ಬೆಂಗಳೂರು: ಎಲ್ಲ ಶಾಸಕರಿಗೂ ಸೇಫ್ ಲಾಕರ್ಸ್, ಸೇಫ್ ಡೋರ್ ಲಾಕ್ ವ್ಯವಸ್ಥೆ ಸಿಗಲಿದೆ. ವಿಧಾನಸಭೆ ಸಚಿವಾಲಯದಿಂದ ಸೇಫ್ ಲಾಕರ್ಸ್ ವ್ಯವಸ್ಥೆಗೆ ನಿರ್ಧಾರ ಕೈಗೊಳ್ಳಲಾಗಿದೆ.
ಈಗಾಗಲೇ ಆರ್ಥಿಕ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿರುವ ವಿಧಾನಸಭೆ ಸಚಿವಾಲಯ ಒಪ್ಪಿಗೆ ಸಿಕ್ಕ ಮೇಲೆ ಸೇಫ್ ಡೋರ್, ಸೇಫ್ ಲಾಕರ್ಸ್ ವ್ಯವಸ್ಥೆ ಮಾಡಿಕೊಡಲಿದೆ.
Advertisement
ಶಾಸಕರ ಭವನದಲ್ಲಿ ಒಟ್ಟಾರೆ 264 ಕೊಠಡಿಗಳಿಗೆ ಸೇಫ್ ಡೋರ್ ಲಾಕ್, ಸೇಫ್ ಲಾಕರ್ಸ್ ಸಿಸ್ಟಮ್ ಹಾಕುವ ಪ್ಲ್ಯಾನ್ ಇದೆ. ಸುಮಾರು 4.80 ಕೋಟಿ ಅಂದಾಜು ವೆಚ್ಚದಲ್ಲಿ ಸೇಫ್ ಲಾಕರ್ಸ್, ಸೇಫ್ ಡೋರ್ ಲಾಕ್, ವಾಟರ್ ಪ್ಯೂರಿಫೈಯರ್‌ಗಳ ಅಳವಡಿಕೆಗೂ ವಿಧಾನಸಭೆ ಸಚಿವಾಲಯದಿಂದ ಪ್ರಸ್ತಾಪ ಇದೆ.
Advertisement
ಆದರೆ, ಪ್ರಸ್ತಾಪ ಆರ್ಥಿಕ ಇಲಾಖೆಯ ಪರಿಶೀಲನೆಯಲ್ಲಿದ್ದು, ಗ್ರೀನ್ ಸಿಗ್ನಲ್ ಇನ್ನೂ ಸಿಕ್ಕಿಲ್ಲ. ಬಜೆಟ್ ಅಧಿವೇಶನದ ಸಂದರ್ಭದಲ್ಲಿಯೇ ಹಣಕಾಸು ಇಲಾಖೆಯಿಂದ ಒಪ್ಪಿಗೆ ಸಿಗುವ ಸಾಧ್ಯತೆ ಇದೆ.