ಕೋಲ್ಕತ್ತಾ: ಮೊದಲ ಪಿಂಕ್ ಬಾಲ್ ಟೆಸ್ಟ್ ಪಂದ್ಯವನ್ನು ಒಂದು ಇನ್ನಿಂಗ್ಸ್ ಮತ್ತು 46 ರನ್ ಗಳಿಂದ ಗೆಲ್ಲುವ ಮೂಲಕ ಬಾಂಗ್ಲಾದೇಶದ ವಿರುದ್ಧದ 2 ಪಂದ್ಯಗಳ ಸರಣಿಯನ್ನು ಭಾರತ ಕ್ಲೀನ್‍ಸ್ವೀಪ್ ಮಾಡಿಕೊಂಡಿದೆ.
2ನೇ ದಿನ 6 ವಿಕೆಟ್ ಕಳೆದುಕೊಂಡು 152 ರನ್ ಗಳಿಸಿದ್ದ ಬಾಂಗ್ಲಾ ಇಂದು ತನ್ನ ಖಾತೆಗೆ 4 ವಿಕೆಟ್‍ಗಳ ಸಹಾಯದಿಂದ 43 ರನ್ ಸೇರಿಸಿ 41.1 ಓವರ್ ಗಳಲ್ಲಿ 195 ರನ್‍ಗಳಿಗೆ ಆಲೌಟ್ ಆಯ್ತು.
Advertisement
9/78 from @ImIshant & it's all over in India's first-ever #PinkBallTest at Kolkata! ????
Here's Rudra Dalmia, Executive Director, @PaytmMall handing over a well-deserved Paytm Man of the Match to Ishant Sharma.#INDvBAN @BCCI pic.twitter.com/LvHUYxyTpa
— Paytm (@Paytm) November 24, 2019
Advertisement
ಎರಡನೇ ಇನ್ನಿಂಗ್ಸ್ ನಲ್ಲಿ ಇಶಾಂತ್ ಶರ್ಮಾ 4 ವಿಕೆಟ್ ಕಬಳಿಸಿದರೆ ಉಮೇಶ್ ಯಾದವ್ 5 ವಿಕೆಟ್ ಕಿತ್ತರು. ಈ ಪಂದ್ಯದಲ್ಲಿ 9 ವಿಕೆಟ್ ಕಿತ್ತ ಇಶಾಂತ್ ಶರ್ಮಾ ಪಂದ್ಯಶ್ರೇಷ್ಠ ಜೊತೆಗೆ ಸರಣಿ ಶ್ರೇಷ್ಠ ಪ್ರಶಸ್ತಿಗೂ ಭಾಜನರಾದರು. ಬಾಂಗ್ಲಾ ಪರ ಆಲ್ ಅಮಿನ್ ಹುಸೇನ್ 21 ರನ್ ಗಳಿಸಿದರು. 6 ಬಾಂಗ್ಲಾ ಆಟಗಾರರು ಎರಡನೇ ಇನ್ನಿಂಗ್ಸ್‍ನಲ್ಲಿ ಎರಡಂಕಿ ದಾಟುವಲ್ಲಿ ವಿಫಲರಾದರು.
Advertisement
ಎರಡು ಪಂದ್ಯವನ್ನು ಗೆದ್ದುಕೊಳ್ಳುವ ಮೂಲಕ ಭಾರತ ಐಸಿಸಿ ಟೆಸ್ಟ್ ಚಾಂಪಿಯನ್ ಶಿಪ್‍ನಲ್ಲಿ 360 ಅಂಕಗಳಿಸಿ ಮೊದಲ ಸ್ಥಾನದಲ್ಲೇ ಮುಂದುವರಿಯುತ್ತಿದೆ. ಟೆಸ್ಟ್ ಚಾಂಪಿಯನ್‍ಶಿಪ್ ಆರಂಭಗೊಂಡ ಬಳಿಕ ಇಲ್ಲಿಯವರೆಗೆ 7 ಪಂದ್ಯಗಳು ನಡೆದಿದ್ದು ವಿಂಡೀಸ್, ದಕ್ಷಿಣ ಆಫ್ರಿಕಾ, ಬಾಂಗ್ಲಾ ತಂಡವನ್ನು ಸೋಲಿಸುವ ಮೂಲಕ ಸರಣಿಯನ್ನು ಗೆದ್ದುಕೊಂಡಿದೆ. 6 ಪಂದ್ಯವಾಡಿ 3 ಪಂದ್ಯ ಗೆದ್ದು, 1 ಪಂದ್ಯ ಡ್ರಾ ಮಾಡಿಕೊಂಡಿರುವ ಆಸ್ಟ್ರೇಲಿಯಾ 116 ಅಂಕ ಗಳಿಸಿ ಎರಡನೇ ಸ್ಥಾನದಲ್ಲಿದೆ. ಇದನ್ನೂ ಓದಿ: ಭಾರತಕ್ಕೆ 360 ಅಂಕ, ಟೆಸ್ಟ್ ಚಾಂಪಿಯನ್‍ಶಿಪ್ ಪಾಯಿಂಟ್ ಲೆಕ್ಕಾಚಾರ ಹೇಗೆ?
Advertisement
And, that's a 4-wkt haul for @y_umesh ????????
Mushfiqur departs. #TeamIndia 2 wickets away from a historical victory.@Paytm | #INDvBAN pic.twitter.com/MQeX6ryLpb
— BCCI (@BCCI) November 24, 2019
ನ್ಯೂಜಿಲೆಂಡ್ ಮತ್ತು ಶ್ರೀಲಂಕಾ 6 ಅಂಕಗಳಿಸಿ ಕ್ರಮವಾಗಿ ಮೂರು ಮತ್ತು ನಾಲ್ಕನೇಯ ಸ್ಥಾನವನ್ನು ಹಂಚಿಕೊಂಡಿದೆ. ಇಂಗ್ಲೆಂಡ್ 56 ಅಂಕಗಳಿಸಿದೆ. ಪಾಕಿಸ್ತಾನ, ವೆಸ್ಟ್ ಇಂಡೀಸ್, ಬಾಂಗ್ಲಾದೇಶ, ದಕ್ಷಿಣ ಆಫ್ರಿಕಾ ಯಾವುದೇ ಪಂದ್ಯ ಜಯಗಳಿಸದ ಪರಿಣಾಮ ಶೂನ್ಯ ಅಂಕ ಸಂಪಾದಿಸಿದೆ.
ಸಂಕ್ಷಿಪ್ತ ಸ್ಕೋರ್
ಬಾಂಗ್ಲಾದೇಶ – 106/195
ಭಾರತ – 347/9 ಡಿಕ್ಲೇರ್