಂಗ್ರೆಸ್ ಉಸ್ತುವಾರಿ ಸುರ್ಜೆವಾಲ ಸಮ್ಮುಖದಲ್ಲಿ ಇಬ್ಬರ ನಡುವೆ ಪ್ರತ್ಯೇಕ ಸಭೆ ನಡೆಸಲು ತೀರ್ಮಾನಿಸಲಾಗಿದೆ. ಸಭೆಯಲ್ಲಿ ಮೊದಲ ಪಟ್ಟಿಯ 100 ಅಭ್ಯರ್ಥಿಗಳ ಹೆಸರು ಅಂತಿಮಗೊಳಿಸುವ ಬಗ್ಗೆ ಸುರ್ಜೇವಾಲ ಅವರು ಇಬ್ಬರ ಅಭಿಪ್ರಾಯ ಸಂಗ್ರಹಿಸಲಿದ್ದಾರೆ. ಒಂದು ಮೂಲದ ಪ್ರಕಾರ ಮೊದಲ 100 ಹೆಸರಿನಲ್ಲಿ ಸಿದ್ದರಾಮಯ್ಯ ಹಾಗೂ ಡಿಕೆಶಿ ನಡುವೆ 50-50 ಫಾರ್ಮುಲ ಟಿಕೆಟ್ ಹಂಚಿಕೆ ಮಾಡುವುದು ಕೈ ಹೈಕಮಾಂಡ್ ಲೆಕ್ಕಾಚಾರ ಎನ್ನಲಾಗಿದೆ. ಇದನ್ನೂ ಓದಿ: ಕುಮಾರಸ್ವಾಮಿಯನ್ನು ಬಿಟ್ಟು ನಾನು ಏನೂ ಮಾಡಲ್ಲ – ಟಿಕೆಟ್ ದಂಗಲ್ ಬಗ್ಗೆ ಮೌನ ಮುರಿದ ರೇವಣ್ಣ
ಅವರಿಬ್ಬರ ಪೂರ್ಣ ಸಮ್ಮತಿಗೆ ಪ್ರತ್ಯೇಕ ಸಭೆ ನಡೆಸಲು ಸುರ್ಜೆವಾಲಗೆ ಹೈಕಮಾಂಡ್ ಸೂಚಿಸಿದೆ ಎನ್ನಲಾಗಿದೆ. ಒಟ್ಟಾರೆ ಇಬ್ಬರನ್ನು ಸಮಾಧಾನಪಡಿಸಿ ಒಟ್ಟಿಗೆ ಕರೆದೊಯ್ಯಲು ಹೈಕಮಾಂಡ್ 50-50 ಫಾರ್ಮುಲದ ಮೊರೆ ಹೋಗಿದೆ ಎನ್ನಲಾಗುತ್ತಿದೆ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k