ಎಲ್ಲೆಡೆಯಿಂದಲೂ ಕುತೂಹಲ ಮೂಡಿಸಿರುವ ‘ಪಿಂಕಿ ಎಲ್ಲಿ’ (Pinki Elli) ಚಿತ್ರ ಈ ವಾರ ಅಂದರೆ, ಜೂನ್ 2ರಂದು ರಾಜ್ಯಾದ್ಯಂತ ತೆರೆ ಕಾಣುತ್ತಿದೆ. ಸಿನಿಮೋತ್ಸವಗಳಲ್ಲಿ ಪ್ರದರ್ಶನಗೊಂಡು ಪ್ರಶಸ್ತಿ ಪಡೆದುಕೊಂಡ ಸಿನಿಮಾಗಳು ಸಾಮಾನ್ಯ ಪ್ರೇಕ್ಷಕರಿಗೆ ತಲುಪುವುದಿಲ್ಲ ಅಂತೊಂದು ಅಪವಾದವಿತ್ತು. ಅದನ್ನು ಒಡೆಯುವಂತೆ ಇದೀಗ ‘ಪಿಂಕಿ ಎಲ್ಲಿ’ ಚಿತ್ರಮಂದಿರಗಳಲ್ಲಿ ಬಿಡುಗಡೆಗೊಳ್ಳಲು ತಯಾರಾಗಿದೆ. ಇದೆಲ್ಲದರ ಹಿಂದಿರುವ ಶಕ್ತಿಯಂಥವರು ನಿರ್ದೇಶಕ ಪೃಥ್ವಿ ಕೋಣನೂರು.
Advertisement
ಈ ಹಿಂದೆ ‘ರೈಲ್ವೆ ಚಿಲ್ಡ್ರನ್ಸ್’ ಎಂಬ ಚಿತ್ರದ ಮೂಲಕ ವ್ಯಾಪಕವಾಗಿ ಹೆಸರು ಗಳಿಸಿಕೊಂಡಿದ್ದ ಪೃಥ್ವಿ, ಪಿಂಕಿ ಎಲ್ಲಿಚಿತ್ರದ ಮೂಲಕ ತಮ್ಮದು ಭಿನ್ನ ಪಥವೆಂಬುದನ್ನು ಸಾಬೀತುಗೊಳಿಸಿದ್ದಾರೆ. ಈಗಾಗಲೇ ‘ಪಿಂಕಿ ಎಲ್ಲಿ’ಯ ಒಂದಷ್ಟು ಝಲಕ್ಕುಗಳು ಹೊರ ಬಂದಿವೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರದರ್ಶನಗೊಂಡಿರುವ ಈ ಚಿತ್ರ ಒಂದಷ್ಟು ಪ್ರಶಸ್ತಿಗಳನ್ನೂ ಬಾಚಿಕೊಂಡಿದೆ. ಇದೆಲ್ಲವನ್ನೂ ನೋಡುತ್ತಿದ್ದರೆ, ಇಂಥಾದ್ದೊಂದು ಕಥೆ ಹುಟ್ಟಿಕೊಂಡಿರೋದು ಹೇಗೆಂಬ ಪ್ರಶ್ನೆ ಸಹಜವಾಗಿಯೇ ಮೂಡಿಕೊಳ್ಳುತ್ತೆ. ಅದರ ಬಗ್ಗೆ ಪೃಥ್ವಿ (Pruthvi) ಒಂದಷ್ಟು ಅಚ್ಚರಿಯ ಅಂಶಗಳನ್ನು ತೆರೆದಿಟ್ಟಿದ್ದಾರೆ.
Advertisement
Advertisement
ಸದಾ ಭಿನ್ನ ಕಥಾನಕಗಳ ಧ್ಯಾನದಲ್ಲಿರುವ ಪೃಥಿ ಅವರೊಳಗೆ ಈ ಕಥೆ ಮೂಡಿಕೊಂಡಿದ್ದದ್ದು ವರ್ಷಾಂತರಗಳ ಹಿಂದೆ. 2007-08ನೇ ಸಾಲಿನಲ್ಲಿ ಒಂದು ಘಟನೆ ಮಾಧ್ಯಮಗಳಲ್ಲಿಯೂ ಸದ್ದು ಮಾಡಿತ್ತು. ಅದರ ಬಗ್ಗೆ ಕೇಳಿ ಜನಸಾಮಾನ್ಯರೂ ಬೆಚ್ಚಿಬಿದ್ದಿದ್ದರು. ಆ ಎಳೆಯಿಟ್ಟುಕೊಂಡೇ ಭಿನ್ನ ಕಥೆಯೊಂದನ್ನು ಸಹಜವಾಗಿ ಸಿದ್ಧಪಡಿಸಲು ಪೃಥ್ವಿ ಮುಂದಾಗಿದ್ದರು. ಆದರೆ ಅದೇನು ಸಲೀಸಿನ ವಿಚಾರವಾಗಿರಲಿಲ್ಲ. ಅದಕ್ಕಾಗಿ ಈ ವ್ಯವಸ್ಥೆಯ ಒಳ ಹೊಕ್ಕು, ರಿಸರ್ಚುಗಳನ್ನು ನಡೆಸಬೇಕಾಗಿತ್ತು. ಅದೆಲ್ಲವನ್ನ ವರ್ಷಗಳ ಕಾಲ ಮಾಡಿದ ಪೃಥ್ವಿ ಕಡೆಗೂ ಕಥೆ ಚಿತ್ರಕಥೆಯೆಲ್ಲವನ್ನೂ ಮುಗಿಸಿಕೊಂಡು ರೆಡಿಯಾಗಿದ್ದರು. ಆಗ ಎದುರಾದ ಪ್ರಶ್ನೆಯೇ ನಿರ್ಮಾಪಕರು ಯಾರು ಎಂದು. ಈ ಬಗ್ಗೆ ಕೃಷ್ಣೇಗೌಡರ ಬಳಿ ಚರ್ಚಿಸಿದಾಗ ಅವರು ಬೇರೇನೂ ಯೋಚಿಸದೆ ತಾವು ಹಣ ಹೂಡುವುದಾಗಿ ಒಪ್ಪಿಕೊಂಡಿದ್ದರಂತೆ. ಆ ನಂತರ ಯಾವುದರಲ್ಲಿಯೂ ಹಸ್ತಕ್ಷೇಪ ಮಾಡದೆ, ಸಿನಿಮಾ ಮೂಡಿ ಬರಲು ಸಹಕರಿಸಿದರು. ಇದನ್ನೂ ಓದಿ:ಮಕ್ಕಳಿಗೆ ಗುಲಾಬಿ ಹೂ, ಚಾಕ್ಲೇಟ್ ನೀಡಿ ಸ್ವಾಗತಿಸಿದ ಡಾಲಿ
Advertisement
ಈ ಚಿತ್ರಕ್ಕೆ ಗ್ರಾಮೀಣ ಭಾಗದ ಪ್ರತಿಭೆಗಳನ್ನು ಹುಡುಕಿ ಅವರಿಗೆ ನಟನೆ ಕಲಿಸಿದ್ದೂ ಒಂದು ಸಾಹಸ. ಗುಂಜಾಲಮ್ಮ, ಸಂಗಮ್ಮ, ಅನಸೂಯ ಮುಂತಾದ ಮಹಿಳೆಯರು ಈ ಚಿತ್ರದಲ್ಲಿ ಮನೋಜ್ಞವಾಗಿ ನಟಿಸಿದ್ದಾರೆ. ‘ಬಿಗ್ ಬಾಸ್’ (Bigg Boss Kannada) ಖ್ಯಾತಿಯ ಅಕ್ಷತಾ ಪಾಂಡವಪುರ (Akshatha Pandavapura) ಕೂಡಾ ಅಷ್ಟೇ ತೀವ್ರವಾದ ಪಾತ್ರಕ್ಕೆ ಜೀವ ತುಂಬಿದ್ದಾರೆ. ಹೀಗೆ ‘ಪಿಂಕಿ ಎಲ್ಲಿ’ ಮೂಲಕ ಸುದ್ದಿಯಲ್ಲಿರುವ ಪೃಥ್ವಿ ಮೂಲತಃ ಐಟಿ ವಲಯದವರು. ಸಿನಿಮಾದಲ್ಲೇನಾದರೂ ಸಾಧಿಸಬೇಕೆಂಬ ಹಂಬಲದೊಂದಿಗೆ ಬಂದ ಅವರು ಪದೇ ಪದೆ ಭಿನ್ನ ಪ್ರಯತ್ನಗಳ ಮೂಲಕ ಹೆಸರಾಗುತ್ತಿದ್ದಾರೆ. ‘ಪಿಂಕಿ ಎಲ್ಲಿ’ ಚಿತ್ರವಂತೂ ಅವರಿಗೆ ಮತ್ತಷ್ಟು ಹೆಸರು ತಂದು ಕೊಟ್ಟಿದೆ.