ನವದೆಹಲಿ: ರಾಷ್ಟ್ರವ್ಯಾಪಿ ವಿಚಾರಣಾ ನ್ಯಾಯಾಲಯಗಳಲ್ಲಿ ಅಸ್ತಿತ್ವದಲ್ಲಿರುವ ಧಾರ್ಮಿಕ ರಚನೆಗಳ (Worship Act) ಬಗ್ಗೆ ಯಾವುದೇ ಆದೇಶಗಳನ್ನು ನೀಡದಂತೆ ಅಥವಾ ಅವುಗಳ ಧಾರ್ಮಿಕ ಸ್ವರೂಪವನ್ನು ಪ್ರಶ್ನಿಸುವ ಪ್ರಕರಣಗಳಲ್ಲಿ ಸಮೀಕ್ಷೆಗಳನ್ನು ನಡೆಸಲು ಸೂಚನೆ ನೀಡದಂತೆ ಸುಪ್ರೀಂ ಕೋರ್ಟ್ (Supreme Court) ನಿರ್ದೇಶನ ನೀಡಿದೆ.
ಪೂಜಾ ಸ್ಥಳಗಳ (ವಿಶೇಷ ನಿಬಂಧನೆಗಳು) ಕಾಯಿದೆ 1991ರ ಸಾಂವಿಧಾನಿಕತೆಯನ್ನು ಪ್ರಶ್ನಿಸುವ ಅರ್ಜಿಗಳ ಒಂದು ಗುಂಪಿನ ವಿಚಾರಣೆಯ ಸಂದರ್ಭದಲ್ಲಿ, ಕಾಯಿದೆಯನ್ನು ಪ್ರಶ್ನಿಸುವ ಅರ್ಜಿಗಳನ್ನು ಆಲಿಸಿ ಮತ್ತು ಪರಿಹರಿಸುವವರೆಗೆ ಧಾರ್ಮಿಕ ಸ್ವರೂಪದ ಬಗ್ಗೆ ಯಾವುದೇ ಹೊಸ ದಾವೆಗಳನ್ನು ದಾಖಲಿಸಲಾಗುವುದಿಲ್ಲ ಎಂದು ನ್ಯಾಯಾಲಯ ಹೇಳಿದೆ. ಇದನ್ನೂ ಓದಿ: ಡಿಜಿಟಲ್ ಫ್ರಾಡ್, ಅರೆಸ್ಟ್ ಬಗ್ಗೆ ಜಾಗೃತಿ ಮೂಡಿಸಲು ಕ್ರಮ: ಪರಮೇಶ್ವರ್
Advertisement
ಪ್ರಕರಣವನ್ನು ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ಮತ್ತು ನ್ಯಾ.ಪಿವಿ ಸಂಜಯ್ ಕುಮಾರ್ ಮತ್ತು ಕೆವಿ ವಿಶ್ವನಾಥನ್ ಅವರನ್ನೊಳಗೊಂಡ ಪೀಠವು ವಿಚಾರಣೆ ನಡೆಸುತ್ತಿದೆ. ಈ ವಿಷಯವು ನ್ಯಾಯಾಲಯದ ಅಧೀನವಾಗಿರುವುದರಿಂದ ಯಾವುದೇ ಹೊಸ ಮೊಕದ್ದಮೆಗಳನ್ನು ನೋಂದಾಯಿಸಬಾರದು ಅಥವಾ ವಿಚಾರಣೆಗೆ ಆದೇಶಿಸಬಾರದು ಎಂದು ನಿರ್ದೇಶಿಸಲು ನಾವು ಸೂಕ್ತವೆಂದು ಪರಿಗಣಿಸುತ್ತೇವೆ. ಮುಂದುವರಿದು ಬಾಕಿ ಉಳಿದಿರುವ ಸೂಟ್‌ಗಳಲ್ಲಿ ನ್ಯಾಯಾಲಯಗಳು ಯಾವುದೇ ಪರಿಣಾಮಕಾರಿ ಆದೇಶ ಅಥವಾ ಅಂತಿಮ ಆದೇಶಗಳನ್ನು ನೀಡುವುದಿಲ್ಲ ಎಂದು ಪೀಠ ಹೇಳಿದೆ. ಇದನ್ನೂ ಓದಿ: ಉಗ್ರ ಸಂಘಟನೆಗೆ ನೇಮಕಾತಿ ಕೇಸ್ | 5 ರಾಜ್ಯಗಳ 19 ಸ್ಥಳಗಳಲ್ಲಿ ಎನ್‌ಐಎ ಶೋಧ -ಮೂವರು ಅರೆಸ್ಟ್
Advertisement
Advertisement
ವಿಚಾರಣೆ ವೇಳೆ ಕೇಂದ್ರವು ತನ್ನ ಪ್ರತಿ-ಅಫಿಡವಿಟ್ ಇನ್ನೂ ಸಲ್ಲಿಸಿಲ್ಲ ಎಂದು ಮು.ನ್ಯಾ.ಸಂಜೀವ್ ಖನ್ನಾ (Sanjiv Khanna) ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, 1991ರ ಕಾನೂನನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗಳಿಗೆ ಪ್ರತಿಕ್ರಿಯಿಸಲು ಸಮಯಾವಕಾಶ ಬೇಕು ಎಂದು ಹೇಳಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಕೋರ್ಟ್ ನಾಲ್ಕು ವಾರಗಳಲ್ಲಿ ಪ್ರತಿ-ಅಫಿಡವಿಟ್ ಸಲ್ಲಿಸುವಂತೆ ಕೇಂದ್ರಕ್ಕೆ ಆದೇಶಿಸಿತು. ಇದನ್ನೂ ಓದಿ: ರೈತ ಆತ್ಮಹತ್ಯೆ ಕೇಸ್ ಟ್ವೀಟ್ ವಿವಾದ; ಸಂಸದ ತೇಜಸ್ವಿ ಸೂರ್ಯ ವಿರುದ್ಧದ ಪ್ರಕರಣ ರದ್ದು
Advertisement