ಬೆಂಗಳೂರು: ಮದರಸಾಗಳಲ್ಲಿ ನೀಡುತ್ತಿರೋ ಶಿಕ್ಷಣದ ಬಗ್ಗೆ ಮೊದಲಿಂದಲೂ ಹತ್ತು ಹಲವು ಆರೋಪ ಕೇಳಿಬರುತ್ತಿವೆ. ಹೀಗಾಗಿಯೇ ಶಿಕ್ಷಣ ಇಲಾಖೆ ಮದರಸಾಗಳಲ್ಲಿನ ಶೈಕ್ಷಣಿಕ ಚಟುವಟಿಕೆ ಮೇಲೆ ನಿಗಾವಹಿಸಲು ವಿಶೇಷ ಮಂಡಳಿ ರಚನೆಗೆ ಮುಂದಾಗಿದೆ. ಈ ಸಂಬಂಧ ಸಚಿವ ಬಿ.ಸಿ ನಾಗೇಶ್ ನೇತೃತ್ವದಲ್ಲಿ ಇಂದು ಸಭೆ ನಡೆಸಲಾಗಿದೆ.
Advertisement
ಮದರಸಾಗಳಲ್ಲಿ ಏನು ಹೇಳಿ ಕೊಡುತ್ತಿದ್ದಾರೆ. ಶಿಕ್ಷಣ ಇಲಾಖೆ ಕಾಯ್ದೆ ಪ್ರಕಾರ ಶಿಕ್ಷಣ ಸಿಗ್ತಿದ್ಯಾ? ಇಲ್ವಾ..? ಎಂಬ ಬಗ್ಗೆ ಸ್ಪಷ್ಟವಾದ ಮಾಹಿತಿ ಸಂಗ್ರಹಿಸಲು ಅಧಿಕಾರಿಗಳಿಗೆ ಶಿಕ್ಷಣ ಮಂತ್ರಿ ಆದೇಶ ನೀಡಿದ್ದಾರೆ. ಮುಂದಿನ 15 ದಿನದಲ್ಲಿ ಈ ಬಗ್ಗೆ ವರದಿ ಸಲ್ಲಿಸಲು ಅಧಿಕಾರಿಗಳಿಗೆ ಬಿಸಿ ನಾಗೇಶ್ ಸೂಚಿಸಿದ್ದಾರೆ. ಇದನ್ನೂ ಓದಿ: ತಾಕತ್ತಿದ್ರೆ ಅಂಬಾರಿ ದಿನ ಸಿದ್ದರಾಮಯ್ಯ ನಾನ್‍ವೆಜ್ ತಿಂದ ವೀಡಿಯೋ ಇದ್ರೆ ರಿಲೀಸ್ ಮಾಡು: ಸೀತಾರಾಂ ಸವಾಲ್
Advertisement
Advertisement
ಅಲ್ಲದೇ ಇದು ವಿವಾದಕ್ಕೆ ಕಾರಣವಾಗಬಾರದು ಎಂಬ ದೃಷ್ಟಿಯಿಂದ ಶಿಕ್ಷಣ ತಜ್ಞರು, ಮದರಸಾ ನಡೆಸುತ್ತಿರುವವರ ಜೊತೆ ಸಭೆ ನಡೆಸಿ ಮುಂದಿನ ಕ್ರಮ ತೆಗೆದುಕೊಳ್ಳಲು ಶಿಕ್ಷಣ ಮಂತ್ರಿ ಪ್ಲಾನ್ ಮಾಡಿದ್ದಾರೆ. ಸರ್ಕಾರದ ಈ ಪ್ರಯತ್ನವನ್ನು ಶ್ರೀರಾಮಸೇನೆಯ ಪ್ರಮೋದ್ ಮುತಾಲಿಕ್ ಸ್ವಾಗತಿಸಿದ್ದಾರೆ. ಮದರಸಾಗಳನ್ನು ಬ್ಯಾನ್ ಮಾಡಿದ್ರೇ ಇನ್ನೂ ಉತ್ತಮ ಎಂದಿದ್ದಾರೆ
Advertisement
ಮದರಸಾ ಮಂಡಳಿ ರಚನೆ ಕಸರತ್ತು ಏಕೆ?: ಮದರಸಾಗಳಲ್ಲಿ ಅನುದಾನದ ಅಸಮರ್ಪಕ ಬಳಕೆ. ಮದರಸಾಗಳಲ್ಲಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಸಿಗ್ತಿಲ್ಲ. ಮದರಸಾಗಳಲ್ಲಿ ಶಿಕ್ಷಣದ ಬದಲು ಧರ್ಮ ಬೋಧನೆ. ಮದರಸಾಗಳಲ್ಲಿ ರಾಷ್ಟ್ರಗೀತೆ ಹಾಡಲ್ಲ. ನೈತಿಕತೆ, ಭಾವೈಕ್ಯತೆ ಮೂಡಿಸುವ ಕಾರ್ಯಕ್ರಮಗಳು ನಡೆಯುತ್ತಿಲ್ಲ ಎಂಬ ಆರೋಪಗಳು ಕೇಳಿಬಂದಿದೆ.