ಮುಂಬೈ: ಮಾರ್ಚ್ 26 ರಂದು ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ನಡುವೆ ಮೊದಲ ಐಪಿಎಲ್ ಪಂದ್ಯ ನಡೆಯಲಿದೆ. ಆದರೆ ವಿದೇಶ 26 ಆಟಗಾರರು ಪಂದ್ಯಾವಳಿಯ ಮೊದಲ ವಾರದಲ್ಲಿ ಲಭ್ಯವಿರುವುದಿಲ್ಲ ಎಂದು ಬಿಸಿಸಿಐ ತಿಳಿಸಿದೆ.
ಕೆಲವು ವೈಯಕ್ತಿಕ ಮತ್ತು ರಾಷ್ಟ್ರೀಯ ತಂಡದ ಬದ್ಧತೆಗಳ ಕಾರಣದಿಂದ ಐಪಿಎಲ್ 2022ರ ಮೊದಲ ವಾರದಲ್ಲಿ ಆಸ್ಟ್ರೇಲಿಯಾದ ಗ್ಲೆನ್ ಮ್ಯಾಕ್ಸ್‌ವೆಲ್ ಮತ್ತು ಡೇವಿಡ್ ವಾರ್ನರ್, ದಕ್ಷಿಣ ಆಫ್ರಿಕಾದ ಕಗಿಸೊ ರಬಾಡ ಮತ್ತು ಕ್ವಿಂಟನ್ ಡಿ ಕಾಕ್ ಅವರಂತಹ ಟಾಪ್ ಕ್ರಿಕೆಟಿಗರು ಲಭ್ಯವಿರುವುದಿಲ್ಲ.
Advertisement
Advertisement
ವೆಸ್ಟ್ ಇಂಡೀಸ್ ವಿರುದ್ಧ ಇಂಗ್ಲೆಂಡ್
ಇಂಗ್ಲೆಂಡ್ ಪ್ರಸ್ತುತ ವೆಸ್ಟ್ ಇಂಡೀಸ್ ವಿರುದ್ಧ ಟೆಸ್ಟ್ ಸರಣಿ ಆಡುತ್ತಿದೆ. ಸರಣಿಯ ಕೊನೆಯ ಪಂದ್ಯ ಮಾರ್ಚ್ 28 ರಂದು ನಡೆಯಲಿದೆ. ಇದನ್ನೂ ಓದಿ: ಅಮೆರಿಕ ಮಾಜಿ ಅಧ್ಯಕ್ಷ ಬರಾಕ್ ಒಬಾಮಾಗೆ ಕೊರೊನಾ
Advertisement
ಪಾಕಿಸ್ತಾನ ವಿರುದ್ಧ ಆಸ್ಟ್ರೇಲಿಯಾ
ಆಸ್ಟ್ರೇಲಿಯಾ ತಂಡವು ಪ್ರಸ್ತುತ ಟೆಸ್ಟ್ ಸರಣಿಯನ್ನು ಆಡುತ್ತಿದೆ. ಅದರ ನಂತರ ಮೂರು ಏಕದಿನ ಪಂದ್ಯಗಳು ಮತ್ತು ಒಂದು ಟಿ-20 ಪಂದ್ಯವನ್ನು ಆಡಬೇಕಿದೆ. ಟೆಸ್ಟ್ ಸರಣಿಯು ಮಾರ್ಚ್ 25 ರಂದು ಕೊನೆಗೊಳ್ಳಲಿದ್ದು, ಪ್ರವಾಸವು ಏಪ್ರಿಲ್ 5 ರಂದು ಮುಕ್ತಾಯಗೊಳ್ಳಲಿದೆ.
Advertisement
ದಕ್ಷಿಣ ಆಫ್ರಿಕಾ ವಿರುದ್ಧ ಬಾಂಗ್ಲಾದೇಶ
ದಕ್ಷಿಣ ಆಫ್ರಿಕಾ ತಂಡವು ಬಾಂಗ್ಲಾದೇಶ ವಿರುದ್ಧ ಮೂರು ಏಕದಿನ ಮತ್ತು ಎರಡು ಟೆಸ್ಟ್ ಪಂದ್ಯಗಳನ್ನು ಆಡಲಿದೆ. ಈ ಏಕದಿನ ಸರಣಿಯು ಮಾರ್ಚ್ 23 ರಂದು ಕೊನೆಗೊಳ್ಳಲಿದ್ದು, ಟೆಸ್ಟ್ ಸರಣಿಯು ಏಪ್ರಿಲ್ 12 ರಂದು ಕೊನೆಗೊಳ್ಳಲಿದೆ.
A sight you love to see: @Gmaxi_32 hitting sixes into the car park!
Glenn Maxwell’s club, @fitzdonc, recently received funding via the Australian Cricket Infrastructure Fund (ACIF). Here’s how it’ll be put to use! pic.twitter.com/BN0sGvS9L5
— Cricket Australia (@CricketAus) March 10, 2022
ಅಲಭ್ಯವಾಗುವ ಆಟಗಾರರು:
ಡ್ವೈನ್ ಪ್ರಿಟೋರಿಯಸ್, ಜೋಫ್ರಾ ಆರ್ಚರ್, ಪ್ಯಾಟ್ ಕಮ್ಮಿನ್ಸ್, ಆರನ್ ಫಿಂಚ್, ರಾಸ್ಸಿ ವ್ಯಾನ್ ಡೆರ್ ಡಸ್ಸೆನ್, ಮಾರ್ಕೊ ಜಾನ್ಸೆನ್, ಸೀನ್ ಅಬಾಟ್, ಐಡೆನ್ ಮಾಕ್ರ್ರಾಮ್, ಡೇವಿಡ್ ವಾರ್ನರ್, ಮಿಚೆಲ್ ಮಾರ್ಷ್, ಅನ್ರಿಚ್ ನಾಟ್ರ್ಜೆ (ಗಾಯ), ಮುಸ್ತಫಿಜುರ್ ರೆಹಮಾನ್, ಲುಂಗಿ ಮಲೆನ್‍ಗಿಡಿವೆಲ್, ಜಿಸನ್ ಬೆನೆರ್ಂಡ್‍ವೆಲ್ ಜೋಶ್ ಹ್ಯಾಜಲ್‍ವುಡ್, ಜಾನಿ ಬೈರ್‍ಸ್ಟೋವ್, ಕಗಿಸೊ ರಬಾಡ, ನಾಥನ್ ಎಲ್ಲಿಸ್, ಮಾರ್ಕಸ್ ಸ್ಟೊಯಿನಿಸ್, ಜೇಸನ್ ಹೋಲ್ಡರ್, ಕೈಲ್ ಮೇಯರ್ಸ್, ಮಾರ್ಕ್ ವುಡ್, ಕ್ವಿಂಟನ್ ಡಿ ಕಾಕ್, ಡೇವಿಡ್ ಮಿಲ್ಲರ್, ಅಲ್ಜಾರಿ ಜೋಸೆಫ್. ಇದನ್ನೂ ಓದಿ: ರಣಜಿ ಟ್ರೋಫಿ- ನೂತನ ದಾಖಲೆ ಸೃಷ್ಟಿಸಿದ ಜಾರ್ಖಂಡ್
ಇದರ ಮಧ್ಯೆ ಗುಜರಾತ್ ಟೈಟಾನ್ಸ್ ತಂಡವು ಭಾನುವಾರ ಅಹಮದಾಬಾದ್‍ನ ನರೇಂದ್ರ ಮೋದಿ ಕ್ರಿಕೆಟ್ ಸ್ಟೇಡಿಯಂನಲ್ಲಿ ತಮ್ಮ ತಂಡದ ಜೆರ್ಸಿಯನ್ನು ಅನಾವರಣಗೊಳಿಸಿತು. ತಂಡದ ನಾಯಕ ಹಾರ್ದಿಕ್ ಪಾಂಡ್ಯ, ಮುಖ್ಯ ಕೋಚ್ ಆಶಿಶ್ ನೆಹ್ರಾ, ಕ್ರಿಕೆಟ್ ನಿರ್ದೇಶಕ ವಿಕ್ರಮ್ ಸೋಲಂಕಿ ಮತ್ತು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಮತ್ತು ಇತರ ತಂಡದ ಸಮ್ಮುಖದಲ್ಲಿ ಅನಾವರಣಗೊಳಿಸಿತು.