ರಿಯೋ ಡಿ ಜನೈರೋ: ಬೆಲೆ ಏರಿಕೆ ಖಂಡಿಸಿ ರೈತರು ತರಕಾರಿ, ಹಾಲು ಗಳನ್ನು ರಸ್ತೆಗೆ ಚೆಲ್ಲುವುದರ ಮೂಲಕ ಸರ್ಕಾರಗಳ ವಿರುದ್ಧ ಪ್ರತಿಭಟನೆ ನಡೆಸುವುದು ನಮ್ಮಲ್ಲಿ ಸಾಮಾನ್ಯ. ಆದರೆ ದೂರದ ಬ್ರೆಜಿಲ್ ನಲ್ಲಿ ಪಿಜ್ಜಾ ವಿತರಿಸಲು ಯುವಕನೊಬ್ಬ ಕುದುರೆ ಏರಿ ಬಂದ ವಿಶೇಷ ರೀತಿಯಲ್ಲಿ ಪ್ರತಿಭಟನೆ ನಡೆಸಿ ವಿಶ್ವದೆಲ್ಲೆಡೆ ಸುದ್ದಿಯಾಗಿದ್ದಾನೆ.
ಪಿಜ್ಜಾ ಬಾಯ್ ಕುದುರೆ ಏರಿ ಬಂದಿರುವ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಈಗ ವೈರಲ್ ಆಗಿದೆ. ಇದನ್ನೂ ಓದಿ: ಹಾಲು, ತರಕಾರಿ ರಸ್ತೆಗೆ ಸುರಿದು ಪ್ರತಿಭಟನೆ ಪ್ರಾರಂಭಿಸಿದ ರೈತರು
Advertisement
Advertisement
ಬ್ರೆಜಿಲ್‍ನಲ್ಲಿ ಈಗ ಇಂಧನ ಬೆಲೆ ಏರಿಕೆ ಖಂಡಿಸಿ ಪ್ರತಿಭಟನೆಗಳು ನಡೆಯುತ್ತಿವೆ. ಬ್ರೆಜಿಲ್ ತೈಲ ಕಂಪೆನಿಯ ಸಿಇಓ ಪೆಡ್ರೂ ಎಂಬವರ ರಾಜೀನಾಮೆಗೆ ಆಗ್ರಹಿಸಿ ಪ್ರತಿಭಟನೆಗಳು ಆರಂಭವಾಗಿವೆ. ಈ ಎಲ್ಲದರ ನಡುವೆ ಬ್ರೆಜಿಲ್ ಪೆಟ್ರೋಲ್ ಮತ್ತು ಡಿಸೇಲ್ ಸಹ ಸರಿಯಾದ ಸಮಯಕ್ಕೆ ಸಿಗುತ್ತಿಲ್ಲ ಎಂದು ಎನ್ನುವ ಆರೋಪ ಕೇಳಿ ಬಂದಿದೆ.
Advertisement
ಪೆಟ್ರೋಲ್ ಬೆಲೆ ಏರಿಕೆ ಖಂಡಿಸಿ ಪಿಜ್ಜಾ ಬಾಯ್ ಕುದುರೆ ಬಳಸಿ ಆಕ್ರೋಶವನ್ನು ಹೊರ ಹಾಕಿದ್ದಾರೆ. ಕುದುರೆ ಏರಿ ಬಂದು ಮನೆಯೊಂದಕ್ಕೆ ಬಂದಿದ್ದ ಪಿಜ್ಜಾ ಬಾಯ್ ಫೋಟೋವನ್ನು ಸ್ಥಳೀಯರು ಮೊಬೈಲ್ ಗಳಲ್ಲಿ ಸೆರೆಹಿಡಿದು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿಕೊಂಡಿದ್ದಾರೆ.
Advertisement