ಬೆಂಗಳೂರು: ಹೊರಗುತ್ತಿಗೆ ನೌಕರಿಯಲ್ಲೂ ಮೀಸಲಾತಿ (Outsourcing Work) ಜಾರಿಗೆ ಚಿಂತನೆ ನಡೆಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ತಿಳಿಸಿದರು.
ಪ್ರಬುದ್ಧ ಕರ್ನಾಟಕ ಜನಮನ ಸಮಾವೇಶ ಮತ್ತು ಸಂವಾದ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಅವರಿಗೆ ಗುತ್ತಿಗೆ ನೌಕರಿಯನ್ನ ಖಾಯಂ ನೇಮಕಾತಿ ಮಾಡುವ ಬಗ್ಗೆ ಕಾಂಗ್ರೆಸ್ ಸರ್ಕಾರದ ನಿರ್ಧಾರವೇನು? ಎಂಬ ಪ್ರಶ್ನೆ ಕೇಳಲಾಯಿತು. ಅದಕ್ಕೆ ಉತ್ತರಿಸಿದ ಅವರು, ರಾಜ್ಯದಲ್ಲಿ ಸರ್ಕಾರಿ ಹುದ್ದೆ 7 ಲಕ್ಷಕ್ಕೂ ಹೆಚ್ಚಿದೆ. ಐದು ಲಕ್ಷಕ್ಕೂ ಹೆಚ್ಚು ತುಂಬಿದೆ. ಎರಡೂವರೆ ಲಕ್ಷ ಖಾಲಿ ಇದೆ. ಅದಕ್ಕಾಗಿ ಹೊರಗುತ್ತಿಗೆ ಮಾಡಲಾಗಿದೆ ಎಂದು ಹೇಳಿದರು. ಇದನ್ನೂ ಓದಿ: ಸುಧಾಕರ್ ಚಾಲೆಂಜ್ ಸ್ವೀಕರಿಸಿ ಪ್ರತಿ ಸವಾಲು ಎಸೆದ ಶಾಸಕ ಪ್ರದೀಪ್ ಈಶ್ವರ್
Advertisement
Advertisement
ಇದಕ್ಕೆ ಕಡಿವಾಣ ಹಾಕಬೇಕಿದ್ರೆ, ಖಾಲಿ ಇರೋ ಹುದ್ದೆ ತುಂಬುವುದು. ಕಾಂಟ್ರಾಕ್ಟ್ ಬೇಸಿಸ್ ತುಂಬುವಾಗ ಮೀಸಲಾತಿ ಇಲ್ಲ. ರಿಸರ್ವೇಷನ್ ಇಲ್ಲದಿದ್ರೆ, ಸಾಮಾಜಿಕ ನ್ಯಾಯ ಇರಲ್ಲ. ನಮ್ಮ ಪ್ರಣಾಳಿಕೆಯಲ್ಲಿ ಕೂಡ ಖಾಲಿ ಹುದ್ದೆ ಭರ್ತಿ ಮಾಡೋದಾಗಿ ಹೇಳಿದ್ದೇವೆ. ಹೆಚ್ಚಾಗಿ ಶಿಕ್ಷಕರು, ಪೊಲೀಸ್, ಆರೋಗ್ಯ ಇಲಾಖೆಯಲ್ಲಿ ಖಾಲಿ ಇವೆ. ಅದನ್ನ ಹಂತ ಹಂತವಾಗಿ ತುಂಬುತ್ತೇವೆ ಎಂದು ಭರವಸೆ ನೀಡಿದರು.
Advertisement
Advertisement
ಸರ್ಕಾರಿ ನೇಮಕಾತಿ ಆಗುವವರೆಗೂ ಹೊರಗುತ್ತಿಗೆಗೂ ಮೀಸಲಾತಿ ತರುವ ಚಿಂತನೆ ಇದೆ. ಕರ್ನಾಟಕದಲ್ಲಿ ಕನ್ನಡವೂ ಸೇರಿದಂತೆ ಭಾಷೆಗಳ ಉಳಿವಿಗೆ ಭಾಷಾ ನೀತಿಯನ್ನು ತರಲು ಸಾಧ್ಯವೇ ಎಂಬ ಪ್ರಶ್ನೆಗೆ ಉತ್ತರಿಸಿ, ಭಾಷಾ ನೀತಿ ಮಾಡಲು ಸಾಧ್ಯವಾಗಿಲ್ಲ. ಸಚಿವರು, ಪರಿಣಿತರು, ವಿಚಾರವಾದಿಗಳು, ಸಾಹಿತಿಗಳ ಜೊತೆ ಚರ್ಚೆ ಮಾಡಿ ಅನುಷ್ಠಾನಕ್ಕೆ ತರಲು ಚಿಂತನೆ ಮಾಡುತ್ತೇವೆ ಎಂದರು. ಇದನ್ನೂ ಓದಿ: ರಾಜ್ಯದ ಕರಾವಳಿಯಲ್ಲಿ ಮಳೆಯಬ್ಬರ- ಮೈದುಂಬಿದ ನದಿಗಳು, ಜಮೀನು ಜಲಾವೃತ
ನೈತಿಕ ಪೊಲೀಸ್‌ಗಿರಿ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರ ನೀಡಿದ ಅವರು, ಶಾಂತಿಯ ತೋಟವಾಗಬೇಕು ಅಂದ್ರೆ ಸಮ ಸಮಾಜ ಸೃಷ್ಟಿಯಾಗಬೇಕು. ಕಾನೂನು ಕೈಗೆತ್ತಿಕೊಳ್ಳಬಾರದು. ಹಿಂದಿನ ಸರ್ಕಾರದ ಅವಧಿಯಲ್ಲಿ ನೈತಿಕ ಪೊಲೀಸ್ ಗಿರಿ ನಡೆದಿತ್ತು. ಅದು ನೈತಿಕ ಪೊಲೀಸ್‌ಗಿರಿ ಅಲ್ಲ, ಅನೈತಿಕ ಪೋಲಿಸ್ ಗಿರಿ ಎಂದು ಗುಡುಗಿದರು.
ನಾನು ಈಗಾಗಲೇ ಈ ವಿಚಾರದಲ್ಲಿ ಅದನ್ನು ಸ್ಪಷ್ಟ ಪಡಿಸಿದ್ದೇನೆ. ನೈತಿಕ ಪೋಲಿಸ್‌ಗಿರಿಗೆ ಕಠಿಣ ಕ್ರಮ ಕೈಗೊಳ್ಳುತ್ತೇವೆ. ಬಜೆಟ್‌ನಲ್ಲೂ ಇದೇ ಮಾತು ಹೇಳಿದ್ದೇವೆ. ಕುವೆಂಪು ಹೇಳಿದ ಸರ್ವ ಜನಾಂಗದ ಶಾಂತಿಯ ತೋಟ ಸೃಷ್ಟಿಸಲು ಪ್ರಯತ್ನಿಸುತ್ತೇವೆ ಎಂದು ತಿಳಿಸಿದರು.
Web Stories