– ಮಾಂಸ ಮಾರಾಟಕ್ಕೆ ಅವಕಾಶ ಕೋರಿ ಸಿಎಂಗೆ ಸಂಘಟನೆಗಳ ಮನವಿ
ಬೆಂಗಳೂರು: ಈ ಬಾರಿ ಪಿತೃಪಕ್ಷ (Pitrupaksha) ಮಾಡಿ ಎಡೆ ಇಡುವವರಿಗೆ ಧರ್ಮ ಸಂಕಟ ಎದುರಾಗಿದೆ. ಗಾಂಧಿ ಜಯಂತಿ (Gandhi Jayanthi) ಮತ್ತು ಮಹಾಲಯ ಅಮಾವಾಸ್ಯೆ (Mahalaya Amavasya) ಒಂದೇ ದಿನ ಬಂದಿದೆ. ಗಾಂಧಿಜಯಂತಿ ದಿನ ಮಾಂಸ ಮಾರಾಟ (Meat Sale) ನಿಷೇಧ ಇರಲಿದೆ. ಹೀಗಾಗಿ ಮಹಾಲಯ ಅಮಾವಾಸ್ಯೆ ಇರುವುದರಿಂದ ಪಿತೃಪಕ್ಷ ಮಾಡೋರಿಗೆ ಮಾಂಸದ ಕೊರತೆ ಎದುರಾಗಲಿದೆ.
Advertisement
Advertisement
ಮಾಂಸ ಮಾರಾಟ ನಿಷೇಧ ಮಾಡಿದರೆ ಮಾಂಸ ಸಿಗಲ್ಲ. ಅದಕ್ಕಾಗಿ ಗಾಂಧಿ ಜಯಂತಿ ದಿನ ಮಾಂಸ ಮಾರಾಟಕ್ಕೆ ಅವಕಾಶ ಕೊಡಬೇಕು ಎಂದು ಸಿಎಂ ಸಿದ್ದರಾಮಯ್ಯ ಅವರಿಗೆ ಸಂಘಟನೆಗಳು, ಸಮಿತಿಗಳು ಮನವಿ ಮಾಡಿಕೊಂಡಿದೆ. ಈ ಸಂಬಂಧ ಬಿಬಿಎಂಪಿಯ ಮಾಜಿ ಕಾರ್ಪೊರೇಟರ್ ವಿ.ವಿ ಸತ್ಯನಾರಾಯಣ ಹಾಗೂ ಜಯಪ್ರಕಾಶ್ ನಾರಾಯಣ್ ವಿಚಾರ ವೇದಿಕಯ ಅಧ್ಯಕ್ಷ ಬಿ.ಎಂ ಶಿವಕುಮಾರ್ ಅವರು ಸಿಎಂಗೆ ಪತ್ರ ಬರೆದಿದ್ದಾರೆ. ಕಾಕತಾಳಿಯವಾಗಿ ಒಂದೇ ದಿನ ಎರಡು ಆಚರಣೆ ಬಂದಿರುವುದರಿಂದ ಸಾರ್ವಜನಿಕರಿಗೆ ಸಮಸ್ಯೆ ಆಗದಂತೆ ಪಿತೃಪಕ್ಷ ಆಚರಿಸಲು ಅವಕಾಶ ಮಾಡಿಕೊಡಬೇಕು ಎಂದು ಮನವಿ ಪತ್ರ ಸಲ್ಲಿಸಲಾಗಿದೆ. ಇದನ್ನೂ ಓದಿ: ದೆಹಲಿಯಲ್ಲಿ ಪಟಾಕಿ ಬ್ಯಾನ್ ಯಾಕೆ?
Advertisement
Advertisement
ಹಳ್ಳಿಗಳ ಕಡೆ ಏನಾಗಲಿದೆಯೋ ಗೊತ್ತಿಲ್ಲ. ಹಲವು ಮಂದಿ ಮಾಂಸಾಹಾರವನ್ನು ಸಿದ್ಧಪಡಿಸಿ ತಮ್ಮ ಹಿರಿಯರಿಗೆ ಎಡೆ ಇಟ್ಟು ಪೂಜೆ ಸಲ್ಲಿಸುತ್ತಾರೆ. ಈ ಹಿನ್ನೆಲೆ ಬೆಂಗಳೂರಿನಂತಹ ಸಿಟಿಗಳಲ್ಲಿ ಮಾಂಸ ಮಾರಾಟ ನಿಷೇಧ ಆದರೆ ಸಮಸ್ಯೆ ಆಗುತ್ತೆ. ತಲಾತಲಾಂತರದಿಂದ ಪಿತೃಪಕ್ಷದ ದಿನ ಎಡೆ ಇಟ್ಟುಕೊಂಡು ಬರುತ್ತಿದ್ದೇವೆ. ಈ ಬಾರಿಯು ಸಂಪ್ರದಾಯ ಪಾಲಿಸಬೇಕು. ಮಾಂಸ ಮಾರಾಟಕ್ಕೆ ಅವಕಾಶ ಕೊಡಿ ಎಂದು ಮನವಿ ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಇದನ್ನೂ ಓದಿ: ಅಕ್ರಮ ಮದ್ಯ ನಾಶದ ವೇಳೆ ಬಾಟಲಿ ದೋಚಿ ಓಡಿದ್ರು!